ವಿದ್ಯಾರ್ಥಿಗಳ ಅನುಕೂಲಕ್ಕೆ ಹರಿಹರ-ದಾವಣಗೆರೆಗೆ ಕೆಎಸ್ಆರ್‌ಟಿಸಿ ಬಸ್

ದಾವಣಗೆರೆ, ನ.23- ನಗರದ ಬಾಪೂಜಿ ಎಂಬಿಎ ಕಾಲೇಜು ಮತ್ತು ಸುತ್ತಮುತ್ತಲಿನ ಕಾಲೇಜುಗಳಿಗೆ ಹರಿಹರದಿಂದ ಆಗಮಿಸುವ ವಿದ್ಯಾರ್ಥಿಗಳಿಗೆ   ಅನುಕೂಲವಾಗುವಂತೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಬಸ್ ಸೌಲಭ್ಯ ಒದಗಿಸಿದೆ.

ಹಿರಿಯ ಶಾಸಕ ಡಾ|| ಶಾಮನೂರು ಶಿವಶಂಕರಪ್ಪ ಅವರ ಶಿಫಾರಸ್ಸಿನ ಮೇರೆಗೆ ಕೆಎಸ್‌ಆರ್‌ಟಿಸಿ ಬಸ್ಸನ್ನು ವಿದ್ಯಾರ್ಥಿಗಳ ಯೋಗಕ್ಷೇಮಕ್ಕಾಗಿ ಮತ್ತು ಮುಖ್ಯವಾಗಿ ಹೆಣ್ಣುಮಕ್ಕಳ ಹಿತದೃಷ್ಟಿಯಿಂದ ಒದಗಿಸಲಾಗಿದೆ. 

ಪ್ರತಿದಿನ ಬೆಳಗ್ಗೆ 7.45 ಕ್ಕೆ ಹರಿಹರ ಬಸ್ ನಿಲ್ದಾಣದಿಂದ ಹೊರಟು ಬಿಸ್ಸೆನ್ನೆಲ್ ಆಫೀಸ್, ರಿಂಗ್ ರೋಡ್ ಮಾರ್ಗವಾಗಿ ಶಾಮನೂರಿಗೆ 8.30 ಕ್ಕೆ ತಲುಪುತ್ತದೆ. ಇದರ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಸಲುವಾಗಿ ನವೆಂಬರ್ 23ನೇ ತಾರೀಖಿನಂದು ಬಾಪೂಜಿ ಎಂಬಿಎ ಕಾಲೇಜಿನ ಆವರಣದಲ್ಲಿ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. 

ಹರಿಹರ ಡಿಪೋ ವ್ಯವಸ್ಥಾಪಕ ಸಂದೀಪ್, ಬಾಪೂಜಿ ಹೈ-ಟೆಕ್‌ನ ಪ್ರಾಂಶುಪಾಲರಾದ ಡಾ|| ಬಿ.ವೀರಪ್ಪ, ಎಸ್‌ಬಿಸಿ ಕಾಲೇಜಿನ ಪ್ರಾಂಶುಪಾಲರಾದ
ಡಾ|| ಸಿ.ಷಣ್ಮುಖಪ್ಪ, ಬಾಪೂಜಿ ಫಾರ್ಮಸಿ ಕಾಲೇಜಿನ ಡಾ|| ತಿಮ್ಮಶೆಟ್ಟಿ ಹಾಗೂ ಬಾಪೂಜಿ ಬಿ-ಸ್ಕೂಲ್ಸ್‌ನ ನಿರ್ದೇಶಕ ಡಾ|| ಹೆಚ್. ವಿ. ತ್ರಿಭುವಾನಂದ ಹಾಜರಿದ್ದರು. 

ಈ ಸಂದರ್ಭದಲ್ಲಿ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ನೆರೆದಿದ್ದರು. ಅವರ ಈ ಬಹುದಿನದ ಬೇಡಿಕೆ ಈ ಮೂಲಕ ಈಡೇರಿ ದಂತಾಗಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. 

error: Content is protected !!