ಹರಿಹರದ ತುಂಗಭದ್ರಾ ಸೊಸೈಟಿಗೆ 3 ಕೋಟಿ ರೂ. ನಿವ್ವಳ ಲಾಭ

ಸಂಘದ 36ನೇ ವಾರ್ಷಿಕ ಮಹಾಸಭೆಯಲ್ಲಿ ಲೋಕಸಭಾ ಸದಸ್ಯ ಜಿ.ಎಂ. ಸಿದ್ದೇಶ್ವರ ಸಂತಸ

ಹರಿಹರ, ಡಿ.19- ಹರಿಹರ ತುಂಗಭದ್ರಾ ಕೋ-ಆಪರೇಟಿವ್ ಸೊಸೈಟಿಯು 3 ಕೋಟಿ ಲಾಭ ಗಳಿಸುವ ಮೂಲಕ  ಜಿಲ್ಲೆಯ ಅತ್ಯುತ್ತಮ ಸಹಕಾರಿಯಾಗಿ ದಾಪುಗಾಲು ಹಾಕುತ್ತಿರುವ ಬಗ್ಗೆ ಲೋಕಸಭಾ ಸದಸ್ಯ ಜಿ.ಎಂ. ಸಿದ್ದೇಶ್ವರ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ನಗರದ ಹೆಚ್.ಕೆ. ವೀರಪ್ಪ ಕಲ್ಯಾಣ ಮಂಟಪದಲ್ಲಿ ಇಂದು ಏರ್ಪಾಡಾಗಿದ್ದ ತುಂಗಭದ್ರಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 36 ನೇ ವಾರ್ಷಿಕ ಮಹಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಂಸ್ಥೆ 36 ವರ್ಷಗಳ ಕಾಲ ಹೆಮ್ಮರವಾಗಿ ಬೆಳೆಯಲು ಸಂಸ್ಥಾಪಕ ಅಧ್ಯಕ್ಷ ಎಂ. ಶಿವಾನಂದಪ್ಪ ಮತ್ತು ಅಧ್ಯಕ್ಷ ಡಿ. ಹೇಮಂತರಾಜ್ ಒಳಗೊಂಡಂತೆ ಎಲ್ಲಾ ಸದಸ್ಯರ ಉತ್ತಮ ಸಹಕಾರ ಕಾರಣವಾಗಿದೆ.   ಸಂಘವು ತನ್ನ ಷೇರುದಾರರಿಗೆ ಶೇ. 16 ರಷ್ಟು ಡಿವಿ ಡೆಂಡ್ ನೀಡುತ್ತಿರುವುದು ಹೆಮ್ಮೆಯ ವಿಚಾರ ಎಂದರು.

ಸೊಸೈಟಿ ಅಧ್ಯಕ್ಷ ಡಿ. ಹೇಮಂತರಾಜ್ ಮಾತನಾಡಿ, ಈ ಸೊಸೈಟಿಯಲ್ಲಿ  5,341 ಸದಸ್ಯರಿದ್ದು, 2,714  ಸಹ ಸದಸ್ಯರಾಗಿರುತ್ತಾರೆ. 2,88,35,286 ರೂಪಾಯಿ ಷೇರು ಬಂಡವಾಳವನ್ನು ಹೊಂದಿ ಈ ಆರ್ಥಿಕ ವರ್ಷದಲ್ಲಿ 228 ಕೋಟಿ ಹೆಚ್ಚಿನ ವ್ಯವಹಾರ ದೊಂದಿಗೆ 65.28 ಕೋಟಿಗಳಷ್ಟು ದುಡಿಯುವ ಬಂಡವಾಳವನ್ನು ಹೊಂದಿ ಸುಮಾರು 3 ಕೋಟಿ ನಲವತ್ತು ಸಾವಿರ ರೂಪಾಯಿ ನಿವ್ವಳ ಲಾಭ ಗಳಿಸುವ ಮೂಲಕ ಕಳೆದ ಸಾಲಿನಂತೆ ಈ ವರ್ಷವೂ ಸಹ `ಎ’ ವರ್ಗದ ಶ್ರೇಣಿಯನ್ನು ಕಾಯ್ದುಕೊಂಡು ಪ್ರಗತಿಯತ್ತ ದಾಪುಗಾಲು ಹಾಕುತ್ತಿದೆ ಎಂದು ಹೇಳಿದರು.

ಸದಸ್ಯರ ಮರಣೋತ್ತರ ನಿಧಿಯಿಂದ ಮರಣ  ಹೊಂದಿದಂತಹ ಸದಸ್ಯರ ವಾರಸುದಾರರಿಗೆ 1,86,000 ರೂಪಾಯಿಗಳನ್ನು  39 ಜನರಿಗೆ ನೀಡಲಾಗಿದೆ. ಸಂಘದ ಠೇವಣಿಯನ್ನು 50 ಕೋಟಿಗೆ ಹೆಚ್ಚಿಸುವುದು. ಸುಸ್ತಿ ಬಾಕಿ ಪ್ರಮಾಣವನ್ನು ಶೇ 0.50 ಗಳಿಗಿಂತಲೂ ಕಡಿಮೆ ಮಾಡುವುದು ಸೇರಿದಂತೆ ಸದಸ್ಯರಿಗೆ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ನೀಡಲು ಪ್ರಯತ್ನವನ್ನು ಮಾಡಲಾಗುತ್ತದೆ ಎಂದರು. 

ವಾರ್ಷಿಕ ವರದಿಯನ್ನು ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಬಿ.ಜಿ. ಶರತ್ ಮತ್ತು ಸಿಬ್ಬಂದಿ ಎ.ಎನ್‌.  ರಾಧ ಓದಿದರು. ಲೆಕ್ಕಿಗರಾದ ಜಿ.ಎಂ. ಗಾಯತ್ರಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಆರ್.ಕೆ. ಮಂಜುನಾಥ್, ಸಂಸ್ಥಾಪಕ ಅಧ್ಯಕ್ಷರು ಹಾಗೂ ನಿರ್ದೇಶಕ ಎಂ. ಶಿವಾನಂದಪ್ಪ, ನಿರ್ದೇಶಕರಾದ ಜಿ.ಎಸ್. ಚನ್ನಬಸಪ್ಪ, ಸೈಯದ್ ಇಫ್ತಿಕಾರ್ ಅಹ್ಮದ್, ಬಿ. ಮಂಜಪ್ಪ, ಪಿ. ಶಿವಣ್ಣ, ಎಂ. ಹನುಮಂತಪ್ಪ, ಪ್ರಕಾಶ್ ದಿವಟೆ, ಕೆ.ಬಿ. ಮಂಜುನಾಥ್, ಸಂಜಯ್ ಮಂಜುನಾಥ್, ಎಲ್.ಪಿ. ಮಮತ, ಎ.ಬಿ. ಗಂಗಮ್ಮ, ವಿಶೇಷ ಆಹ್ವಾನಿತರಾದ ಎಂ.ಬಿ. ದೇವೇಂದ್ರಪ್ಪ, ವಿರುಪಾಕ್ಷಪ್ಪ, ವಿಶೇಷ ಅಧಿಕಾರಿ ಎಸ್. ರಂಗನಾಥ್  ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಜಿ. ಶರತ್, ಸಿಬ್ಬಂದಿ ವರ್ಗದವರಾದ ಜಿ.ಎಂ. ಗಾಯಿತ್ರಿ, ಎ.ಎನ್. ರಾಧ, ಕೆ. ಲಿಂಗರಾಜ್, ಡಿ.ಈ.  ಸಂತೋಷ್ ಕುಮಾರ್, ಬಿ.ಆರ್. ವಿನಾಯಕ.  ಹೆಚ್. ಕೃಷ್ಣ, ಪಿಗ್ಮಿ ಸಂಗ್ರಾಹಕರಾದ ಜಿ.ಎಂ. ಮೋಹನ್, ಜಿ. ಹಾಲೇಶಪ್ಪ, ಎಂ. ಬಿ. ಮಹೇಂದ್ರ, ಹೆಚ್.ಎ. ಆಂಜನೇಯ, ಹೆಚ್.ವೈ. ಮಾರುತಿ, ನಾಗರಾಜ್ ವಿ. ದೇವರಹಳ್ಳಿ, ಎಂ‌ ಹನುಮಂತಪ್ಪ, ಎನ್.ಎಸ್. ಉಮೇಶ್,  ಎಸ್. ಪ್ರಭಾಕರ್, ಜಿ.ಕೆ. ಸುರೇಶ್, ಕೆ.ಸಿ. ಶಿವಶಂಕರ್, ಕೆ.ಬಿ. ಶಿವಕುಮಾರ್, ಎನ್.ಸಿ. ವಿಜಯಕುಮಾರ್, ಎಸ್.ಎನ್. ಬಸವರಾಜ್, ಹೆಚ್.ಕೆ. ಮಂಜುನಾಥ್, ಹಾಲೇಶ್ ಬಾವಿಕಟ್ಟಿ  ಇನ್ನಿತರರಿದ್ದರು.

error: Content is protected !!