ಹರಪನಹಳ್ಳಿ ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಕೋರಿಶೆಟ್ಟಿ ಉಚ್ಚೆಂಗೆಪ್ಪ ಸಂತಸ
ಹರಪನಹಳ್ಳಿ, ಆ.21- ತಾಲ್ಲೂಕಿನಲ್ಲಿ ನೂತನವಾಗಿ ಏಕಲವ್ಯ ಸಂಘರ್ಷ ಸಮಿತಿ (ಇ.ಎಸ್.ಎಸ್) ಉದಯವಾಗುವ ಮೂಲಕ ವಾಲ್ಮೀಕಿ ನಾಯಕ ಸಮಾಜದ ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲೊಂದು ಹೊಸ ಮನ್ವಂತರಕ್ಕೆ ಮುನ್ನುಡಿ ಬರೆದಿದ್ದಾರೆ ಎಂದು ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಕೋರಿಶೆಟ್ಟಿ ಉಚ್ಚೆಂಗೆಪ್ಪ ಹೇಳಿದರು.
ಪಟ್ಟಣದ ವಾಲ್ಮೀಕಿ ಭವನದಲ್ಲಿ ನೂತನವಾಗಿ ಉದಯವಾಗಿರುವ ಏಕಲವ್ಯ ಸಂಘರ್ಷ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಎರಡನೇ ಅತಿದೊಡ್ಡ ಸಮಾಜವಾಗಿದ್ದರೂ ಸಹ ಆರ್ಥಿಕವಾಗಿ ಹಿಂದುಳಿದಿರುವುದರಿಂದ ಅನೇಕ ಪ್ರತಿಭಾವಂತ ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅಂತಹ ಬಡ ವಿದ್ಯಾರ್ಥಿಗಳಿಗೆ ನೀವೆಲ್ಲರೂ ಒಗ್ಗಾಟ್ಟಾಗಿ ಈ ಸಂಘದ ಮೂಲಕ ಶಿಕ್ಷಣ ಕೊಡಿಸಲು ಮುಂದಾಗಿರುವುದು ನಿಜಕ್ಕೂ ಸ್ವಾಗತಾರ್ಹ ಈ ಕಾರ್ಯಕ್ಕೆ ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಬೆಂಬಲ ಸದಾ ಇರುತ್ತದೆ ಎಂದರು.
ಈ ವೇಳೆ ವಾಲ್ಮೀಕಿ ನಾಯಕ ಸಮಾಜದ ಉಪಾಧ್ಯಕ್ಷ ಒಡ್ಡಿನ ದಾದಾಪುರದ ಶಿವಾನಂದ್, ಚಿಗಟೇರಿ ಹೋಬಳಿಯ ಸಂಘಟನಾ ಕಾರ್ಯದರ್ಶಿ ಜಿ.ಕೆ.ಬಸವರಾಜ್, ಸಾಮಾಜಿಕ ಜಾಲತಾಣದ ಕಾರ್ಯದರ್ಶಿ ಬಾಲೇನಹಳ್ಳಿ ಜಿ.ಕೆಂಚನಗೌಡ, ತಾಲ್ಲೂಕು ಬಿಜೆಪಿ ಎಸ್ಟಿ ಮೋರ್ಚಾ ಅಧ್ಯಕ್ಷ ಮನೋಜ್ ತಳವಾರ್ ನೀಲಗುಂದ, ಕೋಟೆ ಹಿತರಕ್ಷಣೆ ಸಮಿತಿ ಅಧ್ಯಕ್ಷ ಪಟ್ನಾಮದ ವೆಂಕಟೇಶ್, ನೀಲಗುಂದ ಹೋಬ ಳಿಯ ಸಂಘಟನಾ ಕಾರ್ಯದರ್ಶಿ ಮಾಳ್ಗಿ ತಿಮ್ಮೇಶ್ ಮುಖಂಡರಾದ ಅಲಮರಸೀಕೆರಿ ಗೋಣೆಪ್ಪ, ನಂದಿಬೇವೂರು ರಾಜಪ್ಪ, ಮಾರುತಿ ಮೈದೂರು ಮತ್ತಿತರರು ಉಪಸ್ಥಿತರಿದ್ದರು.
ಏಕಲವ್ಯ ಸಂಘರ್ಷ ಸಮಿತಿಯ ಅಧ್ಯಕ್ಷ ರಾಗಿ ಪಟ್ಟಣದ ರಾಯದುರ್ಗದ ಪ್ರಕಾಶ್ ಆಯ್ಕೆಯಾಗಿದ್ದು, ಉಪಾಧ್ಯಕ್ಷರುಗಳಾಗಿ ಮೈದೂರಿನ ಪರಶುರಾಮ್, ಅಲಮರಸೀ ಕೆರೆಯ ಟಿ.ಮಂಜುನಾಥ್, ಪ್ರಧಾನ ಕಾರ್ಯ ದರ್ಶಿಯಾಗಿ ರಂಗಾಪುರ ಕ್ಯಾಂಪ್‍ನ ತಳವಾರ ಶಿವರಾಜ, ಖಜಾಂಚಿಯಾಗಿ ಜಿ.ದಾದಾಪುರದ ಹರೀಶ್, ಸಂಘಟನಾ ಕಾರ್ಯದರ್ಶಿಗಳಾಗಿ ನೀಲಗುಂದದ ವೆಂಕಟೇಶ್, ಅರಸೀಕೆರೆ ಪ್ರದೀಪ್, ತಲುವಾಗಲು ಟಿ.ಮಂಜುನಾಥ್, ಹಲುವಾಗಲು ಎಸ್.ಬಿ.ಗಣೇಶ್, ಹರಪನಹಳ್ಳಿಯ ಜಿ.ವಿಜಯ್‍ಕುಮಾರ್, ಸಹ ಕಾರ್ಯದರ್ಶಿಗಳಾಗಿ ಕಣಿವಿಹಳ್ಳಿ ಎ.ಟಿ.ಶಿವರಾಜ್, ನಿಚ್ಚವ್ವನಹಳ್ಳಿ ಕಾಳಜ್ಜ, ಮತ್ತಿಹಳ್ಳಿ ಗಿರೀಶ್ ಆಯ್ಕೆಯಾಗಿದ್ದಾರೆ.