ಹರಪನಹಳ್ಳಿ ಟಿಎಪಿಸಿಎಂಎಸ್‌ಗೆ 10 ಲಕ್ಷ ರೂ. ಲಾಭ

ಹರಪನಹಳ್ಳಿ, ಡಿ.23- 2019-20ನೇ ಸಾಲಿನಲ್ಲಿ ಸಂಘವು ರಸಗೊಬ್ಬರ ಹಾಗೂ ಪೆಟ್ರೋಲ್‌ ಬಂಕ್ ವ್ಯವಹಾರ ಲಾಭ ಹಾಗೂ ಬಾಡಿಗೆ, ಬಿಡಿಪಿ ಯೋಜನೆಯಡಿಯಲ್ಲಿ ನಿವ್ವಳ ಲಾಭ ರೂ. 10,11,876 ಗಳಿಸಿದೆ ಎಂದು ಅಧ್ಯಕ್ಷ ಪಿ.ಪ್ರೇಮಕುಮಾರ್ ತಿಳಿಸಿದ್ದಾರೆ.

ಪಟ್ಟಣದ ಟಿಎಪಿಸಿಎಂಎಸ್ ಸಂಘದ ಆವರಣದಲ್ಲಿ 2019-20ನೇ ಸಾಲಿನ 90ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂಘದ ಚಟುವಟಿಕೆ ವಾಣಿಜ್ಯ ಮಳಿಗೆ, ಪೆಟ್ರೋಲ್ ಬಂಕ್ ಹಾಗು ಇತರೆ ವ್ಯವಹಾರಗ ಳಿಂದ ಆದಾಯ ಗಳಿಸುತ್ತಿದೆ. ತಾಲ್ಲೂಕು ವ್ಯವಸಾ ಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ (ಟಿಎಪಿಸಿಎಂಎಸ್) ಕೇವಲ ಆದಾಯಕ್ಕೆ ಸೀಮತವಾಗದೇ ರೈತರ ಬೇಡಿಕೆ ಹಾಗೂ ಅವರ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಶ್ರಮಿಸುತ್ತಿದೆ. ಇನ್ನು ಮುಂದೆ ಇದರ ಜೊತೆಗೆ ರೈತರ ಉತ್ಪನ್ನಗಳಿಗೂ ಮಾರುಕಟ್ಟೆ ಒದಗಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ. ಶೀಘ್ರದಲ್ಲೇ ರೈತರು ಬೆಳೆದ ತೊಗರಿಯನ್ನು ಖರೀದಿಸಲು ಪ್ರಾರಂಭ ಮಾಡಲಿದ್ದೇವೆ. ಸರ್ಕಾರದಿಂದ ಲಭಿಸುವ ಅನುದಾನವನ್ನು ಪಡೆದು ರೈತರಿಗೆ ಅನುಕೂಲ ಮಾಡಿಕೊಡಲಾಗುವುದು. ಅನಿಯಂತ್ರಿತ ಆಹಾರ  ಧಾನ್ಯ, ಸಗಟು ನಿಯಂತ್ರಿತ ಪಡಿತರ ವ್ಯವಹಾರ ಗಳನ್ನು ಪ್ರಾರಂಭಿಸಲು ಪ್ರಯತ್ನಿಸಲಾಗುವುದು. ರೈತರು ಹಾಗು ಸಂಘದ ಸದಸ್ಯರು ಹೆಚ್ಚಿನ ಪ್ರಮಾ ಣದಲ್ಲಿ ರಸಗೊಬ್ಬರ ಖರೀದಿ ಮಾಡಿ ಸಂಘದ ಬೆಳವಣಿಗೆಗೆ ಸಹಕಾರ ನೀಡಬೇಕು ಎಂದರು.

ಉಪಾಧ್ಯಕ್ಷ ತಳವಾರ ಮಂಜಪ್ಪ, ನಿರ್ದೇಶಕರಾದ ಬಿ.ಕೆ.ಪ್ರಕಾಶ್, ಕುಲುಮಿ ಅಬ್ದುಲ್ಲಾ, ಗಿಡ್ಡಹಳ್ಳಿ ನಾಗರಾಜ್, ಎಲ್.ಬಿ.ಹಾಲೇಶ್ ನಾಯ್ಕ್, ಬಿ.ರೇವಣ್ಣಸಿದ್ದಪ್ಪ, ಹೆಚ್.ತಿಮ್ಮನಾಯ್ಕ್, ಹಾರಕನಾಳು ಪ್ರಕಾಶಗೌಡ, ಮಂಜುಳಾ ಗುರುಮೂರ್ತಿ, ಹೆಚ್.ನೇತ್ರಾವತಿ, ಎಂ.ವಿ.ಕೃಷ್ಣಕಾಂತ್, ಕೆ.ವಿರುಪಾಕ್ಷಪ್ಪ, ಹನುಮಂತಪ್ಪ, ವಿ.ಬಸವರಾಜಪ್ಪ, ಕಾರ್ಯದರ್ಶಿ ಹೆಚ್.ತಿರುಪತಿ, ಸಿಬ್ಬಂದಿ ಟಿ.ಲೋಕನಾಥ್, ಕೆ.ಬಿ. ಗಾಯಿತ್ರಿ, ಸಂಗೀತ ಕೆ., ಎಸ್.ಶಫಿ ಹಾಗೂ ಇತರರು ಭಾಗಹಿಸಿದ್ದರು.

error: Content is protected !!