ದಾವಣಗೆರೆ, ಅ.31- ವಿನೋಬನಗರದ 2ನೇ ಮುಖ್ಯರಸ್ತೆ ಅಮಿತ್ ಚಿತ್ರಮಂದಿರದ ಮುಂಭಾಗ ಇರುವ ಖಾಲಿ ಜಾಗದಲ್ಲಿ ಕಸದ ರಾಶಿಯು ಗಬ್ಬು ವಾಸನೆಯಿಂದ ತುಂಬಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ ಈ ಖಾಲಿ ಜಾಗದಲ್ಲಿ ನಿತ್ಯ ನೂರಾರು ಜನರು ಕಸವನ್ನು ತಂದು ದಿನಾ ಸುರಿಯುತ್ತಿದ್ದಾರೆ. ಮೊನ್ನೆ ಸುರಿದ ಮಳೆಯಿಂದ ಅದು ಕೊಚ್ಚೆಯಂತಾಗಿ ದುರ್ವಾಸನೆ ಬೀರುತ್ತಿದೆ. ಇದರಿಂದ ಅಲ್ಲಿ ವಾಸಿಸುವ ಜನರು ಹಾಗೂ ವ್ಯಾಪಾರಸ್ಥರು ನರಕಯಾತನೆ ಅನುಭವಿಸುವಂತಾಗಿದೆ.
ಖಾಲಿ ಜಾಗ ಪೂರ್ತಿ ಕೆಸರು ಗದ್ದೆಯಂತಾಗಿದ್ದು, ಹಂದಿಗಳ ತಾಣವಾಗಿ ಮಾರ್ಪಟ್ಟಿದೆ. ಇದರ ಬಗ್ಗೆ ಸ್ಥಳೀಯ ವಾಸಿಗಳು ಜನಪ್ರತಿನಿಧಿಗಳಿಗೆ ದೂರು ನೀಡಿದರೂ ಪ್ರಯೋಜನವಾಗದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಜನಪ್ರತಿನಿಧಿಗಳು ಮತ್ತು ಪಾಲಿಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸ ಬೇಕೆಂದು ಈ ಭಾಗದ ನಾಗರಿಕರು ಆಗ್ರಹಿಸಿದ್ದಾರೆ.