ದೇಶದಲ್ಲಿ ಜಾತೀಯತೆ ಮತ್ತು ಅಸಮಾನತೆ ನಿರ್ಮೂಲನೆಗೆ ಯುವಕರು ಶ್ರಮಿಸಬೇಕು

ಜಗಳೂರು, ಅ.21- ಡಾ.ಬಿ.ಆರ್ ಅಂಬೇಡ್ಕರ್ ದೇಶಕ್ಕೆ ಭಾರತ  ಸಂವಿಧಾನವನ್ನು ಕೊಡದೆ ಹೋಗಿದ್ದರೆ ಇಂದು ದಲಿತರು, ಹಿಂದುಳಿದ, ಅಲ್ಪ ಸಂಖ್ಯಾತ ಹಾಗೂ ಸಾಮಾನ್ಯ ವರ್ಗದ ಬಡವರು ನೆಮ್ಮದಿಯಾಗಿ ಬದುಕುವುದು ಅಸಾಧ್ಯವಾಗಿತ್ತು ಎಂದು ಭೀಮ್ ಆರ್ಮಿ ಸಂಘದ  ದಕ್ಷಿಣ ಕರ್ನಾಟಕದ ಅಧ್ಯಕ್ಷ ಯು.ಎಚ್ ಸಲ್ಮಾನ್ ಖಾನ್ ಹೇಳಿದರು. 

ಇಲ್ಲಿನ ಮಂಜುನಾಥ ಬಡಾವಣೆಯಲ್ಲಿ ಹಮ್ಮಿಕೊಂಡಿದ್ದ ಭೀಮ್ ಆರ್ಮಿ ತಾಲ್ಲೂಕು ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಜಾತೀಯತೆ ಮತ್ತು ಅಸಮಾನತೆ  ಎನ್ನುವುದು ದೊಡ್ಡ ರೋಗವಾಗಿದೆ. ಅದನ್ನು ನಿರ್ಮೂಲನೆ ಮಾಡುವಲ್ಲಿ ಯುವಕರ ಪಾತ್ರ ಮುಖ್ಯವಾಗಿದೆ. ಅದಕ್ಕಾಗಿ ಯುವಕರು ಜಾಗೃತರಾಗಿರಬೇಕು ಎಂದರು.

ಮಕ್ಕಳಿಗೆ ಶಿಕ್ಷಣ ಕೊಡಿಸಿ ವಿದ್ಯಾವಂತರನ್ನಾಗಿ ಮಾಡುವ ಮೂಲಕ ಅಂಬೇಡ್ಕರ್ ಅವರ ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡು ನಡೆಯುಂತೆ ಮಾಡುವ ಹೊಣೆಗಾರಿಗೆ ಪೋಷಕರ ಮೇಲಿದೆ ಎಂದು ಅವರು ಸಲಹೆ ನೀಡಿದರು. 

ಭೀಮ್ ಆರ್ಮಿ ತಾಲ್ಲೂಕಾಧ್ಯಕ್ಷ ಎಚ್. ಹನುಮಂತಪ್ಪ ಮಾತನಾಡಿದರು. 

ಈ ಸಂದರ್ಭದಲ್ಲಿ ದಕ್ಷಿಣ ಕರ್ನಾಟಕದ ಪ್ರಧಾನ ಕಾರ್ಯದರ್ಶಿ  ಸಿದ್ದನೂರು ಬಸವ ರಾಜ್,  ಜಿಲ್ಲಾ ಸದಸ್ಯರಾದ ಜಿ.ಎನ್ ಮಲ್ಲಿಕಾ ರ್ಜುನ, ತಾಲ್ಲೂಕು ಉಪಾಧ್ಯಕ್ಷ ಎಂ.ಡಿ ನಾಗ ರಾಜ್,  ಕಾರ್ಯದರ್ಶಿ ಪ್ರಕಾಶ್, ಉಪಕಾರ್ಯ ದರ್ಶಿ ಉಮೇಶ್, ಯುವ ಘಟಕದ ಅಧ್ಯಕ್ಷ  ಕೆ.ಟಿ ರಘು ನಾಯಕ, ಟಿ.ಓಬಳೇಶ್ ಸೇರಿದಂತೆ ಮತ್ತಿತರರಿದ್ದರು. 

error: Content is protected !!