ರೋಗಗಳಿಗೆ ಹೆದರದೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು

ಹರಪನಹಳ್ಳಿ ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಮಂಜುಳಾ ಶಿವಪ್ಪ ಉಂಡಿ ಕಳಕಳಿ

ಹರಪನಹಳ್ಳಿ, ಡಿ.17- ಕೊರೊನಾ ಸೇರಿದಂತೆ ವಿವಿಧ ರೋಗಗಳಿಂದ ಜಗತ್ತಿನ ಶಾಂತಿ ಹದಗೆಟ್ಟಿದ್ದು, ಜನರು ಭಯಭೀತ ರಾಗದೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳ ಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಮಂಜುಳಾ ಶಿವಪ್ಪ ಉಂಡಿ ಅವರು ಕರೆ ನೀಡಿದರು.

ಪಟ್ಟಣದ ತಾಲ್ಲೂಕು ಪಂಚಾಯ್ತಿ ರಾಜೀವ್‌ಗಾಂಧಿ ಸಭಾಂಗಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರ ಯದಲ್ಲಿ ವಿಶ್ವ ಏಡ್ಸ್ ದಿನಾಚರಣೆ ಕುರಿತು ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಏಡ್ಸ್‌ ವೈರಸ್‍ನಿಂದ ಬರುವ ಕಾಯಿಲೆಯಾಗಿದ್ದು, ಅದರದೇ ಆದ ಗುಣಲಕ್ಷಣಗಳು ಇರುವುದಿಲ್ಲ. ಏಡ್ಸ್ ಬಂದನಂತರ ನಮ್ಮಲ್ಲಿರುವ ರೋಗ ನಿರೋಧಕ ಶಕ್ತಿ ಕುಂದಿಸುತ್ತದೆ. ಕನಿಷ್ಠ 4 ವರ್ಷಗಳಲ್ಲಿ ರೋಗದ ಲಕ್ಷಣಗಳು ಗೋಚರಿಸುತ್ತವೆ. ಅನೈತಿಕ ಸಂಪರ್ಕದಿಂದ, ಬಳಸಿದ ಸಿರಿಂಜ್‍ಗಳಿಂದ ಹರಡುವ ಸಾಧ್ಯತೆ ಇದ್ದು, ಗುಣ ಲಕ್ಷಣಗಳು ಕಂಡ ಕೂಡಲೇ ಸರಿಯಾದ ವೈದ್ಯಕೀಯ ಚಿಕಿತ್ಸೆ ಪಡೆದಲ್ಲಿ ಆಯುಷ್ಯವನ್ನು ಹೆಚ್ಚಿಸಿಕೊಳ್ಳಬಹುದೇ ಹೊರತು ಸಂಪೂರ್ಣ ಗುಣಮುಖರಾಗಲು ಸಾಧ್ಯವಿಲ್ಲ ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಿ. ಮಾಲುಂಬಿ ಮಾತನಾಡಿ, ಕೊರೊನಾ ರೋಗದ ಮುಂದೆ ಇತರೆ ರೋಗಗಳ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದೇವೆ.  ಏಡ್ಸ್ ರೋಗದ ವಿರುದ್ಧ ಸಾರ್ವಜನಿಕರಲ್ಲಿ ಮೌಢ್ಯತೆ ಹೋಗಲಾಡಿಸಿ ಅರಿವು ಮೂಡಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದ್ದು, ರೋಗದ ವಿರುದ್ಧ ಹೋರಾಟ ಮಾಡಬೇಕೇ ವಿನಃ ರೋಗಿಯ ವಿರುದ್ದ ಅಲ್ಲ, ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಆಗಬೇಕು ಎಂದರು.

ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾ ಧಿಕಾರಿ ಶಿವಕುಮಾರ, ಆಪ್ತ ಸಮಾಲೋಚಕ ಜಿ.ಎ. ಮಲ್ಲಿಕಾರ್ಜುನ ಮಾತನಾಡಿದರು. 

ಕಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಜಿ. ಶೋಭಾ, ವಕೀಲರ ಸಂಘದ ಅಧ್ಯಕ್ಷ ಕೆ. ಚಂದ್ರೇಗೌಡ್ರು, ವಕೀಲರಾದ ಡಿ.ಹನುಮಂತಪ್ಪ, ಬಾಗಳಿ ಎಸ್. ಮಂಜುನಾಥ, ಗುಡದಯ್ಯ, ಎ.ಎಲ್. ರೇವಣಸಿದ್ದಪ್ಪ ಇನ್ನಿತರರಿದ್ದರು.

error: Content is protected !!