ಕೂಡ್ಲಿಗಿ ಶಾಸಕ ಎನ್.ವೈ. ಗೋಪಾಲಕೃಷ್ಣ ಭರವಸೆ
ಕೂಡ್ಲಿಗಿ, ನ. 20- ಕೂಡ್ಲಿಗಿ ತಾಲ್ಲೂಕನ್ನು ಶತಾಯ-ಗತಾಯ ಪ್ರಯತ್ನ ಮಾಡಿ ತಾಲ್ಲೂ ಕಿನ ಜನತೆಯ ಅಭಿಪ್ರಾಯದಂತೆ ವಿಜಯ ನಗರ ಜಿಲ್ಲೆಗೆ ಸೇರಿಸಲು ಶ್ರಮಿಸುವೆ ಎಂದು ಕೂಡ್ಲಿಗಿ ಶಾಸಕ ಎನ್.ವೈ. ಗೋಪಾಲಕೃಷ್ಣ ತಾಲ್ಲೂಕಿನ ಜನತೆಗೆ ಭರವಸೆ ನೀಡಿದರು.
ತಾಲ್ಲೂಕಿನ ಕಾನಾಮಡಗು ದಾಸೋಹ ಮಠದಲ್ಲಿ ನಿನ್ನೆ ಆಯೋಜಿಸಿದ್ದ ವಿಜಯನಗರ ಜಿಲ್ಲೆಗೆ ಕೂಡ್ಲಿಗಿ ತಾಲ್ಲೂಕನ್ನು ಸೇರಿಸುವ ಕುರಿತ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಹಿಂದೆ ಸಿಎಂ ಯಡಿಯೂರಪ್ಪ ಅವರನ್ನು ಕಂಡು ಕೂಡ್ಲಿಗಿಯನ್ನು ವಿಜಯ ನಗರ ಜಿಲ್ಲೆಗೆ ಸೇರ್ಪಡೆ ಮಾಡುವಂತೆ ಒತ್ತಾಯ ಮಾಡಿದ್ದೆ. ಭಾನುವಾರ ಹೊಸ ಪೇಟೆಗೆ ಸಮೀಪದ ವೈಕುಂಠ ಅತಿಥಿ ಗೃಹಕ್ಕೆ ಕಾನೂನು ಸಚಿವ ಮಾಧುಸ್ವಾಮಿ ಬರಲಿದ್ದಾರೆ. ಅಲ್ಲಿಗೆ ಸಂಸದ ದೇವೇಂದ್ರಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ಪಿ. ಚನ್ನಬಸವನಗೌಡ್ರು, ಕೂಡ್ಲಿಗಿ ತಾಲ್ಲೂಕಿನ ಮುಖಂಡರ ಜೊತೆ ಮಾಧುಸ್ವಾಮಿ ಹಾಗೂ ಸಚಿವ ಆನಂದ್ ಸಿಂಗ್ ಅವರನ್ನು ಭೇಟಿ ಮಾಡಿ ವಿಜಯನಗರ ಜಿಲ್ಲೆಗೆ ಕೂಡ್ಲಿಗಿಯನ್ನು ಉಳಿಸುವಂತೆ ಮನವಿ ಮಾಡಲಾಗುವುದು ಎಂದು ಹೇಳಿದರು.
ಬಳ್ಳಾರಿ ಜಿಲ್ಲಾ ಬಿಜೆಪಿ ಎಸ್ಟಿ ಮೋರ್ಚಾ ಅಧ್ಯಕ್ಷ ಬಂಗಾರು ಹನುಮಂತು ಮಾತನಾಡಿ, ಕೂಡ್ಲಿಗಿ ತಾಲ್ಲೂಕನ್ನು ಘೋಷಿತ ವಿಜಯನಗರ ಜಿಲ್ಲೆಗೆ ಸೇರಿಸುವುದು ವೈಜ್ಞಾನಿಕವಾಗಿಯೂ, ಭೌಗೋಳಿಕ ವಾಗಿಯೂ ಸೂಕ್ತವಾಗಿದೆ ಎಂದರು.
ಈ ಸಂದರ್ಭದಲ್ಲಿ ಕಾನಾಮಡಗು ದಾಸೋಹ ಮಠದ ಶ್ರೀ ಐಮಡಿ ಶರಣಾ ರ್ಯರು, ಬಳ್ಳಾರಿ ಸಂಸದ ವೈ. ದೇವೇಂದ್ರಪ್ಪ, ಬಿಜೆಪಿ ಜಿಲ್ಲಾ ಅಧ್ಯಕ್ಷ ಪಿ. ಚನ್ನಬಸವನ ಗೌಡ್ರು, ಬಿಜೆಪಿ ಯುವ ಮುಖಂಡರಾದ ಭೀಮೇಶ್, ಕೆ.ಬಿ. ಮಂಜುನಾಥ, ಬಿಜೆಪಿ ಜಿಲ್ಲಾ ಹಿರಿಯ ಮುಖಂಡ ಕೆ.ಎಂ. ತಿಪ್ಪೇಸ್ವಾಮಿ, ತಾ.ಪಂ. ಸದಸ್ಯ ಹುಂಡೇ ಪಾಪಾನಾಯಕ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಚನ್ನಪ್ಪ ಮತ್ತಿತರರು ಹಾಜರಿದ್ದರು.