ಜಿಗಳಿಯಲ್ಲಿ ಸಂಭ್ರಮದ ವಾಲ್ಮೀಕಿ ಜಯಂತಿ

ಮಲೇಬೆನ್ನೂರು, ಅ.31 – ಜಿಗಳಿ ಗ್ರಾಮದಲ್ಲಿ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಗ್ರಾಮ ಪಂಚಾಯಿತಿ ಕಛೇರಿ, ಸ.ಹಿ. ಪ್ರಾ ಶಾಲೆ ಮತ್ತು ವಾಲ್ಮೀಕಿ ವೃತ್ತದಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಲಾಯಿತು.

ಶಿಕ್ಷಕ ಮಲ್ಲಿಕಾರ್ಜುನ್ ಮಾತನಾಡಿದರು. ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಜಿ.ಆನಂದಪ್ಪ, ಎಸ್‍ಡಿಎಂಸಿ  ಮಾಜಿ ಅಧ್ಯಕ್ಷ ಜಿ.ಪಿ. ಹನುಮನಗೌಡ, ಗ್ರಾ.ಪಂ. ಮಾಜಿ ಸದಸ್ಯ ಡಿ.ಎಂ. ಹರೀಶ್, ಜೆ. ಕೃಷ್ಣಮೂರ್ತಿ, ಮುಖಂಡರಾದ ಬಳಸನೂರು ಚಂದ್ರಪ್ಪ, ಬಿ.ಸೋಮಶೇಖರಚಾರಿ, ಕೆ.ಎಂ. ರಾಯಪ್ಪ, ಕೆ.ಎಸ್ ನಂದ್ಯಪ್ಪ, ನಿಟ್ಟುವಳ್ಳಿ ಕರಿಬಸಪ್ಪ, ಕೆ.ಹೆಚ್. ಬಸವರಾಜ್, ಬೆಣ್ಣೇರ ನಂದ್ಯಪ್ಪ, ನಿಂಗಪ್ಪ, ಪಾಲಾಕ್ಷಪ್ಪ, ಚಂದ್ರಪ್ಪ, ಪಿಡಿಓ ದಾಸರ ರವಿ, ಗ್ರಾ.ಪಂ. ಕಾರ್ಯದರ್ಶಿ ಶೇಖರ್ ನಾಯ್ಕ್, ಬಿಲ್ ಕಲೆಕ್ಟರ್ ಬಿ.ಮೌನೇಶ್, ಬಸವರಾಜಯ್ಯ, ಮುತ್ತು, ರಂಗಪ್ಪ, ಶಾಲಾ ಮುಖ್ಯ ಶಿಕ್ಷಕ ಕರಿಬಸಪ್ಪ, ಶಿಕ್ಷಕರಾದ ಶ್ರೀನಿವಾಸ ರೆಡ್ಡಿ, ಗುಡ್ಡಪ್ಪ, ಲೋಕೇಶ್, ವೀಣಾ, ದೀಪಾ ಮತ್ತಿತರರು ಭಾಗವಹಿಸಿದ್ದರು.

ಏಕತಾ ಪ್ರತಿಜ್ಞೆ :  ದೇಶದ ಮಾಜಿ ಉಪ ಪ್ರಧಾನಿ ಸ್ವಾತಂತ್ರ್ಯ ಹೋರಾಟಗಾರ, ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಜನ್ಮದಿ ನದ ಅಂಗವಾಗಿ ಗ್ರಾ.ಪಂ ಕಛೇರಿಯಲ್ಲಿ  ರಾಷ್ಟ್ರೀಯ ಏಕತಾ ದಿನವನ್ನು ಆಚರಿಸಲಾಯಿತು. ಗ್ರಾ.ಪಂ ಪಿಡಿಓ ದಾಸರ ರವಿ ಅವರು ಗ್ರಾ.ಪಂ. ಸಿಬ್ಬಂದಿ ಹಾಗೂ ಗ್ರಾಮಸ್ಥರಿಗೆ ಏಕತಾ ಪ್ರತಿಜ್ಞೆ  ಬೋಧಿಸಿದರು.

error: Content is protected !!