ನಗರಲ್ಲಿ ಮುಂದುವರೆದ ಸಾರಿಗೆ ನೌಕರರ ಮುಷ್ಕರ

ದಾವಣಗೆರೆ, ಡಿ.12- ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಒತ್ತಾಯಿಸಿ ನಗರದಲ್ಲಿ ಕೆಎಸ್ ಆರ್ ಟಿಸಿ ನೌಕರರು 2ನೇ ದಿನವಾದ ಇಂದೂ ಸಹ ಮುಷ್ಕರ ಮುಂದುವರೆಸಿದರು.

ಸೇವೆಯಿಂದ ದೂರ ಉಳಿದ ನೌಕರರು, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಧರಣಿ ಹೂಡಿ ಬೇಡಿಕೆ ಈಡೇರಿಕೆಗೆ ಬಿಗಿಪಟ್ಟು ಹಿಡಿದಿದ್ದರು. ಸ್ಥಳದಲ್ಲೇ ಅಡುಗೆ ತಯಾರಿಸಿ ಊಟ ಮಾಡುವ ಮುಖೇನ ಪಟ್ಟು ಸಡಿಲಿಸದೇ ಅನಿರ್ದಿಷ್ಟ ಮುಷ್ಕರವನ್ನು ತೀವ್ರಗೊಳಿಸಿದ್ದಾರೆ.

ಮುಷ್ಕರದಿಂದ ಶುಕ್ರವಾರದಂತೆ ಇಂದೂ ಬಸ್‍ಗ ಳ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು, ಕಾಲೇಜು ವಿದ್ಯಾರ್ಥಿಗಳು ಬಸ್ ಗಳ ಸೇವೆ ಇಲ್ಲದೇ ಪರದಾಡು ವುದು ತಪ್ಪಲಿಲ್ಲ. ದುಪ್ಪಟ್ಟು ಹಣ ಕೊಟ್ಟು ಖಾಸಗಿ ಬಸ್, ಇತರೆ ಖಾಸಗಿ ವಾಹನಗಳಲ್ಲಿ ಸಂಚರಿಸಬೇಕಾಯಿತು.

ಭಾನುವಾರವೂ ಮುಷ್ಕರ ಮುಂದುವರೆಯಲಿದ್ದು, ಉಪವಾಸ ಸತ್ಯಾಗ್ರಹ ಮಾಡಲಾಗುವುದು. ಹೀಗೆ ಸರ್ಕಾರ ನಮಗೆ ಸ್ಪಂದಿಸುವ ತನಕ ಮುಷ್ಕರದಿಂದ ಹಿಂದೆ ಸರಿಯುವುದಿಲ್ಲ. ನಾವು ಮುಷ್ಕರ ಕೈಗೊಂಡಿರುವ ಕಾರಣ ಪರ್ಯಾಯವಾಗಿ ಖಾಸಗಿ ಬಸ್ ಗಳನ್ನು ಪಡೆದು ಸಾರಿಗೆ ಸೇವೆ ನೀಡಲು ಸರ್ಕಾರ ಮಟ್ಟದಲ್ಲಿ ಖಾಸಗಿ ಬಸ್ ಮಾಲೀಕರ ಸೆಳೆಯಲು ಪ್ರಯತ್ನ ನಡೆದಿದ್ದು, ಇದಕ್ಕೆ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಮುಷ್ಕರ ನಿರತರೋರ್ವರು ತಿಳಿಸಿದ್ದಾರೆ.

ಕಾಂಗ್ರೆಸ್ ಬೆಂಬಲ: ಸಾರಿಗೆ ನೌಕರರ ಮುಷ್ಕರಕ್ಕೆ ಜಿಲ್ಲಾ ಕಾಂಗ್ರೆಸ್ ಮುಖಂಡರು ಇಂದು ಬೆಂಬಲ ವ್ಯಕ್ತಪಡಿಸಿದರು. 

ಈ ವೇಳೆ ಕಾಂಗ್ರೆಸ್ ಮುಖಂಡರಾದ ದಿನೇಶ್ ಕೆ. ಶೆಟ್ಟಿ, ಡಿ. ಬಸವರಾಜ್, ಸೀಮೆಎಣ್ಣಿ ಮಲ್ಲೇಶ್, ನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್, ಪಾಲಿಕೆ ಸದಸ್ಯರಾದ ಗಡಿಗುಡಾಳ್ ಮಂಜುನಾಥ್, ಕೆ. ಚಮನ್‍ಸಾಬ್, ಕೆ.ಜಿ. ಶಿವಕುಮಾರ್, ಕನ್ನಡ ಪರ ಸಂಘಟನೆಗಳ ಒಕ್ಕೂಟದ ಮುಖಂಡರಾದ ಟಿ. ಶಿವಕುಮಾರ್, ಎಸ್.ಟಿ. ಸೋಮಶೇಖರ್, ರೈತ ಸಂಘದ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಚನ್ನಬಸಪ್ಪ, ಶಾಮನೂರು ರಾಮಚಂದ್ರಪ್ಪ, ಗಣೇಶ್ ಹುಲ್ಮನೆ, ಅಯೂಬ್ ಪೈಲ್ವಾನ್ ಸೇರಿದಂತೆ ಇತರರು ಇದ್ದರು.

error: Content is protected !!