ಅಪರಾಧಗಳ ತಡೆ, ಅಪರಾಧಿಗಳ ಪತ್ತೆಗೆ ಗಡಿ ಅಪರಾಧ ಸಭೆ ಸಹಕಾರಿ : ಎಸ್ಪಿ ಹನುಮಂತರಾಯ

ದಾವಣಗೆರೆ, ಡಿ.26- ಜಿಲ್ಲಾ ಪೊಲೀಸ್ ದಾವಣಗೆರೆ ಗ್ರಾಮಾಂತರ ಉಪವಿಭಾಗದ ವತಿಯಿಂದ ನಗರದ ಬಾಪೂಜಿ ಎಂಬಿಎ ಕಾಲೇಜಿನ ಸಭಾಂಗಣದಲ್ಲಿ ಗಡಿ ಅಪರಾಧ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತ ರಾಯ ಅವರು ಸಭೆಯನ್ನು ಉದ್ಘಾಟಿಸಿ ಮಾತನಾ ಡುತ್ತಾ, ಗಡಿ ಅಪರಾಧ ಸಭೆ ನಡೆಸುವುದದರಿಂದ ಅಂತರ್ ಜಿಲ್ಲಾ ಅಪರಾಧಗಳ ಬಗ್ಗೆ ಹಾಗೂ ಅಪರಾಧಿಗಳ ಬಗ್ಗೆ, ಅಪರಾಧದ ವಿಧಾನಗಳ ಬಗ್ಗೆ ಮಾಹಿತಿಯನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವುದರಿಂದ ಅಪರಾಧಗಳನ್ನು ತಡೆಯಲು, ಅಪರಾಧಿಗಳನ್ನು ಪತ್ತೆ  ಹಚ್ಚಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಸಭೆಯಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಅಪರಾಧಗಳ ಮತ್ತು ಅಪರಾಧಿಗಳ ಬಗ್ಗೆ ಅನುಭವಗಳನ್ನು ಹಂಚಿಕೊಂಡರು.

ಸಭೆಯಲ್ಲಿ ಶಿಕಾರಿಪುರ ಎಎಸ್ಪಿ ಶ್ರೀನಿವಾಸಲು, ಹರಪನಹಳ್ಳಿ ಡಿವೈಎಸ್ಪಿ ಹಾಲಮೂರ್ತಿ ರಾವ್, ಡಿವೈಎಸ್ಪಿಗಳಾದ ನಾಗೇಶ್ ಐತಾಳ್, ನರಸಿಂಹ ವಿ. ತಾಮ್ರಧ್ವಜ, ಪ್ರಶಾಂತ್ ಮುನ್ನೋಳಿ, ಬಸವರಾಜ್ ಹಾಗೂ ಪೊಲೀಸ್ ನಿರೀಕ್ಷಕರು, ಪಿಎಸ್ ಐಗಳು, ಅಪರಾಧ ಸಿಬ್ಬಂದಿಗಳು ಇದ್ದರು.

error: Content is protected !!