ಹೊನ್ನಾಳಿ, ನ.20- ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪ್ರತಿ ತಾಲ್ಲೂಕಿಗೆ 2 ಲಕ್ಷ ರೂ.ಗಳ ವೆಚ್ಚದಲ್ಲಿ ಆರೋಗ್ಯ ಕಿಟ್ ವಿತರಿಸುತ್ತಿದ್ದರೆ, ಬಿಜೆಪಿ ಕೊರೊನಾ ಹೆಸರಿನ ಮೂಲಕ ವಿವಿಧ ಹಂತಗಳಲ್ಲಿ ಭ್ರಷ್ಟಾಚಾರ ನಡೆಸುತ್ತಿದೆ ಎಂದು ಮಾಜಿ ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.
ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ತಾಲ್ಲೂಕಿಗೆ ರಾಜ್ಯ ಕಾಂಗ್ರೆಸ್ ಪಕ್ಷದ ವತಿಯಿಂದ ಆರೋಗ್ಯ ಹಸ್ತ ಕಿಟ್ ವಿತರಿಸಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಇತರೆ ರಾಜ್ಯಗಳಿಗೆ ಈ ಕಾರ್ಯ ಮಾದರಿಯಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷವು ಬಲಗೊಂಡಿದೆ ಹಾಗೂ ಪಕ್ಷ ಸದೃಢವಾಗಿಯು ಇದೆ ಕಾರ್ಯಕರ್ತರಲ್ಲಿ ಯಾವುದೇ ಆತಂಕ ಬೇಡ. ಬಿಜೆಪಿ ಹಾವಳಿಯಿಂದಾಗಿ ಕಾರ್ಯಕರ್ತರಲ್ಲಿನ ಅನೇಕ ಗೊಂದಲಗಳಿಗೆ ತಿಳಿ ಹೇಳಿದರು. ಸರ್ಕಾರದಿಂದ ತಾಲ್ಲೂಕಿಗೆ ಹಂಚಲು ಬಂದಿದ್ದ ಮಾಸ್ಕಗಳಲ್ಲಿನ ದುರುಪಯೋಗ ಹಾಗೂ ತಾಲ್ಲೂಕಿನಲ್ಲಿ ವಸತಿ ಹಂಚಿಕೆಯಲ್ಲಿನ ಲೋಪದೋಷಗಳ ಬಗ್ಗೆ ದಾಖಲೆ ಸಮೇತ ಮುಂದೆ ನಡೆಸುವ ಕಾರ್ಯಕ ರ್ತರ ಸಭೆಯಲ್ಲಿ ಬಹಿರಂಗಪಡಿಸುವುದಾಗಿ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ. ಮಂಜಪ್ಪ ಮಾತನಾಡಿ, ತಾಲ್ಲೂಕಿನ ಪ್ರತಿ ಗ್ರಾಮ ಪಂಚಾಯಿತಿಯಲ್ಲಿನ ಪಕ್ಷದ ಕೊರೊನ ವಾರಿಯರ್ಸ್‍ಗೆ ಈ ಆರೋಗ್ಯ ಕಿಟ್ ವಿತರಿಸುತ್ತಿದ್ದು, ಅವರೊಂದಿಗೆ ಪಕ್ಷದ ಮುಖಂಡರು ಸಹಕರಿಸುವುದಾಗಿ ಹೇಳಿ, ಕಿಟ್‍ನಲ್ಲಿರುವ ವಸ್ತುಗಳ ಪರಿಚಯಿಸಿ ಅದರ ಬಳಕೆಯ ಕಾರ್ಯವನ್ನು ವಿವರಿಸಿದರು.
ಕಾಂಗ್ರೆಸ್ ಪಕ್ಷದ ತಾಲ್ಲೂಕು ಅಧ್ಯಕ್ಷ ಸಣ್ಣಕ್ಕಿ ಬಸವನಗೌಡ ಮಾತನಾಡಿ, ಇಂದು ಸಾಂಕೇತಿಕವಾಗಿ ಹೊನ್ನಾಳಿ ಹಾಗೂ ಸಾಸ್ವೆಹಳ್ಳಿ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಗೆ ಎರಡು ಕಿಟ್‍ಗಳ ವಿತರಿಸುತ್ತಿದ್ದು. ನಾಳೆಯಿಂದಲೆ ಕ್ರಮವಾಗಿ ಇತರೆ ಪಂಚಾಯತಿಗಳಿಗೆ ಹೋಗಿ ನೇರವಾಗಿ ತಲುಪಿಸಿವ ಮೂಲಕ ಎಲ್ಲ ಹಳ್ಳಿಗಳಲ್ಲಿ ಈ ಕಾರ್ಯ ಯಶಸ್ವಿಗೊಳಿಸೋಣ ಎಂದರು.
ಸಮಾರಂಭದಲ್ಲಿ ಕಾಂಗ್ರೆಸ್ ಮುಖಂಡರಾದ ಹುಣುಸಘಟ್ಟ ಗದ್ದುಗೇಶ್, ವಿಶ್ವನಾಥ, ಹೆಚ್.ಎ. ಉಮಾಪತಿ ಮತ್ತಿತರರು ಮಾತನಾಡಿದರು. ಅರಕೆರೆ ಮಧುಗೌಡ, ಜಿ.ಹೆಚ್. ತಮ್ಮಣ್ಣ, ಮೈಲಪ್ಪ, ಮರಳುಸಿದ್ದಪ್ಪ, ಶೇಖರಪ್ಪ, ಕುಶಲ್, ತರಗನಹಳ್ಳಿ ರಮೇಶ್, ಅಮಿತ್ ಮತ್ತಿತರರಿದ್ದರು.