ಮಲೇಬೆನ್ನೂರು, ಆ.15- ಪಟ್ಟಣದಲ್ಲಿ ಶನಿವಾರ ತಲಾ 1 ಮತ್ತು ಕೆ.ಎನ್.ಹಳ್ಳಿ, ಕುಂಬಳೂರಿನಲ್ಲಿ ತಲಾ 1 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ.
ಪಟ್ಟಣದಲ್ಲಿ ಸಂತೆ ಮೈದಾನದ ಪಕ್ಕದಲ್ಲಿ 31 ವರ್ಷದ ಬಾಣಂತಿಗೆ ಮತ್ತು ಒಂದೂವರೆ ತಿಂಗಳ ಹಸು ಗೂರಿಗೂ ಸೋಂಕು ತಗುಲಿದೆ. ಎಸ್ಬಿಕೆಎಂಎಸ್ ಶಾಲೆ ಹಿಂಭಾಗ 18 ವರ್ಷದ ಯುವಕನಿಗೆ, ಕಲ್ಲೇಶ್ವರ ದೇವ ಸ್ಥಾನದ ಹತ್ತಿರ 48 ವರ್ಷದ ಮಹಿಳೆಗೆ, ಕನಕದಾಸ ರಸ್ತೆ ಯಲ್ಲಿ 27 ವರ್ಷದ ಯುವಕನಿಗೆ, ನಿಟ್ಟೂರು ರಸ್ತೆಯಲ್ಲಿ 58 ವರ್ಷದ ಮಹಿಳೆಗೆ, ಬಸವೇಶ್ವರ ಬಡಾವಣೆಯಲ್ಲಿ 46 ವರ್ಷದ ವ್ಯಕ್ತಿ ಕೊರೊನಾ ಪಾಸಿಟಿವ್ ಬಂದಿದೆ.
ಕೆ.ಎನ್.ಹಳ್ಳಿಯಲ್ಲಿ 28 ವರ್ಷದ ಮಹಿಳೆಗೆ ಮತ್ತು ಕುಂಬಳೂರಿನಲ್ಲಿ 65 ವರ್ಷದ ವ್ಯಕ್ತಿಗೆ ಸೋಂಕು ಕಾಣಿಸಿಕೊಂಡಿದೆ.
75 ಟೆಸ್ಟ್ : ಪಟ್ಟಣದಲ್ಲಿ ಶನಿವಾರ 75 ಜನರಿಗೆ ಕೊರೊನಾ ಟೆಸ್ಟ್ ಮಾಡಲಾಗಿದೆ. ಉಪತಹಶೀಲ್ದಾರ್ ಆರ್.ರವಿ, ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ್, ವೈದ್ಯಾಧಿಕಾರಿ ಡಾ.ಲಕ್ಷ್ಮಿದೇವಿ ಅವರು ವಯಸ್ಸಾದವರ ಮತ್ತು ರೋಗ ಲಕ್ಷಣ ಇರುವವರ ಮನವೊಲಿಸಿ, ರಾಪಿಡ್ ಟೆಸ್ಟ್ ಮಾಡಿಸಿದರು.
ಕಿಟ್ ಕೊರತೆ : ಮೇಲಾಧಿಕಾರಿಗಳು ರಾಪಿಡ್ ಟೆಸ್ಟ್ ಹೆಚ್ಚು ಹೆಚ್ಚು ಮಾಡಿಸಿ ಎಂದು ಹೇಳುತ್ತಾರೆ. ಆದರೆ, ಆರೋಗ್ಯ ಕೇಂದ್ರಕ್ಕೆ ರಾಪಿಡ್ ಟೆಸ್ಟ್ ಕಿಟ್ಗಳ ಕೊರತೆ ಇದೆ ಎಂದು ಹೇಳಲಾಗಿದೆ.