ದಾವಣಗೆರೆ, ಜು.25- ವಿದ್ಯಾಸಂಸ್ಥೆಗಳು ಕೇವಲ ಶಿಕ್ಷಣ ಸೇವೆಗೆ ಸೀಮಿತವಾಗದೆ, ಸಾಮಾ ಜಿಕ ಪರಿಸರ ಕಾಳಜಿವುಳ್ಳ ಸೇವೆಗಳನ್ನೂ ಕೈಗೊಳ್ಳುವ ಮೂಲಕ ನಾಗರಿಕ ಸೇವೆಗೆ ಮುಂದಾ ಗಬೇಕು ಎಂದು ಡಯಟ್ ಪ್ರಾಂಶುಪಾಲ ಹೆಚ್.ಕೆ.ಲಿಂಗರಾಜು ಕರೆ ನೀಡಿದರು.
ಜಿಲ್ಲಾ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟವು ನಾಗರ ಪಂಚಮಿ ಅಂಗವಾಗಿ ಶನಿವಾರ ಬಾತಿ ಗುಡ್ಡದಲ್ಲಿ ಆಯೋಜಿಸಿದ್ದ ಹುತ್ತಕ್ಕೆ ಹಾಲೆರೆಯುವ ಬದಲು, ಗಿಡ ನೆಟ್ಟು ನೀರೆರೆಯಿರಿ ಎಂಬ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಅವರು ಮಾತನಾಡಿದರು.
ನಾಟಿ ಮಾಡಿ, ಕಾಪಾಡಿದ ಸಸಿ ದೊಡ್ಡದಾಗಿ ನೆರಳು, ಶುದ್ಧ ಗಾಳಿ ಕೊಡುತ್ತದೆ. ಉತ್ತಮ ಪರಿಸರ ಹೂ ಹಣ್ಣು ಸಹ ನೀಡುತ್ತದೆ. ಆದರೆ, ಹಬ್ಬ ಹರಿದಿನ ಆಚರಣೆ ಹೆಸರಲ್ಲಿ ಅನವಶ್ಯಕವಾಗಿ ತಿನ್ನುವ ಪದಾರ್ಥಗಳನ್ನು ಚೆಲ್ಲುವುದರಿಂದ ಯಾವ ಪ್ರಯೋ ಜನವೂ ಇಲ್ಲ. ಮನುಷ್ಯ ಹಕ್ಕಿಗಾಗಿ ಹೋರಾಡದೆ, ಕರ್ತವ್ಯಕ್ಕಾಗಿ ನಿಷ್ಟರಾಗಿರಬೇಕು ಎಂದರು.
ಒಕ್ಕೂಟದ ಅಧ್ಯಕ್ಷ ಕೆ.ಎಂ. ಉಮಾಪತಯ್ಯ ಮಾತನಾಡಿ, ಬಾತಿ ಗುಡ್ಡದಲ್ಲಿನ ಪವಿತ್ರ ವನವನ್ನು ಒಕ್ಕೂಟದ ವತಿಯಿಂದ ದತ್ತು ಪಡೆದು ಪ್ರವಾಸಿ ಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತಮ್ಮ ಹುಟ್ಟು ಹಬ್ಬದ ದಿನದ ಪ್ರಯುಕ್ತ 1 ಲಕ್ಷದ 1 ಸಾವಿರ ದೊಂದು ರೂ. ನೀಡುವ ಭರವಸೆ ನೀಡಿದರು.
ಒಕ್ಕೂಟದ ಕಾರ್ಯಾಧ್ಯಕ್ಷ ಕೆ.ಸಿ.ಲಿಂಗರಾಜ್ ಆನೆಕೊಂಡ ಮಾತನಾಡಿ, ಬಾತಿ ಗುಡ್ಡದಲ್ಲಿ 25 ಸಾವಿರ ಸಸಿ ನಾಟಿ ಮಾಡಿಸುವುದಾಗಿ ಹೇಳಿದರು. ಸಹ ಕಾರ್ಯದರ್ಶಿ ಹಾಗೂ ಬಿಜೆಎಂ ಶಾಲೆ ಕಾರ್ಯದರ್ಶಿ ಕೆ.ಎಸ್.ಮಂಜುನಾಥ್ ಅಗಡಿ, ಪ್ರಧಾನ ಕಾರ್ಯದರ್ಶಿ ರಾಮಮೂರ್ತಿ ಮಾತನಾಡಿದರು.
ರಾಷ್ಟ್ರೋತ್ಥಾನ ಶಾಲೆ ಕಾರ್ಯದರ್ಶಿ ಜಯಣ್ಣ, ಉಪಾಧ್ಯಕ್ಷರಾದ ಆರ್.ಎಲ್.ಪ್ರಭಾಕರ್, ಎಂ.ಎನ್.ಸಂತೋಷ್ ಕುಮಾರ್, ಪೃಥ್ವಿರಾಜ್ ಬಾದಾಮಿ, ವಿಜಯಕುಮಾರ್, ನ್ಯಾಷನಲ್ ಶಾಲೆಯ ವಿಜಯರಾಜ್, ಕಿಡ್ಸ್ ಶಾಲೆಯ ಹೆಚ್.ಬಸವರಾಜ್, ಬಾತಿ ಸರ್.ಎಂ.ವಿಶ್ವೇಶ್ವರಯ್ಯ ಶಾಲೆಯ ಮಲ್ಲಿಕಾರ್ಜುನಯ್ಯ, ಯೂರೋ ಕಿಡ್ಸ್‌ನ ನಾಗರಾಜ್, ಶ್ರೀ ಜಗದ್ಗುರು ಜಯವಿಭವ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಮನೋಹರ್ ಚಿಗಟೇರಿ, ಈಶ್ವರಮ್ಮ ಶಾಲೆಯ ಕೆ.ಎಸ್.ಪ್ರಭುಕುಮಾರ್ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.