ದಾವಣಗೆರೆ, ಡಿ.5- ಭಾರತದ ಸಂವಿಧಾನ ಶಿಲ್ಪಿ, ಭಾರತ ರತ್ನ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ 64ನೇ ಮಹಾ ಪರಿನಿರ್ವಾಣದ ಪ್ರಯುಕ್ತ ಅಸ್ಪೃಶ್ಯತಾ ನಿವಾರಣೆಗಾಗಿ ಹೊರಟಿರುವ ಅಂಬೇಡ್ಕರ್ ಜ್ಯೋತಿ ಯಾತ್ರೆಯು ಇಂದು ಸಂಜೆ ನಗರಕ್ಕಾಗಮಿಸಿತು.
ಅಂಬೇಡ್ಕರ್ ವೃತ್ತದಲ್ಲಿ ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಮಿತಿ ವತಿ ಯಿಂದ ಅಂಬೇಡ್ಕರ್ ಜ್ಯೋತಿ ಯಾತ್ರೆಯನ್ನು ಸ್ವಾಗತಿಸಿ, ನಂತರ ಬೀಳ್ಕೊಡಲಾಯಿತು. ಇದೇ ವೇಳೆ ಸ್ವಚ್ಛತಾ ಮತ್ತು ಪ್ಲಾಸ್ಟಿಕ್ ಮುಕ್ತ ಅರಿವು ಮೂಡಿಸಲಾಯಿತು.
ದಾವಣಗೆರೆಯಿಂದ ಹುಬ್ಬಳ್ಳಿ, ಬೆಳಗಾಂ, ಮುಂಬೈನಲ್ಲಿನ ದಾದಾ ಶಿವಾಜಿ ಪಾರ್ಕ್, ಚೈತನ್ಯ ಭೂಮಿಗೆ ಅಂಬೇಡ್ಕರ್ ಜ್ಯೋತಿ ತಲುಪುತ್ತದೆ.
ಅಸ್ಪೃಶ್ಯತೆಯ ನಿವಾರಣೆಗಾಗಿ ರೂಪಿಸ ಲಾದ ಹಲವಾರು ಯೋಜನೆಗಳು ಪರಿಣಾಮ ಕಾರಿಯಾಗಿ ಅನುಷ್ಠಾನಗೊಳ್ಳದೆ, ಈಗಲೂ ಜೀವಂತವಾಗಿದೆ. ಸಂವಿಧಾನ ಬರೆದಿರುವುದು ಒಂದೇ ಜಾತಿಗಲ್ಲ, ದಲಿತರಿಗೆ ಸೀಮಿತವಾಗಿಲ್ಲ. ಎಲ್ಲಾ ಜಾತಿ, ಜನಾಂಗಕ್ಕೂ ಸಮಾನತೆ ಸಿಗ ಬೇಕೆಂಬ ಆಶಾ ಭಾವನೆಯಿಂದ ಸಂವಿಧಾನ ವನ್ನು ಬರೆಯಲಾಗಿದೆ. ಸಂವಿಧಾನವನ್ನು ಎಲ್ಲರೂ ಗೌರವಿಸಬೇಕು ಎಂದು ಸಮಿತಿ ಅಧ್ಯಕ್ಷ ಸಿ. ಬಸವರಾಜ್ ತಿಳಿಸಿದರು.
ಸಂವಿಧಾನ ವಿರೋಧಿಸಲು ಸಣ್ಣ ಸಣ್ಣ ವಿಕೃತ ಹೇಳಿಕೆ ನೀಡಲು ಪ್ರೇರೇಪಿಸುತ್ತಿದ್ದಾರೆ. ದೇಶದ ಸಮಗ್ರತೆಗೆ ಧಕ್ಕೆ ತರುತ್ತಿರುವ ಕುತಂತ್ರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ದೇಶ, ರಾಜ್ಯ, ಜಿಲ್ಲೆ, ಗ್ರಾಮಗಳಲ್ಲಿ ದಲಿತರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯಗಳು ನಿಲ್ಲುವಂತಾಗಲು ಉಗ್ರವಾದ ಕಾನೂನು ರಚನೆಯಾಗಬೇಕು. ಭೂಮಿ, ವಸತಿ, ಜೀವನೋಪಾಯ ಸೌಲಭ್ಯ, ಯೋಗ್ಯವಾದ ನೀರು, ಶಿಕ್ಷಣ, ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ದಾವಣ ಗೆರೆಯ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಅವರ ಕಂಚಿನ ಪ್ರತಿಮೆ ತುರ್ತಾಗಿ ಸ್ಥಾಪನೆಯಾ ಗಬೇಕು. ಈಗಾಗಲೇ ಹಲವು ಬಾರಿ ಜಿಲ್ಲಾಧಿಕಾ ರಿಗಳ ಕಛೇರಿಗೆ ಪ್ರಸ್ತಾಪ ಮಾಡಲಾಗಿದೆ. ಈ ವರ್ಷ ನಗರ ಪಾಲಿಕೆ ಅನುದಾನದಲ್ಲಿ 50 ಲಕ್ಷ ಮೀಸಲಿಡಬೇಕು. ಬಡವರಿಗೆ, ನಿರಾಶ್ರಿತರಿಗೆ, ಎಲ್ಲಾ ಜಾತಿಯ ಬಡವರಿಗೆ ಆಶ್ರಯ ಮನೆ, ನಿವೇಶನ ನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಟಿ. ಹನುಮಂತಪ್ಪ, ಬಿ. ಗುರುಮೂರ್ತಿ, ಬಿ.ಆರ್. ಮಂಜುನಾಥ್, ಪುಟಗನಾಳ್ ವಿಜಯ, ಡಿ. ಹನುಮಂತಪ್ಪ, ಲಿಂಗರಾಜ, ಎಂ. ಮಂಜಪ್ಪ ಸೇರಿದಂತೆ ಇತರರು ಇದ್ದರು.