ಗಣೇಶೋತ್ಸವ, ಮೊಹರಂ ಹಬ್ಬಗಳ ಆಚರಣೆ ಸರಳವಾಗಿರಲಿ

ಮಲೇಬೆನ್ನೂರಿನ ಸಭೆಯಲ್ಲಿ ಡಿವೈಎಸ್ಪಿ ತಾಮ್ರಧ್ವಜ

ಮಲೇಬೆನ್ನೂರು, ಆ.18- ಗಣೇಶೋತ್ಸವ ಹಾಗೂ ಮೊಹರಂ ಹಬ್ಬವನ್ನು ಸರ್ಕಾರದ ಮಾರ್ಗಸೂಚಿಯಂತೆ ಸರಳ ಹಾಗೂ ಶಾಂತಿಯುತವಾಗಿ ಆಚರಿಸಿ ಎಂದು ಗ್ರಾಮಾಂತರ ಡಿವೈಎಸ್ಪಿ ನರಸಿಂಹ ವಿ. ತಾಮ್ರಧ್ವಜ ಮನವಿ ಮಾಡಿದರು. ಇಲ್ಲಿನ ವಿವಿಧ ಮಸೀದಿಗಳಿಗೆ ಮತ್ತು ಗಣೇಶನನ್ನು ಪ್ರತಿಷ್ಠಾಪಿಸುವ ಸ್ಥಳಗಳಿಗೆ ಭೇಟಿ ನೀಡಿ, ಕೊರೊನಾ ವೈರಸ್‌ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಬ್ಬಗಳ ಆಚರಣೆಗೆ ಸರ್ಕಾರ ವಿಧಿಸಿರುವ ನಿಬಂಧನೆಗಳ ಕುರಿತಂತೆ ಇಂದಿಲ್ಲಿ ತಿಳಿಸಿದರು.

20 ಕ್ಕೆ ಹೆಚ್ಚು ಜನ ಸೇರದಂತೆ ಹಬ್ಬವನ್ನು ಸರಳವಾಗಿ ಆಚರಿಸಿ, ಪಿಒಪಿ  ಗಣೇಶ ಸ್ಥಾಪನೆಗೆ ಮತ್ತು ಮೆರವಣಿಗೆ, ಡಿಜೆಗೆ ಅವಕಾಶ ಇಲ್ಲ ಎಂದು ನರಸಿಂಹ ತಾಮ್ರಧ್ವಜ ಸ್ಪಷ್ಟಪಡಿಸಿದರು.

ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಪಟ್ಟಣದಲ್ಲಿ ಸಾರ್ವಜನಿಕ ಮೊಹರಂ ಆಚರಣೆ ಇರುವುದಿಲ್ಲ ಎಂದು ಗಫಾರ್‌ಖಾನ್‌, ಆಶಿಕ್ ಅಲಿ, ಶೌಕತ್‌ ಅಲಿ, ಸೈಯದ್‌ ಅಕ್ರಂ, ಜಿಯಾ ವುಲ್ಲಾ, ಮಹಮ್ಮದ್‌ ಹುಸೇನ್ ಹೇಳಿದರು.

ಪಿಎಸ್‌ಐ ವೀರಬಸಪ್ಪ ಪಾಳೇಗಾರ್‌ ನಾಗ ರಾಜ್, ಸುನೀಲ್ ಮಣಿ, ಅಶೋಕ್‌, ಬಸವ ರಾಜ್‌, ಕಾರ್ತಿಕ್ ಮತ್ತಿತರರು ಈ ವೇಳೆ ಹಾಜರಿದ್ದರು.

error: Content is protected !!