ಜಿ.ಎಂ. ಸೌಹಾರ್ದ ಪತ್ತಿನ ಸಹಕಾರಿಯಿಂದ ಶೇ. 15ರಂತೆ ಲಾಭಾಂಶ

ದಾವಣಗೆರೆ,ಡಿ.15- ಪ್ರಗತಿಯಲ್ಲಿ ಮುನ್ನಡೆದಿರುವ ನಗರದ ಜಿ.ಎಂ.ಸೌಹಾರ್ದ ಪತ್ತಿನ ಸಹಕಾರಿ ನಿಯಮಿತವು ತನ್ನ ಸದಸ್ಯರಿಗೆ ಶೇ.15ರಂತೆ ಲಾಭಾಂಶ ನೀಡಲು ಸಂಘದ ಆಡಳಿತ ಮಂಡಳಿ ತೀರ್ಮಾನಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಜಿ.ಎಂ. ಪ್ರಸನ್ನ ಕುಮಾರ್ ತಿಳಿಸಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ನಿನ್ನೆ ನಡೆದ ಸಹಕಾರಿಯ 11ನೇ ವರ್ಷದ ಸರ್ವ ಸದಸ್ಯರ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಹಕಾರಿಯಲ್ಲಿ ನೆಫ್ಟ್‌/ಆರ್‌ಟಿಜಿಎಸ್‌, ಮೊಬೈಲ್ ಬ್ಯಾಂಕಿಂಗ್, ಎಸ್‌ಎಸ್‌ಎಸ್‌ ಅಲರ್ಟ್‌ ಮುಂತಾದ ಸೌಲಭ್ಯಗಳನ್ನು ಬರುವ ಜನವರಿ 1 ರಿಂದ ಜಾರಿಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ ಅವರು, ಸಹಕಾರಿಯ ತನ್ನ ಆರು ಶಾಖೆಗಳಲ್ಲಿ ಕೋರ್‌ ಬ್ಯಾಂಕಿಂಗ್‌ ಸಲ್ಯೂಷನ್ಸ್ ಒದಗಿಸಲು ಸಿದ್ಧತೆ ನಡೆದಿದೆ ಎಂದರು.

ಮುಂಬರುವ ವರ್ಷದಲ್ಲಿ ಬೆಂಗಳೂರು, ಸ್ಥಳೀಯ ವಿದ್ಯಾನಗರ, ಬ್ಯಾಡಗಿ ಪಟ್ಟಣದಲ್ಲಿ ಶಾಖೆಗಳನ್ನು ಪ್ರಾರಂಭಿಸುವ ಉದ್ದೇಶ ಹೊಂದಿರುವುದಾಗಿ ಪ್ರಸನ್ನ ಕುಮಾರ್ ಹೇಳಿದರು. 

 ಉಪಾಧ್ಯಕ್ಷ ಎಂ.ಆರ್. ಪ್ರಭುದೇವ್‌ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಹಕಾರಿಯು 31.3.2020ಕ್ಕೆ 6.09 ಕೋಟಿ ಷೇರು ಬಂಡವಾಳ, 7.96 ಕೋಟಿ ಸ್ವಂತ ನಿಧಿಗಳು, 121.74 ಕೋಟಿ ಠೇವಣಿಗಳನ್ನು ಹೊಂದಿದ್ದು, ದುಡಿಯುವ ಬಂಡವಾಳ 135.79 ಕೋಟಿ ಇರುತ್ತದೆ. 2019-20ನೇ ಸಾಲಿನಲ್ಲಿ ಸದಸ್ಯರಿಗೆ 93.69 ಕೋಟಿಗಳ ಸಾಲ ವಿತರಿಸಲಾಗಿದ್ದು, 2.31 ಕೋಟಿ ರೂ.ಗಳ ಲಾಭ ಗಳಿಸಿದೆ ಎಂದು ತಿಳಿಸಿದರು.

ಮಹಿಳಾ ನಿರ್ದೇಶಕರಾದ ಶ್ರೀಮತಿ ಪ್ರಮೀಳಾ ನಟರಾಜ್, ಲಾಭ ಹಂಚಿಕೆ ಪ್ರಸ್ತಾವನೆಯನ್ನು ಮಂಡಿಸಿ ದರು. ನಿರ್ದೇಶಕರುಗಳಾದ ಜಿ.ಎಸ್. ಅನಿತ್‌ಕುಮಾರ್‌, ಜಿ.ಆರ್‌. ನೀಲಕಂಠಪ್ಪ, ಕೆ.ಎಂ. ಗುರುಮೂರ್ತಿ ಅವರುಗಳು ವಿವಿಧ ವಿಷಯಗಳನ್ನು  ಮಂಡಿಸಿದರು.

ನಿರ್ದೇಶಕರುಗಳಾದ ಎ.ಎಸ್‌. ಗುರುಮೂರ್ತಿ,
ಸಿ. ಸಿದ್ದನಗೌಡ, ಶ್ರೀಮತಿ ವೈ.ಎಸ್‌. ಗಾಯತ್ರಿ, ಎ.ಬಿ. ರವೀಂದ್ರನಾಥ, ಕೆ.ಎಸ್. ವಿಜಯಕುಮಾರ್‌ ಸಭೆಯಲ್ಲಿ ಹಾಜರಿದ್ದರು.

ಸಹಕಾರಿಯ ಪ್ರಧಾನ ವ್ಯವಸ್ಥಾಪಕ ಎಸ್‌.ಎನ್. ಮಲ್ಲಪ್ಪ ಅವರು ಆಡಳಿತ ವರದಿಯನ್ನು ಸಭೆಗೆ ಮಂಡಿಸಿದರು. ಸಹಕಾರ ವಿಷಯ ಸಲಹೆಗಾರ ಎಸ್‌.ಸಿ. ಮಹಾರುದ್ರಪ್ಪ ಅವರು ಹೊಸ ಶಾಖೆಗಳ ಆರಂಭ ಕುರಿತು ವರದಿ ಮಂಡಿಸಿದರು.

ಶ್ರೀಮತಿ ಜಿ. ಯಶೋಧಮ್ಮ, ಕು. ಬಿ.ಎನ್. ಶೃತಿ ಮತ್ತು ಕು. ಜಿ.ಪಿ. ಕವಿತಾ ಪ್ರಾರ್ಥಿಸಿದರು.   ನಿರ್ದೇಶಕ ಎ.ಸಿ. ಬಸವರಾಜ್ ಸ್ವಾಗತಿಸಿದರು.ವೃತ್ತಿಪರ ನಿರ್ದೇಶಕ ಕೆ.ಎಂ. ಗುರುಮೂರ್ತಿ ವಂದಿಸಿದರು.

error: Content is protected !!