ಮಕ್ಕಳಿಗೆ ಮಾನವೀಯ ಮೌಲ್ಯಗಳ ಶಿಕ್ಷಣ ಕಲಿಸಬೇಕು

ಜಗಳೂರಿನ ನ್ಯಾಯಾಧೀಶ ಜಿ. ತಿಮ್ಮಯ್ಯ

ಜಗಳೂರು, ಡಿ.10- ಮಕ್ಕಳಿಗೆ ಸಂಸ್ಕಾರ ಯುತ ಮತ್ತು ಮಾನವೀಯ ಮೌಲ್ಯಗಳ ಶಿಕ್ಷಣ ಕಲಿಸಬೇಕು ಎಂದು ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಧೀಶ ಜಿ. ತಿಮ್ಮಯ್ಯ ಕರೆ ನೀಡಿದರು.

ಪಟ್ಟಣದ ಶ್ರೀ ರಾಮಮಂದಿರ ಸಭಾಂಗಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಹಿರಿಯ ನಾಗರಿಕರ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ನಾಲ್ಸಾ (ಹಿರಿಯ ನಾಗರಿಕರಿಗೆ ಕಾನೂನು ಸೇವೆಗಳು) ಯೋಜನೆ 2016 ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಪ್ರಯುಕ್ತ ಕಾನೂನು ಅರಿವು, ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭವಿಷ್ಯದಲ್ಲಿ ಮಾನವೀಯತೆ ಮರೆತು ಪೋಷಕರು ಜೀವಂತವಿರುವಾಗ ವೃದ್ಧಾಶ್ರಮಕ್ಕೆ ನೂಕಿ ಸಾವಿನ ನಂತರ ಆಸ್ತಿಗಾಗಿ ವ್ಯಾಜ್ಯ ಹೂಡಿದರೆ ಅಂತಹ ಶಿಕ್ಷಣಕ್ಕೆ ಅರ್ಥವೇನಿದೆ? ಎಂದ ಅವರು ಆಸ್ತಿ ಗಳಿಕೆಗಿಂತ ಮಕ್ಕಳನ್ನೇ ಆಸ್ತಿಯನ್ನಾಗಿಸಿರಿ ಎಂದು ಕಿವಿಮಾತು ಹೇಳಿದರು.

 ಸರ್ವೋಚ್ಛ ನ್ಯಾಯಾಲಯ ಹಿರಿಯರಿಗೆ 2007 ರಲ್ಲಿ ಜೀವಿಸುವ ಹಕ್ಕು ನೀಡಿದೆ. ಹಿರಿಯ ನಾಗರಿಕರಿಗೆ ಕಾನೂನು ಬದ್ಧ ಸರ್ಕಾರಿ ಸೌಲಭ್ಯ ಕಲ್ಪಿಸಲು ಸದಾ ಸಿದ್ಧ. ಕೀಳರಿಮೆ ಬಿಟ್ಟು ಅಹ ವಾಲು ಸಲ್ಲಿಸಿರಿ. ಹಿರಿಯರಿಗೆ, ನಮ್ಮ ಧರ್ಮಕ್ಕೆ ಕಿರಿಯರು ತಲೆ ತಗ್ಗಿಸಿ ನಡೆದಾಗ ಮಾತ್ರ ನ್ಯಾಯಾ ಲಯಕ್ಕೆ ಗೌರವ ಸೂಚಿಸಿದಂತೆ ಎಂದರು.

ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕರಾದ ಬ್ರಹ್ಮಾಕುಮಾರಿ ಭಾರತಿ ಮಾತನಾಡಿ, ಪ್ರತಿಯೊಂದು ಜೀವಿಗೂ ಬದುಕಲು ಅವಕಾಶವಿದ್ದು, ಪ್ರಕೃತಿಗೆ ನಮ್ಮ ಕೊಡುಗೆ ಅಪಾರವಿದೆ ಎಂದರು. ಇಬ್ಬರ ಮಧ್ಯೆ ಮನೋಭಾವನೆಗಳು ಹಂಚಿಕೆಯಾದರೆ ಬಾಂಧವ್ಯ ಹೆಚ್ಚುತ್ತದೆ. ನಾನಷ್ಟೇ ಮುಂಚೂಣಿ ಎಂಬ ಅಹಂ ಪ್ರವೃತ್ತಿಯಿದ್ದರೆ ಬದುಕಿನಲ್ಲಿ ವ್ಯತ್ಯಾಸ ಉಂಟಾಗುವುದು. ಪ್ರತಿಯೊಬ್ಬ ನಾಗರಿಕ ಕಾನೂನನ್ನು  ಅರಿತುಕೊಂಡು ಜವಾಬ್ದಾರಿಯಿಂದ ಇತರರಿಗೆ ತಲುಪಿಸುವ ಕರ್ತವ್ಯ ಪಾಲಿಸಬೇಕು ಅಲ್ಲದೆ ಶ್ರೇಷ್ಠ ಚಿಂತನೆ ಮೈಗೂಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಸಮಾರಂಭದಲ್ಲ್ಲಿ ಹಿರಿಯ ನಾಗರಿಕರ ಸಂಘದ ತಾಲೂಕಾಧ್ಯಕ್ಷ ಸಿ.ತಿಪ್ಪೇಸ್ವಾಮಿ, ವಕೀಲರ ಸಂಘದ ಅಧ್ಯಕ್ಷ ಬಸವರಾಜ್, ಕಾರ್ಯದರ್ಶಿ ತಿಪ್ಪೇಸ್ವಾಮಿ, ಪದಾಧಿಕಾರಿಗಳಾದ ಕೆ.ಎಂ. ಬಸವರಾಜಪ್ಪ, ವೈ. ಹನುಮಂತಪ್ಪ, ಡಿ. ಪ್ರಕಾಶ್, ಕುಂಬಾರ್ ಶರಣಪ್ಪ ಇನ್ನಿತರರಿದ್ದರು.

error: Content is protected !!