ಹರಪನಹಳ್ಳಿ ತಾಲ್ಲೂಕಿನಲ್ಲಿ ಕಾಂಗ್ರೆಸ್‍ಗೆ ಉತ್ತಮ ವಾತಾವರಣ : ಸುಭಾಷ್‍ಚಂದ್ರ

ಹರಪನಹಳ್ಳಿ, ಡಿ.23 – ತಾಲ್ಲೂಕಿನಲ್ಲಿ ಕಾಂಗ್ರೆಸ್‍ಗೆ ಉತ್ತಮ ವಾತವಾರಣವಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ, ಕೂಲಿ ಹಾಗೂ ಜನ ವಿರೋಧಿ ಕಾಯ್ದೆಗಳ ವಿರುದ್ಧ ಮತದಾರರು ಈ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಟಿ.ಸುಭಾಷ್ ಚಂದ್ರ ಹೇಳಿದರು.

ಪಟ್ಟಣದ ಹಳೇ ಬಸ್‍ ನಿಲ್ದಾಣದ ಬಳಿ ಇರುವ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಅವರು, ತಾಲ್ಲೂಕಿನ ಗ್ರಾ.ಪಂ ಚುನಾವಣೆಗಳಲ್ಲಿ ಬಿಜೆಪಿ ಶಾಸಕರು 21 ಗ್ರಾ.ಪಂ.ಗಳ ಅಧಿಕಾರ ಹಿಡಿಯುತ್ತೇವೆ ಎನ್ನುವವರು 35 ಗ್ರಾ.ಪಂ ಗೆದ್ದು ಬರಲಿ. ಆದರೆ ಅಧಿಕಾರವಧಿಯಲ್ಲಿ ತಾಲ್ಲೂಕಿಗೆ ಎಷ್ಟು ಅನುದಾನ ತಂದು ಅಭಿವೃದ್ಧಿ ಮಾಡಿದ್ದಾರೆ ಎನ್ನುವುದನ್ನು ಜನತೆಗೆ ತಿಳಿಸಲಿ. ಕಳೆದ 2008ರ ಚುನಾವಣೆಗಳಲ್ಲಿ ಹಣದ ಹೊಳೆಯನ್ನೇ ಹರಿಸಿ, ಚುನಾವಣೆಯನ್ನು ಕಲುಷಿತಗೊಳಿಸಿದವರು ಇಂದು
ಗ್ರಾ.ಪಂ ಚುನಾವಣೆ ಪಕ್ಷರಹಿತ ಚುನಾವಣೆ ಆಗಿದ್ದರೂ ಸಹ ಬಿಜೆಪಿಗೆ ತಕ್ಕ ಪಾಠವನ್ನು ಮತದಾರರು ಕಲಿಸಲಿದ್ದಾರೆ ಎಂದರು. ಎಲ್ಲಾ ಪಕ್ಷಗಳಲ್ಲಿಯೂ ಗೊಂದಲ, ಭಿನ್ನಾಭಿಪ್ರಾ ಯಗಳಿದ್ದಂತೆ ಹರಪನಹಳ್ಳಿ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಾಭಿ ಪ್ರಾಯಗಳಿವೆ. ಮುಂದಿನ ವಿಧಾನಸಭಾ ಚುನಾವಣೆಯ ವೇಳೆಗೆ ಒಂದೇ ವೇದಿಕೆಯಲ್ಲಿ ನಡೆಯಲಿದೆ ಎಂದರು.

ಪುರಸಭೆ ಸದಸ್ಯ ಗೊಂಗಡಿ ನಾಗರಾಜ, ಮುಖಂಡರಾದ ಪುಷ್ಪ ದಿವಾಕರ್, ವಿಜಯ ದಿವಾಕರ್, ಕಡತಿ ತಿಪ್ಪೇಶ್, ಪ್ರಮೋದ್ ಕುಮಾರ್, ನವರಂಗ, ಚನ್ನವೀರಸ್ವಾಮಿ ಇತರರು ಇದ್ದರು.

error: Content is protected !!