ದಾವಣಗೆರೆ,ನ.10- ಹೊನ್ನಾಳಿ ಹಿರೇಕಲ್ಮಠದಲ್ಲಿ ಈಚೆಗೆ ನಡೆದ ಶರನ್ನವರಾತ್ರಿ ಮತ್ತು ದಸರಾ ಮಹೋತ್ಸವ ಸಮಾರಂಭದಲ್ಲಿ ದಾವಣಗೆರೆೆಯ ಪ್ರತಿಭಾನ್ವಿತ ಲೇಖಕಿ ಶ್ರೀಮತಿ ಸುಕನ್ಯಾ ತ್ಯಾವಣಗಿ ಅವರು ಸಂಪಾದಿಸಿದ ಐದು ಕೃತಿಗಳನ್ನು ಬಿಡುಗಡೆ ಮಾಡಲಾಯಿತು.
ರಾಜ್ಯದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಸುಕನ್ಯಾ ಅವರ ಎಲ್ಲಾ ಕೃತಿಗಳನ್ನು ಲೋಕಾರ್ಪಣೆ ಮಾಡಿ, ಸಾಹಿತ್ಯಾಸಕ್ತರು ಪುಸ್ತಕಗಳನ್ನು ಕೊಂಡು ಓದುವುದರೊಂದಿಗೆ ಲೇಖಕರನ್ನು ಪ್ರೋತ್ಸಾಹಿಸಿ, ಬೆಳೆಸಬೇಕು ಎಂದು ಕರೆ ನೀಡಿದರು.
ಹಿರೇಕಲ್ಮಠದ ಶ್ರೀ ಡಾ. ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಹಾರನಹಳ್ಳಿ ರಾಮಲಿಂಗೇಶ್ವರ ಮಠದ ಶ್ರೀ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದರು.
ಸುಕನ್ಯಾ ಅವರು ರಚಿಸಿರುವ `ಉತ್ಕಟ’, `ಕಂಪನ’, `ಕಲರವ’, `ಘಾತ’ ಮತ್ತು `ಮಾನಿನಿ’ ಎಂಬ ಶೀರ್ಷಿಕೆಗಳ ಐದು ಕವನ ಸಂಕಲನಗಳ ಬಗ್ಗೆ ಹಿರೇಕಲ್ಮಠದ ಶ್ರೀಗಳು ಮತ್ತು ಸಚಿವ ಈಶ್ವರಪ್ಪ ಅವರುಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ಧಿ
ಅಧ್ಯಕ್ಷ ಜ್ಯೋತಿಪ್ರಕಾಶ್, ಸೂಡಾ ಸದಸ್ಯ ದೇವರಾಜನಾಯ್ಕ, ಮೆಸ್ಕಾಂ ನಿರ್ದೇಶಕ ರುದ್ರೇಶ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ. ಸುರೇಶ್, ಮುಖಂಡರುಗಳಾದ ಹೆಚ್.ಎ. ಉಮಾಪತಿ, ಬಿ. ಸುರೇಶ್, ವರ್ತಕ ಕಾಯಿ ಬಸವರಾಜ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.