ಕಾರ್ಪೊರೇಟ್ ಕಂಪನಿಗಳೇ ಕೃಷಿ ಬಿಟ್ಟು ತೊಲಗಿ ಪ್ರತಿಭಟನೆ

ಹೊನ್ನಾಳಿ, ಆ. 18- ರಾಜ್ಯ ಸರ್ಕಾರ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ಮಾಡಿರುವುದು, ರೈತರನ್ನು ಒಕ್ಕಲುತನದಿಂದ ಹೊರಹಾಕಿ ಖಾಸಗಿ ಕಾರ್ಪೋರೇಟ್ ಕಂಪನಿಗಳು, ಬಂಡವಾಳದಾರ ರಿಗೆ ಕೃಷಿ ಭೂಮಿ ವರ್ಗಾಯಿಸುವ ಕುತಂತ್ರವಾಗಿದೆ ಎಂದು ತಾಲ್ಲೂಕು ರೈತ ಸಂಘದ ಕಾರ್ಯದರ್ಶಿ ಶುಂಠಿ ಗಣೇಶಪ್ಪ ಹೇಳಿದರು.

ಅವರು ಈಚೆಗೆ ರೈತ ಸಂಘದ ವತಿಯಿಂದ 1942 ಆಗಸ್ಟ್‌ರ ಘೋಷಣೆ ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಎಂಬಂತೆ ಕಾರ್ಪೋರೇಟ್ ಕಂಪನಿಗಳೇ ಕೃಷಿ ಬಿಟ್ಟು ತೊಲಗಿ ಎಂಬ ಘೋಷಣೆಯೊಂದಿಗೆ ತಾಲ್ಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ಮಾತನಾಡಿದರು.

ಪ್ರಸ್ತುತ ಭೂ ಸುಧಾರಣೆ ಕಾಯ್ದೆಯಿಂದ ರಾಜ್ಯದಲ್ಲಿ ಸುಮಾರು ಶೇ. 80ರಷ್ಟು ಸಣ್ಣ ರೈತರು ಮೊದಲ ಹಂತದಲ್ಲಿ ಕೃಷಿ ಕ್ಷೇತ್ರದಿಂದ ಕಣ್ಮರೆಯಾ ಗುತ್ತಾರೆ. ಎರಡನೇ ಹಂತದಲ್ಲಿ ರೈತರ ಭೂಮಿ ಯನ್ನು ಕರಾರು ಪತ್ರಗಳ ಮೂಲಕ ಕಾರ್ಪೋ ರೇಟ್ ಕಂಪನಿಗಳು ಒತ್ತೆಯಿಟ್ಟುಕೊಳ್ಳುತ್ತಿವೆ. ಇದ ರಿಂದ ರೈತರು  ತಮ್ಮ ಭೂಮಿಯನ್ನು ಉಳಿಸಿಕೊ ಳ್ಳುವ ಅನಿವಾರ್ಯತೆ ಸೃಷ್ಠಿಯಾಗುತ್ತಿದೆ ಎಂದು ಹೇಳಿದರು.

ಇದೇ ರೀತಿ ವಿದ್ಯುಚ್ಛಕ್ತಿ ಕಾಯ್ದೆ, ಭೂ ಸ್ವಾಧೀನ ಕಾಯ್ದೆಗಳಿಂದಾಗಿ ಇಡೀ ರೈತರ ಸಮೂಹ ಅನೇಕ ತೊಂದರೆಗಳಿಗೆ ಒಳಪಡುವ ಪರಿಸ್ಥಿತಿ ಇದ್ದು, ಈ ಬಗ್ಗೆ ರೈತ ಸಮುದಾಯ ಎಚ್ಚೆತ್ತುಕೊಳ್ಳಬೇಕಿದೆ ಎಂದು ಹೇಳಿದರು.

ರೈತ ಸಂಘ ಸರ್ಕಾರದ ಈ ಧೋರಣೆಗಳನ್ನು ಖಂಡಿಸಿ, ಪ್ರತಿಭಟನೆ ಮಾಡಿ ಸರ್ಕಾರಕ್ಕೆ ತಹಶೀಲ್ದಾರ್ ತುಷಾರ್ ಬಿ. ಹೊಸೂರು ಅವರ ಮೂಲಕ ಮನವಿ ಪತ್ರ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ರೈತ ಸಂಘದ ಅಧ್ಯಕ್ಷ ಪ್ರಭಾಕರ ಡಿ.ಎಂ., ಕಾರ್ಯಾಧ್ಯಕ್ಷ ಉಮೇಶಪ್ಪ, ಉಪಾಧ್ಯಕ್ಷ ಉಮೇಶ್ ಬೇಲಿಮಲ್ಲೂರು, ಕೆ. ನಿಂಗಪ್ಪ, ಹಸಿರು ಸೇನೆ ಅಧ್ಯಕ್ಷ ನಿರಂಜನ ಸೊರಟೂರು, ರೈತ ಮುಖಂಡರಾದ ಮಹಾದೇವಪ್ಪ, ಮಾಸಡಿ ರಾಜಪ್ಪ, ಎಸ್. ಬಸವರಾಜಪ್ಪ, ರಾಜಪ್ಪ ಸೇರಿದಂತೆ ಅನೇಕ ರೈತ ಮುಖಂಡರು ಭಾಗವಹಿಸಿದ್ದರು.

error: Content is protected !!