ಆರೋಗ್ಯ ಶಿಬಿರಗಳಿಂದ ಅಗ್ಗದ ದರದಲ್ಲಿ ಚಿಕಿತ್ಸೆ ಲಭ್ಯ

ಜಗಳೂರು, ಡಿ.14 – ಬರದ ನಾಡಿನ ಬಡ ಜನತೆಗೆ ಉಚಿತ ಆರೋಗ್ಯ ಶಿಬಿರಗಳ ಮೂಲಕ ಅಗ್ಗದ ದರದಲ್ಲಿ ಚಿಕಿತ್ಸೆ ಲಭ್ಯವಾಗಲಿದ್ದು, ಸದು ಪಯೋಗಪಡೆದುಕೊಳ್ಳುವಂತೆ ಎಐಟಿಯುಸಿ ಅಧ್ಯಕ್ಷ ಹೆಚ್.ಕೆ ರಾಮಚಂದ್ರಪ್ಪ ಸಲಹೆ ನೀಡಿದರು.

ಪಟ್ಟಣದ ನಿರ್ಮಲ ನರ್ಸಿಂಗ್ ಹೋಂ ಆವರಣದಲ್ಲಿ ದಾವಣಗೆರೆಯ ಸಿಟಿ ಸೆಂಟ್ರಲ್ ಆಸ್ಪತ್ರೆ ಹಾಗೂ ನಿರ್ಮಲ ಆಸ್ಪತ್ರೆ ಸಹಯೋಗದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಮಾಂ ಸಾಹೇಬರಂತಹ ನಿಸ್ವಾರ್ಥ ರಾಜಕಾರಣಿಯ ಜನ್ಮ ಭೂಮಿಯಾದ ಜಗಳೂರು ತಾಲ್ಲೂಕು ಇಂದಿಗೂ ಹಿಂದುಳಿದಿದ್ದು ಕೈಗಾರಿಕೆ, ನೀರಾವರಿ ಕೊರತೆಯಿಂದ ಕೂಲಿಕಾರ್ಮಿಕ ವರ್ಗ ದುಡಿಮೆಯ ಮೂಲಗಳಿಲ್ಲದೆ ಆರ್ಥಿಕ ಸಂಕಷ್ಟದಲ್ಲಿದ್ದಾರೆ ಎಂದರು.

ಪ್ರಸಕ್ತ ಸಾಲಿನಲ್ಲಿ ಕೊರೊನಾ ವೈರಾಣು ಆಕ್ರಮಣದಿಂದ ಆರೋಗ್ಯ ಶಿಬಿರ ವಿಳಂಬವಾ ಗಿದೆ. ದೇಶವ್ಯಾಪಿ ಕೊರೊನಾ ಮಹಾಮಾರಿಗೆ ತುತ್ತಾಗಿ ಸಾಕಷ್ಟು ಜನರು ಸಾವು – ನೋವುಗಳ ಜೊತೆ ಉದ್ಯೋಗ ಕಳೆದುಕೊಂಡಿದ್ದಾರೆ. ಸರ್ಕಾರ ಶೀಘ್ರದಲ್ಲಿ ಔಷಧಿ ಕಂಡುಹಿಡಿಯಲು ನೆರವಾಗಿ ಕೊರೊನಾ ಮುಕ್ತ ದೇಶವನ್ನಾಗಿಸಲಿ ಎಂದು ಹೇಳಿದರು.

ಸಿಟಿ ಸೆಂಟ್ರಲ್ ಆಸ್ಪತ್ರೆಯ ಡಾ.ಗಣೇಶ್ ಮಾತನಾಡಿದರು.

ನಿರ್ಮಲ ನರ್ಸಿಂಗ್ ಹೋಂನ ವ್ಯವಸ್ಥಾಪಕ ನಿರ್ದೇಶಕ  ನಿಂಗಪ್ಪ, ಆಡಳಿತಾಧಿಕಾರಿಗಳಾದ ಜೆ.ಎನ್. ಶಿಲ್ಪ ಡಾ. ಪ್ರಸನ್ನಕುಮಾರ್, ನಿರ್ಮಲ ಇಂಜಿನಿಯರ್, ಕೆ.ಎನ್‍.ಸ್ವಾಮಿ, ಎಐಟಿಯುಸಿ ತಾಲ್ಲೂಕು ಕಾರ್ಯದರ್ಶಿ ಮಹಮ್ಮದ್‍ಭಾಷಾ, ಶಾಹಿನಾ ವೈದ್ಯಾಧಿಕಾರಿಗಳಾದ ಡಾ.ಸಹನ ಡಾ.ರವೀಂದ್ರ ಡಾ.ಆನಂದ್, ಡಾ.ಸಂತೋಷ್, ತಿಪ್ಪೇಸ್ವಾಮಿ ದೇವಿಕೆರೆ, ಗೌಸ್ ಮನ್ಸೂರ್ ಮತ್ತಿತರರು ಭಾಗವಹಿಸಿದ್ದರು.

error: Content is protected !!