ಹಳೇ ಕುಂದುವಾಡದಲ್ಲಿ ಕೊರೊನಾ ವಾರಿಯರ್ಸ್‌ಗಳಿಗೆ ಗೌರವ

ದಾವಣಗೆರೆ, ಡಿ.17- ಒಬ್ಬರ ಮುಖ ಒಬ್ಬರು ನೋಡದಂತಹ ಸಂದರ್ಭದಲ್ಲಿ ಕೊರೊನಾ ಸೋಂಕಿತರ ಜೊತೆಗೆ ಇದ್ದು, ಚಿಕಿತ್ಸೆ ನೀಡಿ ಗುಣಪಡಿಸುತ್ತಿರುವ ಕೊರೊನಾ ವಾರಿಯರ್ಸ್‌ ಸೇವೆ ನಿಜಕ್ಕೂ ಅವಿಸ್ಮರಣೀಯ ಎಂದು ಮಹಾಪೌರ ಬಿ.ಜಿ.ಅಜಯ್ ಕುಮಾರ್ ಬಣ್ಣಿಸಿದರು.

ಹಳೇ ಕುಂದುವಾಡದಲ್ಲಿ ಮನಾ ಯುವ ಬ್ರಿಗೇಡ್ ಹಾಗೂ ಜನತಾ ರಕ್ಷಣಾ ವೇದಿಕೆ ಯಿಂದ ಹಮ್ಮಿಕೊಂಡಿದ್ದ ಥ್ಯಾಂಕ್ಯೂ ಕುಂದು ವಾಡ ಕೊರೊನಾ ವಾರಿಯರ್ಸ್‌ ಅಭಿನಂದನಾ ಸಮಾರಂಭದಲ್ಲಿ ವಾರಿಯರ್ಸ್‌ಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.

ಆಶಾ ಕಾರ್ಯಕರ್ತೆಯರು, ವೈದ್ಯರು, ಪೊಲೀಸರು ತಮ್ಮ ಪ್ರಾಣದ ಹಂಗು ತೊರೆದು ಸೇವೆ ಮಾಡಿದ್ದು ನಿಜಕ್ಕೂ ಸ್ಮರಣೀಯ. ನಾವೂ ಕೂಡ ಪಾಲಿಕೆಯಿಂದ ಕಿಟ್ ಸೇರಿದಂತೆ, ಇನ್ನಿತರೆ ಸೇವೆಗಳ ಮೂಲಕ ಜನರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಿದ್ದೇವೆ ಎಂದು ಮೇಯರ್ ತಿಳಿಸಿದರು.

ಹಳೇ ಕುಂದುವಾಡದಲ್ಲಿ ಕೊರೊನಾ ವಾರಿಯರ್ಸ್‌ಗಳಿಗೆ ಗೌರವ - Janathavani

ಸಮಾರಂಭದಲ್ಲಿ ಕುಂದುವಾಡದವರೇ ಆದ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಅಧಿಕಾರಿಗಳು, ನರ್ಸ್‌ಗಳು, ಪೊಲೀಸ್ ಹಾಗೂ  ಪತ್ರಕರ್ತರನ್ನು ಸನ್ಮಾನಿಸಿ, ಗೌರವಿಸಲಾಯಿತು. 

ಹಳೇ ಕುಂದುವಾಡದಲ್ಲಿ ಶಾಂತಿನಗರ, ಜನತಾ ಕ್ಯಾಂಪ್, ಗಡಿ ಕ್ಯಾಂಪ್ ರಸ್ತೆ ನಿರ್ಮಾಣ ಹಾಗೂ ಕುಂದುವಾಡ ರುದ್ರಭೂಮಿ ಅಭಿವೃದ್ದಿಪಡಿಸುವಂತೆ, ಜೊತೆಗೆ ಹೈವೇ ಬ್ರಿಡ್ಜ್ ನಿರ್ಮಾಣ, ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಸಬ್‌ಸೆಂಟರ್ ಹಳೇ ಕುಂದು ವಾಡದಲ್ಲಿ ಪಾಳು ಬಿದ್ದಿದ್ದು, ದುರಸ್ತಿ ಮಾಡಿಕೊಡಬೇಕು ಹಾಗೂ ಗ್ರಂಥಾಲಯ ಸ್ಥಾಪನೆ ಮಾಡಿಕೊಡಬೇಕು ಎಂದು ಮನಾ ಯುವ ಬ್ರಿಗೇಡ್‌ನಿಂದ ಮಹಾಪೌರರಾದ ಅಜಯ್ ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಮನಾ ಯುವ ಬ್ರಿಗೇಡ್ ಅಧ್ಯಕ್ಷ ಮಧು ನಾಗರಾಜ್ ಕುಂದುವಾಡ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಪಾಲಿಕೆ ಸದಸ್ಯರಾದ ಶಿಲ್ಪಾ ಜಯಪ್ರಕಾಶ್, ಮಾಜಿ ಮೇಯರ್ ಹೆಚ್.ಎನ್.ಗುರುನಾಥ್, ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್.ಜಿ.ಗಣೇಶಪ್ಪ, ಮಾಜಿ ಕಾರ್ಪೊರೇಟರ್ ಹೆಚ್.ತಿಪ್ಪಣ್ಣ, ಜಿಲ್ಲಾ ಫಾರ್ಮಸಿ ಅಧಿಕಾರಿ ಶಿವಾನಂದ ದಳವಾಯಿ, ಮುಖಂಡರುಗಳಾದ ಮಿಟ್ಲಕಟ್ಟೆ ಚಂದ್ರಪ್ಪ, ನರಸಪ್ಪರ ಶಿವಪ್ಪ, ಹನುಮಂತಪ್ಪ, ಜೆ.ಸಿ.ದೇವರಾಜ್, ಎನ್.ಟಿ.ನಾಗರಾಜ್, ಪತ್ರಕರ್ತ ಬಸವರಾಜ್ ದೊಡ್ಮನಿ, ರಾಜು ಕರೂರು ಸೇರಿದಂತೆ ಮತ್ತಿತರರಿದ್ದರು.

error: Content is protected !!