ಜಿಲ್ಲಾ ಕಾಂಗ್ರೆಸ್‌ನಿಂದ ಕೊರೊನಾ ಕುರಿತು ಉಪನ್ಯಾಸ

ದಾವಣಗೆರೆ, ಜು. 25 – ಜಿಲ್ಲಾ ಕಾಂಗ್ರೆಸ್ ವತಿಯಿಂದ ಕೆಪಿಸಿಸಿ ಆರೋಗ್ಯ ಹಸ್ತ ಕಾರ್ಯಕ್ರಮದಡಿ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ನಿನ್ನೆ ಏರ್ಪಾಡಾಗಿದ್ದ ಕಾರ್ಯಕ್ರಮದಲ್ಲಿ ಅನಸ್ತೇಷಿಯಾ ತಜ್ಞ ಡಾ|| ರವಿ ಅವರು ಕೋವಿಡ್-19 ಸಾಂಕ್ರಾಮಿಕ ಸೋಂಕು ಕುರಿತು ಉಪನ್ಯಾಸ ನೀಡಿದರು. 

ಕೋವಿಡ್-19 ಸಾಂಕ್ರಾಮಿಕ ರೋಗ 2019ರ ನವೆಂಬರ್‍ನಲ್ಲಿ ಮೊದಲ ಬಾರಿಗೆ ಚೀನಾ ದೇಶದ ಹುವಾಂಗ್ ನಗರದಲ್ಲಿ ಕಾಣಿಸಿಕೊಂಡು ಅತಿಬೇಗ ಪ್ರಪಂಚದ ಎಲ್ಲಾ ಕಡೆಗಳಲ್ಲೂ ಹರಡಿತು. ಇದರಿಂದಾಗಿ ಸಾವು ಕಡಿಮೆ ಆದರೂ ಸಹ ಬೇರೆ-ಬೇರೆ ರೋಗಗಳು ಇರುವವರಿಗೆ ಶ್ವಾಸಕೋಶದಲ್ಲಿ ಕಾಣಿಸಿ ಕೊಂಡು ಸಾವು ಸಂಭವಿಸುತ್ತಿದೆ ಎಂದರು.

ಪ್ರಪಂಚದ ತುಂಬಾ ಜನ ಜೀವನವನ್ನೇ ಅಸ್ತವ್ಯಸ್ತ ಮಾಡಿದ ಕೋವಿಡ್-19 ಸಾಂಕ್ರಾ ಮಿಕ ಸೋಂಕು ಇಂದಿಗೂ ಸಹ ಜನ ಭಯ ಭೀತರಾಗಿ ಜೀವನ ನಡೆಸುವಂತೆ ಮಾಡಿದೆ. ನಾಗರಿಕರಲ್ಲಿ ಈ ಕೋವಿಡ್-19 ಸಾಂಕ್ರಾಮಿಕ ರೋಗದ ಬಗ್ಗೆ ಸಾಕಷ್ಟು ತಪ್ಪು ಕಲ್ಪನೆ ಇದ್ದು, ಇದನ್ನು ಹೋಗಲಾಡಿಸಬೇಕೆಂಬ ದೃಷ್ಟಿಯಿಂದ ಕೆಪಿಸಿಸಿ ಆರೋಗ್ಯ ಹಸ್ತ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸ್ವಾಗತಾರ್ಹ ಎಂದರು.

ಈ ಉಪನ್ಯಾಸದಲ್ಲಿ ಭಾಗವಹಿಸಿರುವ ಕಾರ್ಯಕರ್ತರು ಕೋವಿಡ್-19 ಸಾಂಕ್ರಾಮಿಕ ಸೋಂಕು ಹೋರಾಡುವ ಸ್ವಯಂ ಸೇವಕರಾಗಿ ರೋಗ ಬರದಂತೆ ಎಚ್ಚರಿಕೆ ವಹಿಸುವ ಕೆಲಸವನ್ನು ನಾಗರಿಕರಿಗೆ ತಿಳಿಸಬೇಕೆಂದು ಕರೆ ನೀಡಿದರು.

ಕಾರ್ಯಕರ್ತರು ಕೇಳಿದ ಹಲವು ಪ್ರಶ್ನೆಗ ಳಿಗೆ ಉತ್ತರಿಸಿದ ಡಾ|| ರವಿ ಅವರನ್ನು ಜಿಲ್ಲಾ ಕಾಂಗ್ರೆಸ್ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಕಾರ್ಯದರ್ಶಿ ಎಸ್.ಮಲ್ಲಿಕಾರ್ಜುನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಸಿ.ನಿಂಗಪ್ಪ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಅನಿತಾಬಾಯಿ ಮಾಲತೇಶ್, ಪಾಲಿಕೆ ವಿಪಕ್ಷ ನಾಯಕ ಎ. ನಾಗರಾಜ್ ಶ್ರೀಮತಿ ಆಶಾರಾಣಿ ಮುರುಳಿ, ಶ್ರೀಮತಿ ಸುಷ್ಮಾ ಪಾಟೀಲ್, ಮುಜಾಹಿದ್, ಅಲಿ ರಹಮತ್, ಕೆ.ಎಲ್. ಹರೀಶ್, ಬಾತಿ ಶಿವಕುಮಾರ್, ಮಾಲತೇಶ್, ರಾಘು ದೊಡ್ಡಮನಿ, ಶ್ರೀಮತಿ ಸುನಿತಾ ಭೀಮಣ್ಣ, ಶ್ರೀಮತಿ ಉಮಾ ಕುಮಾರ್ ಮತ್ತಿತರರಿದ್ದರು.

error: Content is protected !!