ಬೆಲೆ ಬಾಳುವಂತಹ ಬದುಕಿನಿಂದ ಮನುಷ್ಯನಿಗೆ ಬೆಲೆ ಬರುತ್ತದೆ : ಶ್ರೀ ಬಸವ ಪ್ರಭು ಸ್ವಾಮೀಜಿ

ಕೊರೊನಾ ವಾರಿಯರ್‌ಗೆ ಸನ್ಮಾನಿಸುವುದರೊಂದಿಗೆ ಜನ್ಮದಿನ ಆಚರಿಸಿಕೊಂಡ ಲೋಕಿಕೆರೆ ನಾಗರಾಜ್

ದಾವಣಗೆರೆ, ಆ.21- ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾದ ಲೋಕಿಕೆರೆ ನಾಗರಾಜ್ ಅವರು ನಗರದ ಕನ್ನಡ ಭವನದಲ್ಲಿ ನಿನ್ನೆ ಕೊರೊನಾ ವಾರಿಯರ್ಸ್‌ಗಳನ್ನು ಸನ್ಮಾನಿಸುವುದರ ಮೂಲಕ ತಮ್ಮ ಜನ್ಮ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡರು.

ಇದೇ ಸಂದರ್ಭದಲ್ಲಿ ಆಟೋರಿಕ್ಷಾ ಚಾಲಕರಿಗೆ ಸಮವಸ್ತ್ರಗಳನ್ನು ನೀಡಿದ ಲೋಕಿಕೆರೆ ನಾಗರಾಜ್ ಅವರು, ರಾಜಕೀಯದಲ್ಲಿ ಯಾವುದೇ ಸ್ಥಾನ-ಮಾನ ಸಿಗಲಿ, ಬಿಡಲಿ ಸಮಾಜ ಸೇವೆಯನ್ನು ನಿರಂತರವಾಗಿ ಮುಂದುವರಿಸಿಕೊಂಡು ಹೋಗುವುದಾಗಿ ಸ್ಪಷ್ಟಪಡಿಸಿದರು.

ರಾಜಕೀಯದಲ್ಲಿ ಮುಂದೆ ಬರುವುದು ಈಗಿನ ಕಾಲದಲ್ಲಿ ಕಷ್ಟವಾದರೂ, ಜನರ ಹತ್ತಿರವೇ ಇದ್ದು, ಸಮಸ್ಯೆಗಳನ್ನು ಪರಿಹರಿಸಿದರೆ ಮುಂದೊಂದು ದಿನ ರಾಜಕೀಯದಲ್ಲಿ ಉನ್ನತ ಸ್ಥಾನ ಪಡೆದೇ ಪಡೆಯುವುದಾಗಿ ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಎಸ್‌.ಎ. ರವೀಂದ್ರನಾಥ್‌ ಅವರು, ರಾಜಕೀಯ ದಲ್ಲಿ ಎತ್ತರವಾಗಿ ಬೆಳೆಯುವುದು ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಲೋಕಿಕೆರೆ ನಾಗರಾಜ್‌ ರವರು ಛಲದಿಂದ ರಾಜಕೀಯದಲ್ಲಿ ಬೆಳೆದು, ಉನ್ನತ ಸ್ಥಾನವನ್ನು ಗಳಿಸಲೆಂದು ಆಶಿಸಿದರು.

ಜಿಲ್ಲಾಧಿಕಾರಿ ಮಹಂತೇಶ್‌ ಬೀಳಗಿ ಅವರು, ಗಳಿಸಿದ ಜ್ಞಾನ, ಸಂಪತ್ತು ಮತ್ತು ಅನುಭವವನ್ನು ಸಮಾಜಕ್ಕೆ ಖರ್ಚು ಮಾಡುವುದರಲ್ಲಿ ಸಂತೋಷ ಸಿಗುತ್ತದೆ. ಈ ಹಿನ್ನೆಲೆಯಲ್ಲಿ ಲೋಕಿಕೆರೆ ನಾಗರಾಜ್‌ ಅವರ ಸಮಾಜಮುಖಿ ಸೇವೆ ಮುಂದುವರಿಯಲೆಂದು ಶುಭ ಕೋರಿದರು.

ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್‌ ಜಾಧವ್‌ ಅವರು, ದಕ್ಷಿಣ ವಿಧಾನಸಭಾ ಕ್ಷೇತ್ರವನ್ನು ತಾವು ಲೋಕಿಕೆರೆ ನಾಗರಾಜ್‌ ಅವರಿಗೆ ಬಿಟ್ಟುಕೊಡಲು ಸಿದ್ಧರಿರುವುದಾಗಿ ಘೋಷಿಸಿದರು.

ನಗರ ಪಾಲಿಕೆ ಮಹಾಪೌರರಾದ ಬಿ.ಜಿ. ಅಜಯಕುಮಾರ್‌ ಅವರು, ಯಾರ ಸಹಾಯವೂ ಇಲ್ಲದೇ ರಾಜಕೀಯ, ಸಮಾಜ ಸೇವೆಯಲ್ಲಿ ಮುಂದುವರಿಯುತ್ತಿರುವ ಲೋಕಿಕೆರೆ ನಾಗರಾಜ್‌ ಅವರಿಗೆ ರಾಜಕೀಯ ಸ್ಥಾನ-ಮಾನ ಸಿಕ್ಕೇ ಸಿಗುತ್ತದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ. ಹೆಚ್‌.ಎಸ್‌. ಮಂಜುನಾಥ್‌ ಕುರ್ಕಿ, ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್‌, ನಗರಪಾಲಿಕೆ ಸದಸ್ಯ ಎಸ್‌.ಟಿ. ವೀರೇಶ್‌ ಮತ್ತಿತರರು ಲೋಕಿಕೆರೆ ನಾಗರಾಜ್‌ ಅವರ ಸಮಾಜ ಸೇವೆಯನ್ನು ಮುಕ್ತ ಕಂಠದಿಂದ ಪ್ರಶಂಸಿಸಿದರು.

ಸಾನ್ನಿಧ್ಯ ವಹಿಸಿದ್ದ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಬೆಲೆ ಬಾಳುವಂತಹ ಬದುಕಿನಿಂದ ಮಾತ್ರ ಮನುಷ್ಯನಿಗೆ ಬೆಲೆ ಬರುತ್ತದೆ  ಎಂದು ಪ್ರತಿಪಾದಿಸಿದರು.

ಮುಖ್ಯ ಅತಿಥಿಗಳಾಗಿ ನಗರಪಾಲಿಕೆ ಉಪಮಹಾಪೌರರಾದ ಶ್ರೀಮತಿ ಸೌಮ್ಯ ನರೇಂದ್ರಕುಮಾರ್‌, ಸದಸ್ಯರಾದ ಶ್ರೀಮತಿ ಗೀತಾ ದಿಳ್ಯಪ್ಪ, ಶ್ರೀಮತಿ ಗೌರಮ್ಮ, ಶ್ರೀಮತಿ ಗಾಯತ್ರಮ್ಮ, ಮಂಜುನಾಯ್ಕ, ಆಯುಕ್ತ ವಿಶ್ವನಾಥ ಮುದಜ್ಜಿ, ಬಿಜೆಪಿ ಮುಖಂಡರಾದ ಬೇತೂರು ಸಂಗನಗೌಡ್ರು ಮತ್ತಿತರರು ಆಗಮಿಸಿದ್ದರು.

ವಿಜಯ ಪ್ರಾರ್ಥಿಸಿದರು. ಜಿಲ್ಲಾ ಶೋಷಿತ ವರ್ಗಗಳ ಒಕ್ಕೂಟದ ಅಧ್ಯಕ್ಷ ಬಾಡದ ಆನಂದರಾಜ್‌ ನಿರೂಪಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ದಿಳ್ಳೆಪ್ಪ ಸ್ವಾಗತಿಸಿದರು. ನರೇಂದ್ರ ವಂದಿಸಿದರು.

error: Content is protected !!