ಆಲೂರು ಚಂದ್ರಶೇಖರಪ್ಪ ಮೆಮೋರಿಯಲ್ ಟ್ರಸ್ಟ್ ನಿಂದ ವಿಶ್ವ ಮಧುಮೇಹ ಮೇಳ

ದಾವಣಗೆರೆ, ನ.14- ನಗರದ ಆಲೂರು ಚಂದ್ರಶೇಖರಪ್ಪ ಮೆಮೋರಿಯಲ್ ಟ್ರಸ್ಟ್ ಮತ್ತು ಆಸ್ಪತ್ರೆ, ಸಕ್ಕರೆ ಕಾಯಿಲೆ ತಪಾಸಣೆ ಹಾಗೂ ಸಂಶೋಧನಾ ಕೇಂದ್ರದ ವತಿಯಿಂದ ದಿ.ಆಲೂರು ಚಂದ್ರಶೇಖರಪ್ಪನವರ ಜ್ಞಾಪಕಾರ್ಥ ಹಾಗೂ ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ 36ನೇ ವಿಶ್ವ ಮಧುಮೇಹ ಮೇಳ ಕಾರ್ಯಕ್ರಮ ಶನಿವಾರ ನಡೆಯಿತು.

ಈ ವರ್ಷದ ಘೋಷಣೆ `ಸಕ್ಕರೆ ಕಾಯಿಲೆ ಮತ್ತು ಶುಶ್ರೂಷಕರು’ ವಿಷಯಕ್ಕೆ ಕಾರ್ಯಕ್ರಮದಲ್ಲಿ ಹೆಚ್ಚಿನ ಮಹತ್ವ ಕೊಡಲಾಗಿತ್ತು. ಶ್ರೀಮತಿ ಸುನಂದಮ್ಮ ಚಂದ್ರಶೇಖರಪ್ಪ ಆಲೂರು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. 

ಶ್ರೀಮತಿ ವರ್ಷಿತ ವರುಣ ಚಂದ್ರ ಆಲೂರು,  ಶ್ರೀಮತಿ ಪ್ರಿಯಾಂಕ ಹೇಮಂತ ಬಸಪ್ಪ ಆಲೂರು, ಶ್ರೀಮತಿ ಗಂಗಾಂಬಿಕಾ ಪ್ರಭಾಕರ್, ಶ್ರೀಮತಿ ಕವಿತ ವಿಶ್ವನಾಥ್, ಶ್ರೀಮತಿ ಸುಜಾತ ರವೀಂದ್ರ, ಶ್ರೀಮತಿ ಅನಿತ ಬಸವರಾಜ್ ಹಾಗೂ ಇತರರು ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕೋವಿಡ್ ಹಿನ್ನೆಲೆಯಲ್ಲಿ ವರ್ಚುಯಲ್ ಲೈವ್ ಮೀಟಿಂಗ್ ಮೂಲಕ ಕಾರ್ಯಕ್ರಮ ಬಿತ್ತರವಾಯಿತು.

ಸಕ್ಕರೆ ಕಾಯಿಲೆ ತಜ್ಞ ವೈದ್ಯ ಡಾ.ಮಂಜುನಾಥ ಆಲೂರು ಪ್ರಾಸ್ತಾವಿಕ ಭಾಷಣ ಮಾಡಿದರು. ಕಿರಣ್ ಚಂದ್ರ ಆಲೂರು ಕಾರ್ಯಕ್ರಮ ನಿರೂಪಿಸಿದರು. ಡಾ.ವರುಣ ಚಂದ್ರ ಆಲೂರು ಸಕ್ಕರೆ ಕಾಯಿಲೆ ಮತ್ತು ಶುಶ್ರೂಷಕರು ವಿಷಯದ ಮಹತ್ವ ತಿಳಿಸಿದರು. ಶ್ರೀಮತಿ ಶೈಲಜಾ ಮಂಜುನಾಥ ಆಲೂರು ವಂದಿಸಿದರು.

error: Content is protected !!