ವರ್ಷದೊಳಗೆ ಮೀಸಲಾತಿ ಜಾರಿಗೊಳಿಸದಿದ್ದರೆ ಮಾದಿಗರ ಶಕ್ತಿ ಪ್ರದರ್ಶನ

`ಎಂ. ಜಯಣ್ಣ ಒಂದು ನೆನಪು’ ಕಾರ್ಯಕ್ರಮದಲ್ಲಿ ಚಿತ್ರದುರ್ಗ ಸಂಸದ ಎ. ನಾರಾಯಣ ಸ್ವಾಮಿ

ದಾವಣಗೆರೆ, ಡಿ.12- ಒಂದು ವರ್ಷದೊಳಗೆ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಿ ಮಾದಿಗ ಸಮುದಾಯಕ್ಕೆ ಮೀಸಲಾತಿ ಜಾರಿಗೊಳಿಸದಿದ್ದರೆ ಮಾದಿಗರ ಶಕ್ತಿಯನ್ನು ಪ್ರದರ್ಶಿಸುವುದಾಗಿ ಚಿತ್ರದುರ್ಗ ಕ್ಷೇತ್ರದ ಲೋಕಸಭಾ ಸದಸ್ಯ ಎ. ನಾರಾಯಣ ಸ್ವಾಮಿ ಅವರು ಸರ್ಕಾರವನ್ನು ಎಚ್ಚರಿಸಿದ್ದಾರೆ.

ನಗರದ ಕುವೆಂಪು ಕನ್ನಡ ಭವನದಲ್ಲಿ ಮಾದಿಗ ನೌಕರರ ಬಳಗದ ವತಿಯಿಂದ ಇಂದು ಹಮ್ಮಿಕೊಳ್ಳಲಾಗಿದ್ದ ಜನಪರ ದಲಿತ ಹೋರಾಟಗಾರ ದಿ. ಎಂ. ಜಯಣ್ಣ ಒಂದು ನೆನಪು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಮೀಸಲಾತಿ ವಿಳಂಬಕ್ಕೆ ಕಾರಣವೇನೆಂಬುದು ತಿಳಿಯುತ್ತಿಲ್ಲ. 72 ವರ್ಷಗಳಿಂದ ಮಾದಿಗ ಸಮಾಜಕ್ಕೆ ವಿವಿಧ ಪಕ್ಷಗಳು ಏನು ಮಾಡಿವೆ ಎಂಬುದರ ಚರ್ಚೆಯಾಗಬೇಕು. ಸದನದಲ್ಲಿ ಚರ್ಚಿಸುವ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದೇನೆ. ಸದನದಲ್ಲಿ ಈ ಬಗ್ಗೆ ಎಲ್ಲಾ ಶಾಸಕರು ಧ್ವನಿ ಎತ್ತಬೇಕೆಂದರು.

ನಾನು ಮತಕ್ಕಾಗಿ ಎಂದೂ ಭಿಕ್ಷೆ ಬೇಡುವವ ನಲ್ಲ. ರಾಜಕಾರಣದಿಂದ ದೂರ ಉಳಿಯಬೇ ಕೆಂದುಕೊಂಡಿದ್ದೆ. ಅವಕಾಶ ಸಿಕ್ಕಿದ್ದರಿಂದ ಸಂಸದ ನಾಗಿ ಜವಾಬ್ದಾರಿ ಹೊತ್ತುಕೊಂಡೆ ಎಂದರು.

ದಿ. ಜಯಣ್ಣ ಎಲ್ಲರ ಮನ ಗೆದ್ದಂತಹ ಸಾಮಾಜಿಕ ಹೋರಾಟಗಾರರಾಗಿದ್ದರೇ ವಿನಃ ಕೇವಲ ದಲಿತ ಹೋರಾಟಗಾರರಷ್ಟೇ ಅಗಿರಲಿಲ್ಲ. ಹೋರಾಟಕ್ಕೆ ಕಪ್ಪು ಚುಕ್ಕೆಯಾಗದಂತೆ ತಮ್ಮ ಜೀವನ ನಡೆಸಿದರು. ಒಬ್ಬ ಹೋರಾಟಗಾರನಿಗೆ ರಾಜಕೀಯದ ನೆರಳು ಬೀಳಬಾರದು. ರಾಜಕೀಯದ ನೆರಳು ಬಿದ್ದರೆ ಹೋರಾಟದ ಶಕ್ತಿ ಕುಂದುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಸ್ತುತ ರಾಜಕೀಯ ಪಕ್ಷಗಳು ದಲಿತರನ್ನು ಓಲೈಸಲು ಅಂಬೇಡ್ಕರ್ ಅವರನ್ನು ಪಲ್ಲಕ್ಕಿಯ ಮೇಲೆ ಕೂರಿಸಿ ಮೆರವಣಿಗೆ ಮಾಡುತ್ತಿವೆ. ಯಾರೊಬ್ಬರಿಗೂ ನಿವೇಶನ ನೀಡಲಿಲ್ಲ. ಈ ಮುಗ್ಧ ಸಮಾಜಕ್ಕೆ ಸರ್ಕಾರದ ಯೋಜನೆಗಳನ್ನು ತಲಪಿಸುವ ಯೋಗ್ಯತೆ ರಾಜಕಾರಣಿಗಳು ಹಾಗೂ ಸಂಘಟನೆಗಳಿಗೆ ಇಲ್ಲವೆಂದರು.

ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆ ಜಾರಿಗೊಳಿಸುವ ಕಾರ್ಯ ದಲ್ಲಿ ಎಂ. ಜಯಣ್ಣ ಅವರ ಪಾತ್ರ ಮಹತ್ವದ್ದು. ಅಲ್ಲದೇ ತುಮಕೂರು, ಚಿತ್ರದುರ್ಗ ಹಾಗೂ ದಾವಣಗೆರೆಗೆ ನೇರ ರೈಲು ಮಾರ್ಗದ ಹೋರಾಟದಲ್ಲಿ ಮುಂದಿದ್ದರು. ಈ ಯೋಜನೆಗಳು ಶೀಘ್ರ ಕಾರ್ಯಗ ತಗೊಳ್ಳಲಿದ್ದು, ಈ ಯೋಜನೆಯ ಫಲ ಕಾಣುವ ಮುನ್ನವೇ ಜಯಣ್ಣ ಅವರು ನಮ್ಮನ್ನಗಲಿರುವುದು ನೋವಿನ ಸಂಗತಿ ಎಂದು ಬೇಸರಿಸಿದರು.

ಮಾಜಿ ಸಚಿವ ಹೆಚ್. ಆಂಜನೇಯ ಮಾತ ನಾಡಿ, ಜಯಣ್ಣ ಮೆಮೋರಿಯಲ್ ಚಾರಿಟಬಲ್ ಟ್ರಸ್ಟ್ ಒಂದು ಸಮಾಧಿ ನಿರ್ಮಿಸುವ ಉದ್ದೇಶ ವಿದ್ದು, ಇದೇ ದಿನಾಂಕ 20ರಂದು ಚಿತ್ರದುರ್ಗದಲ್ಲಿ ರಾಜ್ಯಮಟ್ಟದ ಕಾರ್ಯಕ್ರಮ ಆಯೋಜಿಸಬೇ ಕೆಂದಿದೆ. ಉಪಮುಖ್ಯಮಂತ್ರಿ ಗೋವಿಂದ ಕಾರ ಜೋಳ, ಸಚಿವ ಶ್ರೀರಾಮುಲು, ಕವಿ ಡಾ.ಸಿದ್ದಲಿಂಗಯ್ಯ, ರಾಜ್ಯಸಭಾ ಸದಸ್ಯ ಎಲ್‌. ಹನುಮಂತಯ್ಯ ಹಾಗೂ ಒಡನಾಡಿಗಳನ್ನು ಸೇರಿಸಬೇಕೆಂದುಕೊಂಡಿರುವುದಾಗಿ ಹೇಳಿದರು.

ಶಾಸಕ ಪ್ರೊ. ಲಿಂಗಣ್ಣ, ತಾ. ಪಂ. ಅಧ್ಯಕ್ಷೆ ಮಮತಾ ಮಲ್ಲೇಶಪ್ಪ, ಮುಖಂಡ ರಾದ ಪ್ರಸ‌ನ್ನ, ಲಿಂಗರಾಜ್, ನಾಗರಾಜಪ್ಪ ಮತ್ತಿತರರಿದ್ದರು.

error: Content is protected !!