ಜಗಳೂರು, ಡಿ.28- ಪಟ್ಟಣ ಪಂಚಾಯಿತಿಯನ್ನು ಮೇಲ್ದರ್ಜೆಗೇ ರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಹಾಗೂ ಪಟ್ಟಣದ ಅಭಿವೃದ್ದಿಗಾಗಿ ಹೆಚ್ಚಿನ ಅನು ದಾನ ತರಲು ಮುಖ್ಯಮಂತ್ರಿ ಯಡಿ ಯೂರಪ್ಪ ರವರ ಬಳಿ ನಿಯೋಗ ತೆರಳ ಲಾಗುವುದು ಎಂದು ವಾಲ್ಮೀಕಿ ಅಭಿ ವೃದ್ಧಿ ನಿಗಮದ ಅಧ್ಯಕ್ಷರೂ ಆದ ಶಾಸಕ ಎಸ್.ವಿ. ರಾಮಚಂದ್ರ ಹೇಳಿದರು.
ಇಲ್ಲಿನ ಪಟ್ಟಣ ಪಂಚಾಯಿತಿ ಕೌನ್ಸಿಲ್ ಸಭಾಂಗಣದಲ್ಲಿ ನೂತನ ಅಧ್ಯಕ್ಷ ಆರ್.ತಿಪ್ಪೇಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಥಮ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ನೂತನ ಸದಸ್ಯರಿಗೆ ಶುಭ ಕೋರಿ ಅಭಿವೃದ್ಧಿ ಬಗ್ಗೆ ಮಾತನಾಡಿದರು.
ಪಟ್ಟಣದ ನೆರೆಹೊರೆಯಲ್ಲಿನ 8ರಿಂದ 10 ಹಳ್ಳಿಗಳನ್ನೊಳಗೊಂಡಂತೆ ಪಟ್ಟಣ ಪಂಚಾಯಿತಿ ಮೇಲ್ದರ್ಜೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು. 45 ಕೋಟಿ ರೂ. ವೆಚ್ಚದ ಒಳಚರಂಡಿ ನಿರ್ಮಾಣ ಮಂಜೂರಾತಿಯಾಗಿ ಡಿಪಿಆರ್ ಟೆಂಡರ್ ಪ್ರಕ್ರಿಯೆಯಲ್ಲಿದೆ. ಶೀಘ್ರ ಕಾಮಗಾರಿ ಕೈಗೊಳ್ಳಲಾಗುವುದು.
ಐತಿಹಾಸಿಕ ಕೆರೆಗೆ ನೀರು ಬರುವ ಹಿನ್ನೆಲೆಯಲ್ಲಿ ಸ್ವಚ್ಛಭಾರತ್ ಮಿಷನ್ ಅಡಿಯಲ್ಲಿ ಪಟ್ಟಣದಿಂದ ಬರುವ ಚರಂಡಿ ನೀರನ್ನು ಪ್ರತೇಕವಾಗಿ ಸಂಗ್ರಹಿಸಿ ಸಂಸ್ಕ ರಿಸಲಾಗುವುದು. ಕೆರೆ ನೀರನ್ನು ಶುದ್ಧಗೊಳಿಸಿ ಕುಡಿಯುವ ನೀರು ಪೂರೈಸುವ ಘಟಕವನ್ನು ಸ್ಥಾಪಿಸಲಾಗುವುದು. ಪಟ್ಟಣದಲ್ಲಿ ರಸ್ತೆ ಅಭಿವೃದ್ಧಿಗೊಳಿಸಿ ಸುಂದರ ವನ್ನಾಗಿಸಲು ಪಕ್ಷಾತೀತವಾಗಿ ಸಹಕರಿಸಬೇಕು ಎಂದರು.
ಪಟ್ಟಣದಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿದ್ದು ರಸ್ತೆ ಮಾರ್ಗಮಧ್ಯೆ ವಾಹನಗಳ ನಿಲುಗಡೆಯಿಂದ ಸಾರ್ವಜನಿಕರಿಗೆ ತೀವ್ರ ಅಡಚಣೆಯಾಗಿದೆ. ಈ ಬಗ್ಗೆ ಕ್ರಮ ಕೈಗೊಂಡು ಪ್ರಮುಖ ವೃತ್ತಗಳಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಸಂಚಾರಿ ನಿಮಯ ಉಲ್ಲಂಘಿಸಿದರೆ ನಿರ್ದಾಕ್ಷೀಣ್ಯ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದರು.
ತಾಲ್ಲೂಕಿನ ವ್ಯಾಸಗೊಂಡನಹಳ್ಳಿ ಹತ್ತಿರ ಕೈಗಾರಿಕಾ ಪ್ರದೇಶ ಅಭಿವೃದ್ದಿ ಪಡಿಸಲಾಗುವುದು. ಒಂದು ಸಾವಿರ ಎಕರೆ ಪ್ರದೇಶದಲ್ಲಿ ಎರಡು ಕಂಪನಿಗಳ ಜಂಟಿಯಾಗಿ ಜವಳಿ ಉದ್ಯಮ ಹಾಗೂ ವಿದ್ಯುತ್ ಘಟಕ ಆರಂಭಿಸಿ ಕನಿಷ್ಠ 5 ಸಾವಿರ ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸಲಾಗುವುದು ಎಂದರು.
ಕಾಮಗಾರಿ ಮಾಡದೆ ಬಾಕಿ ಉಳಿಸಿದ ಗುತ್ತಿಗೆದಾರರಿಗೆ ನೋಟಿಸ್ ಜಾರಿಗೊಳಿಸಿ, ಸ್ಪಂದಿಸದಿದ್ದರೆ ಟೆಂಡರ್ ರದ್ದುಪಡಿಸುವ ಬಗ್ಗೆ, ಗುತ್ತಿಗೆದಾರ ಬಿ.ಟಿ. ಕೃಷ್ಣಪ್ಪ ಅವರ ಕಾಮಗಾರಿಗಳು ಅಪೂರ್ಣವಾಗಿದ್ದು ಪೂರ್ಣಗೊಳಿಸದಿದ್ದಲ್ಲಿ ಇವರನ್ನು ಕಪ್ಪುಪಟ್ಟಿಗೆ ಸೇರಿಸಲು, ತರಕಾರಿ ಮಾರುಕಟ್ಟೆ ಮೇಲೆ ವಿಶಾಲ ಮಾರುಕಟ್ಟೆ ನಿರ್ಮಾಣಮಾಡುವ ಕುರಿತು ಅಂದಾಜು ತಯಾರಿಸುವುವ ಬಗ್ಗೆ ಸೇರಿದಂತೆ ಹಲವು ಚರ್ಚೆಗಳು ನಡೆದವು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಲಲಿತ ಶಿವಣ್ಣ, ಮುಖ್ಯಾಧಿಕಾರಿ ರಾಜು ಡಿ. ಬಣಕಾರ್, ಸಿಪಿಐ ಡಿ ದುರುಗಪ್ಪ, ಸದಸ್ಯರಾದ ದೇವರಾಜ್, ನವೀನ್ ಕುಮಾರ್, ಪಾಪಲಿಂಗಪ್ಪ, ಮಂಜಣ್ಣ, ಬಿಕೆ ರವಿ, ರಮೇಶ್, ವಿಶಾಲಾಕ್ಷಿ, ಲುಕ್ಮನ್ ಖಾನ್, ನಜರತ್ ಉನೀಸಾ, ರೇವಣ್ಣ. ಲೋಕಮ್ಮ, ಮಂಜಕ್ಕ, ಶಕೀಲ್, ನಿರ್ಮಲ, ನಾಮ ನಿರ್ದೇಶಿತ ಸದಸ್ಯರಾದ ಬಿ.ಪಿ. ಸುಬಾನ್, ಗಿರೀಶ್, ಸೇರಿದಂತೆ ಇತರರು ಉಪಸ್ಥಿತರಿದ್ದರು.