ಜಗಳೂರಿನಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ

ಜಗಳೂರು, ಅ.31- ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರಳವಾಗಿ ಆಚರಣೆ ಮಾಡಲಾಯಿತು. ಅಧಿಕಾರಿ ವರ್ಗ, ಸಮಾಜದ ಮುಖಂಡರು ಹಾಗೂ ಹೋರಾಟಗಾರರು ಭಾಗವಹಿಸಿ, ಪೂಜೆ ಸಲ್ಲಿಸಿದರು. ನಂತರ  ಸಿಹಿ ಹಂಚಿ ಸಂಭ್ರಮಿಸಿದರು. 

ಪಟ್ಟಣದ ವಾಲ್ಮೀಕಿ ಭವನದ ಆವರಣದಲ್ಲಿ ಇಂದು ತಾಲ್ಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಲ್ಲೂಕು ನಾಯಕ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗ ವಾಗಿ ವಾಲ್ಮೀಕಿ ಅವರ ಕಂಚಿನ ಪುತ್ಥಳಿಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡ ಲಾಯಿತು. 

ಈ ಸಂದರ್ಭದಲ್ಲಿ ತಹಸೀ ಲ್ದಾರ್ ಡಾ.ನಾಗವೇಣಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಹೇಶ್ವರಪ್ಪ, ನಾಯಕ ಸಮಾಜದ ಕಾರ್ಯ ದರ್ಶಿ ಸೂರಲಿಂಗಪ್ಪ, ಮಾಜಿ ಕಾರ್ಯದರ್ಶಿ ಬಿ. ಲೋಕೇಶ್, ಮುಖಂಡರಾದ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ, ಬಿಳಿಚೋಡು ಮಹೇಶ್, ಜಿ.ಪಂ ಸದಸ್ಯೆ ಸವಿತಾ, ತಾ.ಪಂ ಸದಸ್ಯರಾದ ಟಿ. ಬಸವರಾಜ್, ಶಂಕರ್‍ನಾಯ್ಕ, ಪ.ಪಂ ಸದಸ್ಯ ಆರ್.ತಿಪ್ಪೇಸ್ವಾಮಿ, ಪಾಪಲಿಂಗಪ್ಪ, ಮುಖಂಡರಾದ ಪಾಲನಾಯಕನ ಕೋಟೆ ಓಬಣ್ಣ, ಎ.ಪಿ ಪಾಲಯ್ಯ, ಸಿಪಿಐ ಡಿ. ದುರುಗಪ್ಪ, ಬಿಇಒ ವೆಂಕಟೇಶ್ ಇದ್ದರು.

error: Content is protected !!