ವಾರ್ಷಿಕ ಸಭೆಯಲ್ಲಿ ಬ್ಯಾಂಕಿನ ಅಧ್ಯಕ್ಷ ಸಿದ್ದವೀರಪ್ಪ ಹರ್ಷ
ಹರಿಹರ, ಡಿ.26- 2019-20ನೇ ಸಾಲಿನಲ್ಲಿ ಹರಿಹರ ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ 48,86,561 ಲಕ್ಷ ರೂ. ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಬೆಳ್ಳೂಡಿಯ ಎ. ಸಿದ್ದವೀರಪ್ಪ ಹೇಳಿದರು.
ಇಲ್ಲಿನ ಕಾಟ್ವೆ ಭವನದಲ್ಲಿ ಇಂದು ಹಮ್ಮಿಕೊಂಡಿದ್ದ 2019-20ನೇ ಸಾಲಿನ ಸರ್ವ ಸದಸ್ಯರ ಮಹಾಸಭೆಯ ಅಧ್ಯಕ್ಷತೆ ಅವರು ವಹಿಸಿ ಮಾತನಾಡಿ, ಸಾಲ ಪಡೆದ ರೈತರು ಸಾಲ ಮನ್ನಾ ಆಗುತ್ತದೆ ಎಂಬ ಗಾಳಿ ಸುದ್ಧಿಗೆ ಮನ್ನಣೆ ನೀಡದೆ ಸಕಾಲಕ್ಕೆ ಸಾಲ ಮರುಪಾವತಿ ಮಾಡಿ, ಬ್ಯಾಂಕಿನ ಅಭಿವೃದ್ಧಿಗೆ ಕೈ ಜೋಡಿಸಿ ಎಂದು ಮನವಿ ಮಾಡಿದರು.
ನಿರ್ದೇಶಕ ಕೆ.ಎಂ. ಬಸವರಾಜಪ್ಪ ಜಮಾ-ಖರ್ಚು ಓದಿದರು. ನಿರ್ದೇಶಕ ಜಿ. ಆಂಜನೇಯ ಆಸ್ತಿ ಮತ್ತು ಜವಾಬ್ದಾರಿ ತಃಖ್ತೆ ಓದಿದರೆ, ನಿರ್ದೇಶಕ ಸಿರಿಗೆರೆ ರಾಜಣ್ಣ ಅವರು ಸದಸ್ಯರ ಪ್ರಶ್ನೆಗಳಿಗೆ ಉತ್ತರ ನೀಡಿದರು.
ಬ್ಯಾಂಕಿನ ವ್ಯವಸ್ಥಾಪಕರಾದ ಶ್ರೀಮತಿ ನಿರ್ಮಲಾ ಸಭೆಯ ಆಹ್ವಾನ ಪತ್ರ ಓದಿ, ಹಿಂದಿನ ಸಭೆಯ ನಡವಳಿಕೆಗಳನ್ನು ಸಭೆಯ ಗಮನಕ್ಕೆ ತಂದರು. ನಿರ್ದೇಶಕ ಆರ್.ಸಿ. ಪಾಟೀಲ್ ಆಡಳಿತ ಮಂಡಳಿ ವರದಿ ಓದಿದರು. ನಿರ್ದೇಶಕರಾದ ರವೀಂದ್ರನಾಥ್, ಹೆಚ್. ಚಂದ್ರಪ್ಪ, ಪ್ರಸನ್ನ ಬಣಕಾರ್, ಧರ್ಮರಾಜ್, ಅಶೋಕ್, ಸುಧಾ ಹಾಜರಿದ್ದರು.