ವರ್ತಕ ದಿ.ವೇದಮೂರ್ತಿಯವರ ವ್ಯಕ್ತಿತ್ವ : ಗಣ್ಯರ ಗುಣಗಾನ

ದಾವಣಗೆರೆ, ಅ.23- ನಗರದ ಹಿರಿಯ ವರ್ತಕರಾಗಿದ್ದ ಜಿ. ವೇದಮೂರ್ತಿ ಅವರು ಸ್ನೇಹಜೀವಿ, ಅಜಾತಶತ್ರು, ವ್ಯವಹಾರ ಚತುರ, ದಾನಿಯಾಗಿದ್ದರು ಎಂದು ಉಜ್ಜಯಿನಿ ಜಗದ್ಗುರು ಶ್ರೀ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳೂ ಸೇರಿದಂತೆ, ಅನೇಕ ಗಣ್ಯರು ಸ್ಮರಿಸಿದರು. 

ನಗರದ ತೊಗಟವೀರ ಕಲ್ಯಾಣ ಮಂಟಪ ದಲ್ಲಿ ಇಂದು ನಡೆದ ಜಿ. ವೇದಮೂರ್ತಿ ಅವರ ಶ್ರದ್ಧಾಂಜಲಿ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ವೇದಮೂರ್ತಿ ಅವರು ಬಡತನದಿಂದ ಮೇಲೆ ಬಂದು ಶ್ರೀಮಂತರಾಗಿದ್ದರೂ, ಹೃದಯ ಶ್ರೀಮಂತಿಕೆಯನ್ನು ಹೊಂದಿದ್ದರು ಎಂದು ಜಗದ್ಗುರುಗಳು ವಿಶ್ಲೇಷಿಸಿದರು. ಕಾಯ ಅಳಿದರೂ ಮನುಷ್ಯ ಮಾಡಿದ ಕಾಯಕ ಉಳಿ ಯಬೇಕು ಎಂಬುದಕ್ಕೆ ವೇದಮೂರ್ತಿಯವರೇ ಉದಾಹರಣೆ ಎಂದು ವ್ಯಾಖ್ಯಾನಿಸಿದರು. 

ಮಾಜಿ ಸಚಿವ ಎಸ್. ಎಸ್. ಮಲ್ಲಿಕಾ ರ್ಜುನ್ ಅವರು, ವೇದಮೂರ್ತಿಯವರೊಂ ದಿಗೆ ತಮ್ಮ ಮನೆತನದವರು ಹೊಂದಿದ್ದ ಬಾಂ ಧವ್ಯವನ್ನು ನೆನಪು ಮಾಡಿಕೊಂಡರು. ಮಹಾ ನಗರಪಾಲಿಕೆಯ ಮಹಾಪೌರ ಬಿ.ಜಿ. ಅಜಯ ಕುಮಾರ್ ಮಾತನಾಡಿ, ಯಾವ ಬಡವನೇ ಆಗಲಿ, ಅವರ ಮನೆಗೆ ಹೋದರೆ ಖಾಲಿ ಕೈಯಲ್ಲಿ ಕಳುಹಿಸುತ್ತಿರಲಿಲ್ಲ ಎಂದು ಹೇಳಿದರು. 

ಆವರಗೊಳ್ಳದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಹಿರಿಯ ಲೆಕ್ಕ ಪರಿಶೋಧಕ ಅಥಣಿ ವೀರಣ್ಣ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪಾಲಿಕೆ ಸದಸ್ಯ ದೇವರಮನೆ ಶಿವಕುಮಾರ್,  ಪಾಲಿಕೆ ಮಾಜಿ ಸದಸ್ಯ ಶಿವನಳ್ಳಿ ರಮೇಶ್ ಮಾತನಾಡಿದರು. 

ಪ್ರಶಾಂತ್ ಸ್ವಾಗತಿಸಿದರು. ಶ್ರೀಮತಿ ಅಶ್ವಿನಿ ಪ್ರಶಾಂತ್ ಪ್ರಾಸ್ತಾವಿಕವಾಗಿ ಮಾತನಾ ಡಿದರು. ವೇದಿಕೆಯಲ್ಲಿ ಪಾಲಿಕೆ ಸದಸ್ಯ ಎಸ್.ಟಿ. ವೀರೇಶ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!