ಮಲೇಬೆನ್ನೂರು, ಡಿ.3- ಪುರಸಭೆ, ನಾಡಕಚೇರಿ, ಸಮುದಾಯ ಆರೋಗ್ಯ ಕೇಂದ್ರ, ರೈತ ಸಂಪರ್ಕ ಕೇಂದ್ರ, ಪಿಎಸಿಎಸ್, ಬೀರಲಿಂಗೇಶ್ವರ ದೇವಸ್ಥಾನ ಮತ್ತು ವಿದ್ಯಾ ಸಂಸ್ಥೆ, ಸರ್ಕಾರಿ ಪದವಿ ಪೂರ್ವ ಕಾಲೇಜು ಸೇರಿದಂತೆ ವಿವಿಧೆಡೆ ದಾಸ ಶ್ರೇಷ್ಠ, ಸಂತ ಕವಿ ಶ್ರೀ ಭಕ್ತ ಕನಕದಾಸರ 533ನೇ ಜಯಂತ್ಯೋತ್ಸವವನ್ನು ಆಚರಿಸಲಾಯಿತು.
ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಕನಕದಾಸರ ಭಾವಚಿತ್ರಕ್ಕೆ ವಿಶೇಷ ಪೂಜೆ, ಅಭಿಷೇಕ ನೆರವೇರಿಸಿ, ನಂತರ ಸಿಹಿ ವಿತರಿಸಲಾಯಿತು.
ದೇವಸ್ಥಾನ ಸಮಿತಿ ಅಧ್ಯಕ್ಷ ಪೂಜಾರ ನಾಗಪ್ಪ, ಗೌರವಾಧ್ಯಕ್ಷ ಪೂಜಾರ ರೇವಣಪ್ಪ, ಕಾರ್ಯದರ್ಶಿ ಕೆ.ಪಿ.ಗಂಗಾಧರ್, ಪಿ.ಬಿ.ಹನುಮಂತಪ್ಪ, ಪಿ.ಎಸ್.ಸೋಮ ಶೇಖರ್, ಪಿ.ಬಿ.ಜಯ್ಯಪ್ಪ, ಪಿ.ಹೆಚ್.ಶಿವಕುಮಾರ್, ಪಿ.ಹೆಚ್.ಮಂಜುನಾಥ್, ಪಿ.ಎಸ್.ನಾರಾಯಣಪ್ಪ, ಬಿ.ಹೆಚ್.ನಾಗೇಂ ದ್ರಪ್ಪ, ಪಿ.ಆರ್.ಬೀರೇಶ್, ಪಿ.ಜಿ.ಮಹೇಶ್ ಮತ್ತಿತರರು ಈ ವೇಳೆ ಹಾಜರಿದ್ದರು.
ಪುರಸಭೆಯಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುರಸಭೆ ಅಧ್ಯಕ್ಷ ರಾದ ನಾಹೀದಾ ಅಂಜುಂ ಸೈಯದ್ ಇಸ್ರಾರ್, ಉಪಾಧ್ಯಕ್ಷರಾದ ಅಂಜಿನಮ್ಮ ವಿಜಯ ಕುಮಾರ್, ಸದಸ್ಯರಾದ ಬಿ.ಸುರೇಶ್, ಮಾಸಣಗಿ ಶೇಖ ರಪ್ಪ, ದಾದಾವಲಿ, ಭೋವಿಕುಮಾರ್, ಮುಖ್ಯಾಧಿಕಾರಿ ಧರಣೇಂದ್ರಕುಮಾರ್ ಅವರು ಪುಷ್ಪಾರ್ಚನೆ ಮಾಡಿದರು.
ನಾಡ ಕಚೇರಿಯಲ್ಲಿ ಉಪತಹಶೀಲ್ದಾರ್ ಆರ್.ರವಿ ಅವರು ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಕಂದಾಯ ನಿರೀಕ್ಷಕ ಸಮೀರ್, ಗ್ರಾಮ ಲೆಕ್ಕಾಧಿಕಾರಿಗಳಾದ ಕೊಟ್ರೇಶ್, ರಾಮಕೃಷ್ಣ, ಬೋರಯ್ಯ, ಶ್ರೀಧರ್‌ಮೂರ್ತಿ, ಮಂಜುಳಾ ಸಿಬ್ಬಂದಿಗಳಾದ ಬಸವರಾಜ್, ಅಂಜಿನಪ್ಪ ಮತ್ತಿತರರು ಪಾಲ್ಗೊಂಡಿದ್ದರು. ಬೀರಲಿಂಗೇಶ್ವರ ವಿದ್ಯಾಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಪಿ.ಬಸಪ್ಪ ಮತ್ತಿತರರು ಭಾಗವಹಿಸಿದ್ದರು.