ಹೆಣ್ಣು ಪ್ರತಿ ಕುಟುಂಬದ ಕಣ್ಣು : ಎಂ.ಪಿ.ಲತಾ

ಹರಪನಹಳ್ಳಿ,ನ.4-  ಹೆಣ್ಣು ಪ್ರತಿ ಕುಟುಂಬದ ಕಣ್ಣು. ಅಂತಹ ಹೆಣ್ಣನ್ನು ಕೀಳಾಗಿ ಕಾಣಬೇಡಿ. ಇವತ್ತು ಎಲ್ಲಾ ರಂಗಗಳಲ್ಲಿ ಹೆಣ್ಣು ಪ್ರವೇಶ ಮಾಡಿದ್ದಾಳೆ. ಅಂತಹ ಮಹಿಳೆಯರಿಗೆ ಗೌರವ ನೀಡಬೇಕು ಎಂದು ಕೆಪಿಸಿಸಿ ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ್‍  ಎಂದು ಕರೆ ನೀಡಿದರು.

ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಹಮ್ಮಿಕೊಂಡಿದ್ದ ಎಂ.ಪಿ. ರವೀಂದ್ರ ಅವರ ದ್ವಿತೀಯ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವ್ಯಕ್ತಿಗಿಂತ ಪಕ್ಷ ದೊಡ್ಡದಾಗಿದ್ದು, ಕಾಂಗ್ರೆಸ್ ಪಕ್ಷದ ಸಂಘಟನೆಗೆ ನಾವು-ನೀವು ದುಡಿಯೋಣ ಎಂದರು. 

ಯಾವ ಶಾಸಕರು ಮಾಡದ ಕೆಲಸಗಳನ್ನು ಮಾಜಿ ಶಾಸಕ ಎಂ.ಪಿ. ರವೀಂದ್ರ ಮಾಡಿದ್ದಾರೆ. ಹರಪನಹಳ್ಳಿ ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿ  ಅಳಿಸಿ ಹಾಕಲು  ರವೀಂದ್ರ 371ಜೆ 60 ಕೆರೆಗಳಿಗೆ ನೀರು ತುಂಬಿಸುವಂತಹ ಮಹ ತ್ತರದ ಕೆಲಸಗಳನ್ನು ಮಾಡುವ ಮೂಲಕ ಹೆಜ್ಜೆ ಗುರುತು ಮಾಡಿದ್ದಾರೆ ಎಂದು ಅವರು ಹೇಳಿದರು.

ರೈತ ಸಂಘದ ಕಲ್ಲಳ್ಳಿ ಗೋಣೆಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮೈದೂರು ರಾಮಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆ ಕಂಚಿಕೇರಿ ಜಯಲಕ್ಷ್ಮಿ, ರವಿ ಯುವ ಶಕ್ತಿ ಪಡೆ ಅಧ್ಯಕ್ಷ ಉದಯ್ ಶಂಕರ್ ಮಾಗಾನಹಳ್ಳಿ,  ಹುಲಿಕಟ್ಟಿ ಚಂದ್ರಪ್ಪ, ಅಡವಿಹಳ್ಳಿ ಪೂಜಾರ್ ರಾಜು  ಮತ್ತಿತರರು ಮಾತನಾಡಿದರು. 

ಯಡಿಹಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಶೇಖರಪ್ಪ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷೆ ಪುಷ್ಪ ದಿವಾಕರ್,  ಮುಖಂಡರಾದ ಕೆ.ಎಂ.ಬಸವರಾಜಯ್ಯ, ಮುದಗಲ್ ಗುರುನಾಥ್, ಶಿವಕುಮಾರ್ ಗೌಡ, ಕನಕನ ಬಸಾಪುರದ ಮಂಜುನಾಥ್,  ಪಿ.ಎಲ್.ಡಿ ಬ್ಯಾಂಕ್ ಸದಸ್ಯ ಜಗದೀಶ್, ರಾಮಪ್ಪ, ಕಾನಹಳ್ಳಿ ರುದ್ರಪ್ಪ, ಕೊಟ್ರಯ್ಯ, ಬಸವರಾಜ್ ಭಂಡಾರಿ, ರಾಯದುರ್ಗದ ವಾಗೀಶ, ಮತ್ತೂರು ಬಸವರಾಜ್, ದ್ಯಾಪನಾಯಕನಹಳ್ಳಿ ವೃಷಭೇಂದ್ರ, ನೇತ್ರಾವತಿ, ಉಮಾಶಂಕರ್ ಮತ್ತಿತರರು ಭಾಗಹಿಸಿದ್ದರು.

error: Content is protected !!