ಪ್ರೊ|| ನರಸಿಂಹಪ್ಪ ಅವರನ್ನು ಸನ್ಮಾನಿಸಿದ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪವಿತ್ರ ರಾಮಯ್ಯ
ದಾವಣಗೆರೆ, ನ.7- ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಮತಿ ಪವಿತ್ರ ರಾಮಯ್ಯ ಅವರು ಇಂದು ನಗರದಲ್ಲಿರುವ ನೀರಾವರಿ ತಜ್ಞ ಪ್ರೊ.ನರಸಿಂಹಪ್ಪ ಅವರನ್ನು ಭೇಟಿ ಮಾಡಿ, ಸನ್ಮಾನಿಸಿದರು.
ಭೇಟಿಯ ಸಂದರ್ಭ ತುಂಗಾ ಮತ್ತು ಭದ್ರಾ ಜಲಾಶಯಗಳ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಹಾಗೂ ಅದರ ಬಗ್ಗೆ ಸಾಕಷ್ಟು ಮಾಹಿತಿ ಹೊಂದಿರುವ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡರು.
ಭದ್ರಾ ಜಲಾಶಯದ ನೀರನ್ನು ಯಾವ ರೀತಿ ಸದ್ಬಳಕೆ ಮಾಡಿಕೊಳ್ಳಬೇಕು, ರೈತರಿಗೆ ಯಾವ ರೀತಿಯಲ್ಲಿ ಪ್ರಾಧಿಕಾರ ಕೆಲಸ ಮಾಡ ಬೇಕು, ರೈತರಿಗೆ ಎಷ್ಟರ ಮಟ್ಟಿಗೆ ಪ್ರಾಧಿಕಾರ ಅನುಕೂಲ ಮಾಡಿ ಕೊಡಬೇಕು, ಜಮೀನಿನ ಕೊನೆಯ ಭಾಗದವರೆಗೂ ನೀರನ್ನು ಯಾವ ಯೋಜನೆಗಳ ಮೂಲಕ ಅನ್ನದಾತನಿಗೆ ತಲುಪಿ ಸಬೇಕು, ಜಲಾಶಯದ ಕಾಲುವೆಗಳನ್ನು ಯಾವ ರೀತಿ ಉನ್ನತಿಕರಿಸಬೇಕು, ನೀರು ಪೋಲಾಗ ದಂತೆ ಹೇಗೆ ಕ್ರಮ ವಹಿಸಬೇಕು, ಪ್ರಾಧಿಕಾರ ವನ್ನು ಯಾವ ರೀತಿಯಲ್ಲಿ ರೈತ ಸ್ನೇಹಿಯಾಗಿ ಸಬೇಕು, ಸರ್ಕಾರದಿಂದ ಬರುವ ಅನುದಾನ ವನ್ನು ಹೇಗೆ ಸದ್ಭಳಕೆ ಮಾಡಿಕೊಳ್ಳಬೇಕು, ಯಾವ ಕಾಮಗಾರಿಗಳು ಪ್ರಾಧಿಕಾರದಿಂದ ಹೆಚ್ಚಾಗಿ ಮಾಡಿದರೆ ರೈತರು ಬೆಳೆ ಬೆಳೆಯಲು ಹೆಚ್ಚಾಗಿ ಅನುಕೂಲವಾಗುತ್ತದೆ ಎಂಬುದರ ಬಗ್ಗೆ ಇನ್ನೂ ಹಲವಾರು ಪ್ರಮುಖ ವಿಚಾರಗಳ ಬಗ್ಗೆ ತಮ್ಮ ಮನದಾಳದ ಅನುಭವವನ್ನು ಹಂಚಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಭದ್ರಾ ಕಾಡಾ ಅಧ್ಯಕ್ಷರು, ನೀವು ಕೊಟ್ಟ ಎಲ್ಲಾ ಸಲಹೆಗಳನ್ನು ಖಂಡಿತಾ ಕಾರ್ಯ ರೂಪಕ್ಕೆ ತರುತ್ತೇನೆ. ನಿಮ್ಮ ಅನುಭವ ನಮಗೆ ಅತೀವ ಸ್ಫೂರ್ತಿ ತಂದಿದೆ. ರೈತ ಪರ ಹೋರಾಟದ ಹಿನ್ನೆಲೆಯಿಂದ ಬಂದ ನನಗೆ ನಿಮ್ಮಂತವರ ಮಾರ್ಗದರ್ಶನದಿಂದ ಇನ್ನಷ್ಟು ಹೆಚ್ಚಿನ ಕೆಲಸ ಮಾಡಲು ಉತ್ಸುಕವಾ ಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಾಸಕ ಎಸ್.ಎ. ರವೀಂದ್ರನಾಥ್, ಶಾಮನೂರು ಹೆಚ್.ಆರ್. ಲಿಂಗರಾಜ್ ಅವರುಗಳು ತಮ್ಮ ಭಾಗದ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿದರು. ಇದರೊಂದಿಗೆ ಕಳೆದ ಸುಮಾರು ವರ್ಷಗಳಿಂದ ದುರಸ್ತಿಯಾಗದೇ ಇರುವ ಕಾಲುವೆಗಳ ಬಗ್ಗೆ, ಹೊಲಗಾಲುವೆ ನಿರ್ಮಿಸಿಕೊಡುವ ಬಗ್ಗೆ ಇನ್ನು ಹಲವಾರು ಪ್ರಮುಖ ಸಮಸ್ಯೆಗಳ ಬಗ್ಗೆ ಮಾಹಿತಿ ಹಂಚಿ ಕೊಂಡರು. ಜೊತೆಗೆ ಎಲ್ಲಾ ರೀತಿಯ ಸಲಹೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.