ದಾವಣಗೆರೆ, ಅ.22- ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಪ್ರಮಾಣವನ್ನು ಶೇ.7.5ಕ್ಕೆ ಹೆಚ್ಚಿಸಿ ಜಾರಿಗೊಳಿಸಲು ಸರ್ಕಾರ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಜಿಲ್ಲಾ ವಾಲ್ಮೀಕಿ ನಾಯಕ ಸಮಾಜದಿಂದ ನಗರದಲ್ಲಿ ಇಂದಿನಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಲಾಗಿದೆ.
ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ ಹೂಡಿರುವ ಸಮಾಜದ ಮುಖಂಡರು, ಇದೇ ದಿನಾಂಕ 31ರವರೆಗೆ ಧರಣಿ ನಡೆಸಲು ಮುಂದಾಗಿದ್ದಾರೆ. ತಾಲ್ಲೂಕು ನಾಯಕ ಸಮಾಜ ಹಾಗೂ ಜಿಲ್ಲಾ ವಾಲ್ಮೀಕಿ ಯುವ ಘಟಕ, ಮಹಿಳಾ ಘಟಕ, ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡಗಳ ಸರ್ಕಾರಿ ನೌಕರರ ಸಂಘ ಹಾಗೂ ಸಮಾಜದ ಬಂಧುಗಳು ಸೇರಿದಂತೆ, ನಾಯಕ ಸಮುದಾಯದ ಸಂಘಟನೆಗಳು ಧರಣಿಯಲ್ಲಿ ಭಾಗವಹಿಸಿವೆ.
ವಾಲ್ಮೀಕಿ ನಾಯಕ ಸಮಾಜದ ಜಿಲ್ಲಾಧ್ಯಕ್ಷ ವೀರಣ್ಣ, ವಕೀಲ ಗುಮ್ಮನೂರು ಮಲ್ಲಿಕಾರ್ಜುನ್, ಜಿಲ್ಲಾ ಪಂಚಾಯತ್ ಸದಸ್ಯ ಕೆ.ಹೆಚ್. ಓಬಳಪ್ಪ ಮತ್ತಿತರರು ಮಾತನಾಡಿದರು.
ಧರಣಿಯಲ್ಲಿ ಪಾಲಿಕೆ ಸದಸ್ಯ ಬಿ.ಎಚ್. ವಿನಾಯಕ, ಮುಖಂಡರುಗಳಾದ ಎನ್.ಎಂ. ಆಂಜನೇಯ, ಕೆಟಿಜೆ ನಗರ ಆರ್. ಲಕ್ಷ್ಮಣ, ಡಿ.ಜಿ. ಮಂಜುನಾಥ, ಶ್ರೀನಿವಾಸ ದಾಸಕರಿಯಪ್ಪ, ಎಂ.ಬಿ. ಕೇರಿ ರಾಮಚಂದ್ರಪ್ಪ, ಐಗೂರು ಹನುಮಂತಪ್ಪ, ಹದಡಿ ಹಾಲಪ್ಪ, ಜಯಲಕ್ಷ್ಮಿ, ಶಾಮನೂರು ಪ್ರವೀಣ, ಎನ್.ಎಚ್. ಹಾಲೇಶ್ ನಾಯಕ, ಮೇಷ್ಟ್ರು ರುದ್ರೇಶ, ಪ್ರಕಾಶ, ಆವರಗೆರೆ ವಾಸು, ರಾಜು ತರಕಾರಿ, ದೇವರಮನಿ ಪ್ರವೀಣ, ಕರೂರು ನರೇಂದ್ರ, ಬಸವರಾಜ, ಅಣಜಿ ಅಂಜಿನಪ್ಪ, ಶ್ಯಾಗಲೆ ಸತೀಶ್ ಸೇರಿದಂತೆ ಇತರರಿದ್ದರು.