ಆನ್‌ಲೈನ್‌ನಲ್ಲಿ ಕದಳಿ ಮಹಿಳಾ ವೇದಿಕೆಯ 151ನೇ ಕಮ್ಮಟ

ದಾವಣಗೆರೆ, ನ.4-  ಕದಳಿ ಮಹಿಳಾ ವೇದಿಕೆಯ ನಗರ ಘಟಕದಿಂದ 118ನೇ ಕದಳಿ ಕಮ್ಮಟದಲ್ಲಿ 151ನೇ ಗಾಂಧಿ ಜಯಂತಿ ಹಾಗೂ ಲಿಂ. ಷಡಾಕ್ಷರಪ್ಪ ಮತ್ತು  ಅಂಜಿನಮ್ಮ ಬಿ.ಕಲ್ಪನಹಳ್ಳಿ ಅವರ ದತ್ತಿ ಕಾರ್ಯಕ್ರಮವನ್ನು ಆನ್‌ಲೈನ್ ಮೂಲಕ ನಡೆಸಲಾಯಿತು.

ದತ್ತಿ ಉಪನ್ಯಾಸ ನೀಡಿದ ರಾಜ್ಯ ಉತ್ತಮ ಉಪನ್ಯಾಸಕ ಪ್ರಶಸ್ತಿ ಪುರಸ್ಕೃತ ಎಚ್‌. ಮಲ್ಲಿಕಾರ್ಜುನ್‌ ಅವರು, `ಯುಗ ಪುರುಷರು ಗಾಂಧೀಜಿ ಹಾಗೂ ಬಸವಣ್ಣನವರ ತತ್ವಾದರ್ಶಗಳಲ್ಲಿ ಸಾಮ್ಯತೆ’ ಕುರಿತು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಕದಳಿ ಮಹಿಳಾ ವೇದಿಕೆಯ ಸದಸ್ಯರಾದ ಪ್ರಮೀಳ ನಟರಾಜ್‌ ಮಾತನಾಡಿ, ದತ್ತಿಯ ಪ್ರಾಮುಖ್ಯತೆ ಹಾಗೂ ಪ್ರಸಕ್ತ ವರ್ಷದ ವೇದಿಕೆಯ ಆನ್‌ಲೈನ್ ಚಟುವಟಿಕೆಗಳ ಕುರಿತು ತಿಳಿಸಿದರು.

ಕದಳಿ ಮಹಿಳಾ ವೇದಿಕೆಯ ನಗರ ಘಟಕದ ಗೌರವಾಧ್ಯಕ್ಷರಾದ ಶ್ರೀಮತಿ ಜಯಶೀಲ ಷಡಾಕ್ಷರಪ್ಪ, ದತ್ತಿ ದಾನಿಗಳಾದ ಶ್ರೀಮತಿ ಮಮತ ನಾಗರಾಜ್ ಉಪಸ್ಥಿತರಿದ್ದರು.

ಕಮ್ಮಟದ ಆನ್‌ಲೈನ್ ಕಾರ್ಯಕ್ರಮವನ್ನು ಶ್ರೀಮತಿ ನಿರ್ಮಲ ಶಿವಕುಮಾರ್ ನಡೆಸಿಕೊಟ್ಟರು. ವೇದಿಕೆಯಲ್ಲಿ ಸರಸ್ವತಿ ತಂಡದವರು ಪ್ರಾರ್ಥಿಸಿದರು. ನಗರ ಘಟಕದ ಅಧ್ಯಕ್ಷರಾದ ಕುಸುಮ ಲೋಕೇಶ್‌ ಸ್ವಾಗತಿಸಿದರು. ನಗರ ಘಟಕದ ಕಾರ್ಯದರ್ಶಿ ಶ್ರೀಮತಿ ವಿಜಯ ಚಂದ್ರಶೇಖರ್‌ ಅವರು ದತ್ತಿ ದಾನಿಗಳು ಹಾಗೂ ದತ್ತಿ ಉಪನ್ಯಾಸಕರನ್ನು ಪರಿಚಯಿಸಿದರು. 

ವೇದಿಕೆಯ ನಗರ ಘಟಕದ ಸಹಕಾರ್ಯದರ್ಶಿ ಶ್ರೀಮತಿ ಪೂರ್ಣಿಮಾ ಪ್ರಸನ್ನಕುಮಾರ್  ವಂದಿಸಿದರು.

ಕಮ್ಮಟದ ಪ್ರಯುಕ್ತ ಕದಳಿ ಸದಸ್ಯರಿಗೆ ವಿಷಯ ಕುರಿತು 3 ರಿಂದ 4 ನಿಮಿಷಗಳ ಸ್ವವಿಚಾರಗಳನ್ನು ಆಡಿಯೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಗಿತ್ತು. 

error: Content is protected !!