ಹರಿಹರ, ಡಿ.8- ತಾಲ್ಲೂಕು ಪಂಚಾಯತಿ ಉಪಾಧ್ಯಕ್ಷರಾಗಿ ಶಾಂತಮ್ಮ ಗದಿಗೆಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯೂ ಆದ ದಾವಣಗೆರೆ ಉಪವಿಭಾಗಾಧಿಕಾರಿ ಶ್ರೀಮತಿ ಮಮತಾ ಹೊಸಗೌಡ್ರು ಘೋಷಿಸಿದ್ದಾರೆ.
ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಸ್ಥಾನಕ್ಕೆ ಜಯಮ್ಮ ಬಸವಲಿಂಗಪ್ಪ ರಾಜೀನಾಮೆ ನೀಡಿದ್ದರ ಹಿನ್ನೆಲೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ತಾಲ್ಲೂಕು ಪಂಚಾಯ್ತಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಚುನಾವಣೆಯಲ್ಲಿ ಈ ಆಯ್ಕೆ ನಡೆಯಿತು.
ಉಪಾಧ್ಯಕ್ಷ ಸ್ಥಾನಕ್ಕೆ ಶಾಂತಮ್ಮ ಗದಿಗೆಪ್ಪ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ತಾ.ಪಂ. ಅಧ್ಯಕ್ಷೆ ಶ್ರೀದೇವಿ ಮಂಜಪ್ಪ, ಮಾಜಿ ಉಪಾಧ್ಯಕ್ಷೆ ಜಯಮ್ಮ ಬಸವಲಿಂಗಪ್ಪ, ಸದಸ್ಯರಾದ ವೀರಭದ್ರಪ್ಪ ಆದಾಪುರ, ಸಿರಿಗೆರೆ ಕೊಟ್ರೇಶಪ್ಪ, ಎನ್.ಪಿ. ಬಸವಲಿಂಗಪ್ಪ ಕುಣೆಬೆಳಕೆರೆ, ಬಸವನಗೌಡ್ರು ಕೊಕ್ಕನೂರು, ವಿಶಾಲಾಕ್ಷಿ ಕೊಟ್ರೇಶಪ್ಪ ಭಾನುವಳ್ಳಿ, ಲಕ್ಷ್ಮಿ ಮಹಾಂತೇಶ್ ರಾಜನಹಳ್ಳಿ, ರತ್ನಮ್ಮ ರಂಗಪ್ಪ ಜಿಗಳಿ, ವೈ.ಹೆಚ್. ಭಾಗ್ಯಲಕ್ಷ್ಮಿ, ತಾ.ಪಂ. ಇಓ ಗಂಗಾಧರನ್, ಲಿಂಗರಾಜ್ ಇನ್ನಿತರರಿದ್ದರು.