ಶ್ರಮವಹಿಸಿ ವಿದ್ಯಾಭ್ಯಾಸ ಮಾಡಿದಾಗ ಯಶಸ್ಸು ಸಾಧ್ಯ : ಶಾಸಕ ರಾಮಪ್ಪ

ಸ್ವಗ್ರಾಮ ಗುತ್ತೂರಿನಲ್ಲಿ ಅಭಿಷೇಕ್‌ಗೆ ಸನ್ಮಾನ

ಹರಿಹರ, ಆ.19- ಶ್ರಮವಹಿಸಿ ವಿದ್ಯಾಭ್ಯಾಸವನ್ನು ಮಾಡಿದಾಗ ಯಶಸ್ಸು ಹುಡುಕಿಕೊಂಡು ಬರುತ್ತದೆ ಎಂದು ಶಾಸಕ ಎಸ್. ರಾಮಪ್ಪ ಹೇಳಿದರು.

ಗುತ್ತೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಕನ್ನಡ ಮಾಧ್ಯಮದಲ್ಲಿ ಬರೆದು ರಾಜ್ಯಕ್ಕೇ ಪ್ರಥಮ ಸ್ಥಾನದಲ್ಲಿ ತೇರ್ಗಡೆಯಾದ ಎಂ.ಕೆ.ಇ.ಟಿ ಪ್ರೌಢಶಾಲಾ ವಿದ್ಯಾರ್ಥಿ ಎಂ. ಅಭಿಷೇಕ್ ಗೆ ಗುತ್ತೂರಿನ ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಗ್ರಾಮಸ್ಥರ ವತಿಯಿಂದ  ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅಭಿಷೇಕ್‌ನನ್ನು ಶಾಸಕರು ಸನ್ಮಾನಿಸಿ ಗೌರವಿಸಿದರು.

ಸಾಧನೆ ಮಾಡುವುದು ಸುಲಭದ ಕಾರ್ಯವಲ್ಲ. ಮನುಷ್ಯನ ಏಕಾಗ್ರತೆ ಮತ್ತು ಸತತವಾದ ಪರಿಶ್ರಮದಿಂದ ಮಾತ್ರ ಸಮಾಜ, ಗ್ರಾಮದವರು, ಹಾಗೂ ಕುಟುಂಬ ದವರು ಮೆಚ್ಚುವಂತೆ ಸಾಧನೆ ಮಾಡಬಹುದು ಎಂದು ಶಾಸಕರು ಹೇಳಿದರು. 

ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಪರಮೇಶ್ವರಪ್ಪ ಮಾತ ನಾಡಿ, ತಾಳ್ಮೆಯಿಂದ ಕೆತ್ತಿಸಿಕೊಂಡ ಕಲ್ಲು ಮೂರ್ತಿ ಯಾಗಿ ಎಲ್ಲರ ಪೂಜೆಗೆ ಸಲ್ಲುತ್ತದೆ. ಸಾಧನೆ ಮಾಡಬೇಕಾದರೆ ತಾಳ್ಮೆಯಿಂದ ವರ್ತಿಸು ವುದು ಅಷ್ಟೇ ಮುಖ್ಯ ಎಂದು ಅಭಿಪ್ರಾಯಪಟ್ಟರು.

ಇಂದಿನ ಕಾಲ ಘಟ್ಟದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಭಾಷೆಯಲ್ಲಿ ಓದುವ ವ್ಯಾಮೋಹ ಇರುತ್ತದೆ. ಆದರೆ, ಈ ವಿದ್ಯಾರ್ಥಿ ಕನ್ನಡದಲ್ಲಿ ವ್ಯಾಸಂಗ ಮಾಡಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿ ಕನ್ನಡ ಭಾಷೆಯಲ್ಲಿ ಓದುವಂತ ವಿದ್ಯಾರ್ಥಿಗಳಿಗೆ ಮಾದರಿ ವಿದ್ಯಾರ್ಥಿಯಾಗಿ ಹೊರಹೊಮ್ಮಿರು ವುದು ಸಂತಸದ ಸಂಗತಿ ಎಂದರು.

ಬಿಇಓ ಯು. ಬಸವರಾಜಪ್ಪ ಮಾತ ನಾಡಿ, ಹಣದಿಂದ ಸಾಧನೆ ಮಾಡುವುದು ಸಾಧನೆ ಅಲ್ಲ. ಜ್ಞಾನದ ಶಕ್ತಿಯಿಂದ ಸಾಧನೆ ಮಾಡುವುದು ದೊಡ್ಡ ಸಾಧನೆ. ಪರಿಶ್ರಮ, ಶ್ರದ್ಧೆ, ತಾಳ್ಮೆ, ಚಾತುರ್ಯ, ಸೌಜನ್ಯ ಇವುಗಳು ಇದ್ದರೆ ಸಮಾಜ ಗೌರವಿಸುವಂತ ಸಾಧನೆ ಮಾಡಬಹುದು  ಎಂದು ಪ್ರತಿಪಾದಿಸಿದರು. 

ಮಾರ್ಗದರ್ಶನ ನೀಡಿದ ಶಿಕ್ಷಕಿ ಗೀತಾ, ತಾಯಿ ನೇತ್ರಾವತಿ ತಂದೆ ಮಂಜುನಾಥ್ ಅವರ ಶ್ರಮಕ್ಕೆ ಶ್ಲಾಘಿಸಿದರು. ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ  ಅಭಿಷೇಕ್ ಹಾಗೂ ಶಾಲೆಯ ವಿದ್ಯಾರ್ಥಿನಿ ಪ್ರಿಯದರ್ಶಿನಿ ಶೇ 94 ರಷ್ಟು ಅಂಕಗಳನ್ನು ಪಡೆದಿರುವುದಕ್ಕೆ ಸನ್ಮಾನ ಮಾಡಿ ಗೌರವಿಸಲಾಯಿತು.

ವಿಜಯಮಹಾಂತೇಶ್, ಬಸವಲಿಂಗಪ್ಪ ಗೌಡ್ರು, ಎಸ್.ಡಿ.ಎಂ.ಸಿ. ಅಧ್ಯಕ್ಷ ಉಮೇಶ್, ಕರಿಬಸಪ್ಪ, ಕೊಟ್ರೇಶ್ ಕುಲಕರ್ಣಿ, ಶಿವಮೂರ್ತಿ ತೆಲಗಿ, ಮುಖ್ಯ ಶಿಕ್ಷಕ ಶಿವಮೂರ್ತಿ, ಶಿಕ್ಷಕಿ ಶ್ರೀದೇವಿ,     ಶಿಕ್ಷಕ ಪ್ರತೀಶ್ ಇನ್ನಿತರರಿದ್ದರು.

error: Content is protected !!