ಕ್ರೈಸ್ತ ಸಮುದಾಯದ ಕಷ್ಟ, ಸುಖಗಳಿಗೆ ಸ್ಪಂದನೆ: ಎಂ.ಪಿ.ಲತಾ

ಹರಪನಹಳ್ಳಿ, ಡಿ.26 – ಕೊರೊನಾ ಸಂಕಷ್ಟದಿಂದ ಸಾಕಷ್ಟು ಕಷ್ಟ ನಷ್ಟಗಳನ್ನು ಜನ ಎದುರಿಸುವಂತಾಗಿದೆ ಎಂದು ಹೇಳಿದ ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ್, ಈ ಸಮುದಾಯದ ಆಗು, ಹೋಗುಗಳಿಗೆ ಸ್ಪಂದಿಸುತ್ತೇನೆ ಎಂದರು.

ಹರಪನಹಳ್ಳಿ ಪಟ್ಟಣದ ಹೊಸಪೇಟೆ ರಸ್ತೆಯಲ್ಲಿರುವ ಚರ್ಚ್‍ನಲ್ಲಿ ಕ್ರಿಸ್‌ಮಸ್‌ ಹಬ್ಬದ ಅಂಗವಾಗಿ ಕ್ರಿಶ್ಚಿಯನ್ ಸಮುದಾಯದ ಆರಾಧ್ಯ ದೈವ ಜೀಸಸ್ ಅವತರಿಸಿದ ಪ್ರತೀಕವಾಗಿ ಅತ್ಯಂತ ಸಂಪ್ರದಾಯ ಬದ್ಧವಾಗಿ ವೈವಿಧ್ಯ ರೀತಿಯ ಅಲಂಕಾರ ಮಾಡಲಾಗಿತ್ತು. ಯೇಸು ಕ್ರಿಸ್ತನ ಮೂರ್ತಿಯ ಮುಂದೆ ಪ್ರಾರ್ಥನೆ ಸಲ್ಲಿಸುವ ಮೂಲಕ ಶಾಂತಿ, ನೆಮ್ಮದಿ ಕೋರಲಾಯಿತು. 

ನಂತರ ಕ್ರಿಸ್ತನ ಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ಚರ್ಚ್‍ನ ಪಾದರ್ ನೀಲ್ ಆರ್ಮ್‌ಸ್ಟ್ರಾಂಗ್ ಮಾತನಾಡಿದರು. ನಂತರ ಎಂ.ಪಿ.ಲತಾ ಮಲ್ಲಿಕಾರ್ಜುನ್ ಅವರು ಮಕ್ಕಳಿಗೆ ಪೆನ್ಸಿಲ್ ಹಾಗೂ ಸಿಹಿ ವಿತರಿಸಿದರು.

ತಾ.ಪಂ ಮಾಜಿ ಸದಸ್ಯೆ ಕಂಚಿಕೇರಿ ಜಯಲಕ್ಷ್ಮಿ, ಮುಖಂಡರಾದ ಉದಯಶಂಕರ್, ಶಮೀವುಲ್ಲಾ, ಫಿಲಿಪ್ಸ್ ದೊಡ್ಡಮನಿ, ಸೋಲ್ ದೊಡ್ಡಮನೆ, ಪುಷ್ಪ, ಸರಳಾ ಮತ್ತಿತರರು ಉಪಸ್ಥಿತರಿದ್ದರು.

error: Content is protected !!