ಹರಿಹರದ ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ವೈ.ಕೆ. ಬೇನಾಳ್ ಅಭಿಮತ
ಹರಿಹರ, ನ.21- ದೇಶದ ಸ್ವಾತಂತ್ರ್ಯ, ಐಕ್ಯತೆ ಸಂರಕ್ಷಿಸಲು ಮತ್ತು ಬಲಪಡಿಸಲು ಅರ್ಪಣಾ ಮನೋಭಾವದಿಂದ ಕೆಲಸ ಮಾಡು ವುದು ಪ್ರತಿಯೊಬ್ಬ ದೇಶವಾಸಿಯ ಕರ್ತವ್ಯ ವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ರಾದ ವೈ.ಕೆ. ಬೇನಾಳ್ ಹೇಳಿದರು.
ನಗರದ ನ್ಯಾಯಾಲಯ ಸಂಕೀರ್ಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದಿಂದ ಆಯೋಜಿಸಿದ್ದ ರಾಷ್ಟ್ರೀಯ ಏಕತಾ ಸಪ್ತಾಹದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಹಿಂಸೆ, ಕೋಮು ದಳ್ಳುರಿ, ಸಾಮಾಜಿಕ ಕಲ ರವ ದೇಶವನ್ನು ಬಲಹೀನಗೊಳಿಸುತ್ತವೆ ಎಂದರು.
ವಕೀಲರ ಸಂಘದ ಅಧ್ಯಕ್ಷ ನಾಗರಾಜ ಹಲವಾಗಲು ಮಾತನಾಡಿ, ಭಾರತ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿದ ರಾಷ್ಟ್ರವಾಗಿದೆ. ಬಸವಣ್ಣ, ಕನಕದಾಸರು, ಶಿಶುನಾಳ ಶರೀಫರು ಸೇರಿದಂತೆ ಸಾಧು, ಸಂತರು, ಸುಧಾರಣಾ ವಾದಿಗಳ ಸಂದೇಶವನ್ನು ಮೆಲುಕು ಹಾಕಿದರೆ ಈ ದೇಶ ಇನ್ನಷ್ಟು ಬಲಶಾಲಿಯಾಗುತ್ತದೆ. ನಾವು ಯಾವುದೇ, ಧರ್ಮ, ಜಾತಿ, ಜನಾಂಗ, ಪ್ರಾಂತ್ಯ, ವರ್ಣಕ್ಕೆ ಸೇರಿದ್ದರೂ ನಾವೆಲ್ಲಾ ಭಾರತೀಯರು ಎಂಬ ಭಾವನೆ ಹೊಂದಿರಬೇಕು ಎಂದರು.
ದಾವಣಗೆರೆ ವಿವಿ ಸಿಂಡಿಕೇಟ್ ಸದಸ್ಯ, ನ್ಯಾಯವಾದಿ ಟಿ. ಇನಾಯತ್ ವುಲ್ಲಾ ಮಾತನಾಡಿ, ಪ್ರಥಮ ಮಹಿಳಾ ಪ್ರಧಾನಿ ಇಂದಿರಾ ಗಾಂಧಿಯವರ ಜಯಂತಿಯ ಅಂಗವಾಗಿ ದೇಶದಲ್ಲಿ 2013ರಿಂದ ರಾಷ್ಟ್ರೀಯ ಐಕ್ಯತಾ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ದಿನಾಚರಣೆಯ ಮಹತ್ವ ತಿಳಿಸಿದರು.
2 ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಅವಿನಾಶ್ ಚಿಂದು, ಎಪಿಪಿ ಮಧುಮತಿ, ಹಿರಿಯ ವಕೀಲ ಶ್ರೀನಿವಾಸ್ ಕಲಾಲ್, ಎಚ್.ಎಂ. ಷಡಾಕ್ಷ ರಯ್ಯ, ಬಿ. ನಾಗರಾಜ್, ಜಿ.ಬಿ. ರಮೇಶ್, ಕೆ. ಹನು ಮಂತಪ್ಪ, ರಾಜಶೇಖರ್, ಸೈಯದ್ ಯೂನುಸ್, ಎಜಿಪಿ ನವೀನ್ ಕುಮಾರ್, ಜಾರ್ಜ್, ನೋಟರಿ ತಿಮ್ಮನಗೌಡ್ರು, ಜಮುನಾ, ಲೋಹಿತ, ಸವಿತಾ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.