ಹರಪನಹಳ್ಳಿ, ನ.21- ವಾಲ್ಮೀಕಿ ನಾಯಕ ಸಮಾಜವು ಧಾರ್ಮಿಕ ತಳಹದಿಯ ಮೇಲೆ ವಾಲ್ಮೀಕಿ ಜಾತ್ರೆ ನೆಪದಲ್ಲಿ ಜನ ಜಾಗೃತಿಯಾಗಬೇಕಿದೆ ಎಂದು ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಕರೆ ನೀಡಿದರು.
ಪಟ್ಟಣದ ವಾಲ್ಮೀಕಿ ಸಮುದಾಯ ಭವನದಲ್ಲಿ ವಾಲ್ಮೀಕಿ ಜಾತ್ರೆಯ ಪೂರ್ವಭಾವಿ ಸಭೆಯ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ರಾಜ್ಯದ 28 ಜಿಲ್ಲೆಗಳು ಹಾಗೂ 175 ತಾಲ್ಲೂಕುಗಳ ಪ್ರವಾಸ ಮಾಡಿ ಜಾತ್ರೆಗೆ ಆಹ್ವಾನ ನೀಡುವ ಮೂಲಕ ರಾಜ್ಯದ 4 ನೇ ಅತಿ ದೊಡ್ಡ ಸಮಾಜವನ್ನು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಕಳೆದ ಎರಡು ಜಾತ್ರೆ ಯಶಸ್ವಿಯಾಗಿದ್ದು, ಈ ಬಾರಿಯ ಜಾತ್ರೆ ಯಶಸ್ವಿಯಾಗಲು ನಿಮ್ಮೆಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
ಸಮಾಜದ ಮೀಸಲಾತಿಯಿಂದ ಚುನಾಯಿತರಾದ ವಾಲ್ಮೀಕಿ ನಾಯಕ ಸಮಾಜದ ಶಾಸಕರು, ಸಂಸದರು ಸಮುದಾಯಕ್ಕೆ ಸಿಗಬೇಕಾದ ಮೀಸಲಾತಿಗಾಗಿ ರಾಜೀನಾಮೆ ನೀಡುತ್ತೇವೆ ಎಂದು ಸುಳ್ಳು ಆಶ್ವಾಸನೆ ನೀಡುತ್ತಿದ್ದಾರೆ. ಅದರೆ ನಮ್ಮ ಪ್ರತಿ ಹೋರಾಟದಲ್ಲಿ ರಾಜ್ಯದ 50 ಲಕ್ಷ ಜನರು ಇದ್ದು ಸರ್ಕಾರ ಶೇ.7.5 ಮೀಸಲಾತಿಯನ್ನು ನೀಡಲೇಬೇಕು, ಇಲ್ಲವಾದರೆ ನಮ್ಮ ಸಮಾಜದ ಶಕ್ತಿ ನಿಮಗೆ ತೋರಿಸಬೇಕಾಗುತ್ತದೆ ಎಂದ ಅವರು, ಮೀಸಲಾತಿ ವಿಚಾರವಾಗಿ ಉಪ ಸಮಿತಿ ರಚನೆ ಮಾಡಿರುವುದು ನಮಗೆ ಸಂತಸ ತಂದಿದೆ ಎಂದರು.
ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಕೆ.ಉಚ್ಚೆಂಗೆಪ್ಪ ಮಾತನಾಡಿ, ವಾಲ್ಮೀಕಿ ನಾಯಕ ಸಮುದಾಯವನ್ನು ಕೇವಲ ಓಟ್ ಬ್ಯಾಂಕ್ ರಾಜಕಾರಣಕ್ಕೆ ಸೀಮಿತಗೊಳಿಸಲಾಗಿದೆ. ಹರಪನಹಳ್ಳಿಯಲ್ಲಿ ಯಾವುದೇ ಶಾಸಕರಾದರೂ ವಾಲ್ಮೀಕಿ ನಾಯಕ ಸಮಾಜದ ಮತಗಳಿಂದ ಎನ್ನುವುದನ್ನು ಮರೆಯಬಾರದು ಎಂದರು.
ಇದೇ ಸಂದರ್ಭದಲ್ಲಿ ವಾಲ್ಮೀಕಿ ಜಾತ್ರಾ ಸಮಿತಿ ತಾಲ್ಲೂಕು ಅಧ್ಯಕ್ಷರಾಗಿ ಹೆಚ್.ಕೆ.ಕಾಲೇಶ್, ಜಿಲ್ಲಾ ಪಂಚಾಯಿತಿ ಹಾಗೂ ಹರಪನಹಳ್ಳಿ ಪಟ್ಟಣ ಸೇರಿದಂತೆ ಹೆಚ್.ಟಿ.ಗಿರೀಶಪ್ಪ, ಉಚ್ಚಂಗಿದುರ್ಗದ ತಳವಾರ ಮಂಜಪ್ಪ, ಚಿಗಟೇರಿ ಜಂಬಣ್ಣ, ಬಾಣದ ಅಂಜಿನಪ್ಪ, ಹಳ್ಳಿಕೇರಿ ರಾಜಪ್ಪ, ಕೆ.ಯೋಗೇಶ್, ಕಂಚಿಕೇರಿ ಜಯಲಕ್ಷ್ಮಿ, ಎಂ.ಪ್ರಾಣೇಶ್, ನೀಲಗುಂದ ವಾಗೀಶ್ ಅವರನ್ನು ವಾಲ್ಮೀಕಿ ಸೇವಾ ಸಮಿತಿಗೆ (ವಿ.ಎಸ್.ಎಸ್) ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಯಿತು.
ಪುರಸಭೆ ಉಪಾಧ್ಯಕ್ಷ ಎನ್. ಭೀಮವ್ವ, ಉಪಾಧ್ಯಕ್ಷ ಶಿವಾನಂದ, ಪ್ರಧಾನ ಕಾರ್ಯದರ್ಶಿ ಗಿರಜ್ಜಿ ನಾಗರಾಜ, ಸಂಘಟನಾ ಕಾರ್ಯದರ್ಶಿ ಗಳಾದ ತಲವಾಗಲು ಎಂ. ನಂದಿಕೇಶವ, ನೀಲಗುಂದ ತಿಮ್ಮೇಶ, ವಾಲ್ಮೀಕಿ ನಾಯಕ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಕಂಚಿಕೇರಿ ಜಯಲಕ್ಷಿ, ಕಾರ್ಯದರ್ಶಿ ಕೆ.ಸುಜಾತ, ಗೌರವ ಅಧ್ಯಕ್ಷೆ ಟಿ.ಪದ್ಮಾವತಿ, ಸದಸ್ಯರಾದ ಕೆ.ದ್ರಾಕ್ಷಾಯಣಮ್ಮ, ಮಂಜುಳಾ, ಹನುಮಕ್ಕ, ಪವಿತ್ರ, ತಾಲ್ಲೂಕು ಪಂಚಾಯಿತಿ ಸದಸ್ಯ ವೈ.ಬಸಪ್ಪ, ಪುರಸಭೆ ಸದಸ್ಯ ದ್ಯಾಮಜ್ಜಿ ರೊಕ್ಕಪ್ಪ, ನಿವೃತ್ತ ಮುಖ್ಯ ಶಿಕ್ಷಕ ಆನಂದಪ್ಪ, ಏಕಲವ್ಯ ಸಂಘರ್ಷ ಸಮಿತಿ ಅಧ್ಯಕ್ಷ ರಾಯದುರ್ಗದ ಪ್ರಕಾಶ್, ಮುಖಂಡರಾದ ಆರ್.ಲೋಕೇಶ್, ನಿಟ್ಟೂರು ಸಣ್ಣಹಾಲಪ್ಪ, ಕೆ.ಪರಶುರಾಮಪ್ಪ, ಸಾಸ್ವಿಹಳ್ಳಿ ನಾಗರಾಜ, ಹರಿಯಮ್ಮನಳ್ಳಿ ಶಿವರಾಜ, ಘಾಟಿನರರಾಜಪ್ಪ, ತೆಲಿಗಿ ಉಮಾಕಾಂತ್, ಪೂಜಾರ್ ಅರುಣ್‍ಕುಮಾರ್, ಕೆಂಗಳ್ಳಿ ಪ್ರಕಾಶ್, ಪಿ.ಪರಶುರಾಮ, ನಂದಿಬೇವೂರು ರಾಜಪ್ಪ, ಟಿ.ಶ್ರೀಧರ್, ಪಟ್ನಾಮದ ವೆಂಕಟೇಶ್, ರಾಯದುರ್ಗದ ವಾಗೀಶ್, ದುಗ್ಗಾವತಿ ಮಂಜುನಾಥ, ಮೈದೂರು ಮಾರುತಿ, ತಿಮ್ಮಲಾಪುರದ ಮಾರುತಿ ಪೂಜಾರ್, ಹರಿಯಮ್ಮನಹಳ್ಳಿ ಮಂಜುನಾಥ, ಮಹಾಂತೇಶ್, ಬಸಾಪುರದ ಮಂಜುನಾಥ, ಮಂಡಕ್ಕಿ ಸುರೇಶ್, ಹೆಚ್.ವೆಂಕಟೇಶ್, ಪಿ.ವೆಂಕಟೇಶ, ಸೇರಿದಂತೆ ಮತ್ತಿತರರು ಇದ್ದರು.