ಜಿಲ್ಲಾ ಕಾಂಗ್ರೆಸ್‍ನಿಂದ ವಿವೇಕಾನಂದರ 118ನೇ ಪುಣ್ಯಸ್ಮರಣೆ

ದಾವಣಗೆರೆ, ಜು.11- ಜಿಲ್ಲಾ ಕಾಂಗ್ರೆಸ್‍ನಿಂದ ಸ್ವಾಮಿ ವಿವೇಕಾನಂದರ 118ನೇ ಪುಣ್ಯಸ್ಮರಣೆ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ನಂತರ ಮಾತನಾಡಿದ ದಿನೇಶ್ ಕೆ.ಶೆಟ್ಟಿ, ಭಾರತದ ಅಧ್ಯಾತ್ಮಿಕ, ವೈಚಾ ರಿಕ ಜಾಗ್ರತೆಯ ಪರ್ವದಲ್ಲಿ ಸ್ವಾಮಿ ವಿವೇಕಾ ನಂದರು ವಹಿಸಿದ ಪ್ರಧಾನ ಪಾತ್ರ ಭಾರತೀ ಯರಿಗೆ ನಿತ್ಯ ಸ್ಫೂರ್ತಿಯ ಸೆಲೆಯಾಗಿ ಉಳಿದಿದೆ. ಮುಖ್ಯವಾಗಿ, 1893ರ ಸೆಪ್ಟೆಂಬರ್‍ನಲ್ಲಿ ಅಮೆರಿಕದ ಚಿಕಾಗೋದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾಡಿದ ಭಾಷಣ, ವಿಶ್ವದ ಗಮನವನ್ನು ಭಾರತೀಯ ಅಧ್ಯಾತ್ಮಿಕ ಸಾಧಕರ ಕಡೆಗೆ ಸೆಳೆಯುವಲ್ಲಿ ದೊಡ್ಡ ಪಾತ್ರ ವಹಿಸಿತು ಎಂದರು. 

ಪ್ರಮುಖವಾಗಿ ಆ ಭಾಷಣದಲ್ಲಿ ವಿವೇಕಾನಂದರು ಹಿಂದೂ ಧರ್ಮವನ್ನು `ಎಲ್ಲಾ ಧರ್ಮಗಳ ಮಾತೆ’ ಎಂದು ಕರೆಯುತ್ತಾರೆ. `ಹಿಂದೂ ಧರ್ಮ ಸಮನ್ವಯ ಮಾತ್ರವಲ್ಲ, ಸ್ವೀಕಾರದ ಪಾಠವನ್ನೂ ವಿಶ್ವಕ್ಕೆ ಸಾರಿದೆ’ ಎಂದು ತಿಳಿಸುತ್ತಾರೆ. ಆದರೆ, ಇಂದು ಕೆಲವರು ಹಿಂದೂ ಧರ್ಮ ಅನ್ಯ ಧರ್ಮವನ್ನು ವಿರೋಧಿಸಬೇಕೆಂಬು ದನ್ನು ಬಿಂಬಿಸುತ್ತಿದ್ದು, ಅಂತಹವರ ವಿರುದ್ಧ ಸಮರ ಸಾರಬೇಕಾದ ಕೆಲಸ ಇಂದಿನ ಯುವ ಜನಾಂಗ ಮಾಡುವ ಮೂಲಕ ಸ್ವಾಮಿ ವಿವೇ ಕಾನಂದರ ಆದರ್ಶಗಳನ್ನು ಪಾಲಿಸಬೇಕೆಂದರು.

ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಎಸ್.ಮಲ್ಲಿಕಾರ್ಜುನ್, ಇಂಟೆಕ್‍ನ ಆನೆಕೊಂಡ ಲಿಂಗರಾಜ್, ಎನ್‍ಎಸ್‍ಯುಐನ ಮುಜಾಹಿದ್, ಯುವ ಕಾಂಗ್ರೆಸ್‍ನ ಮೈನುದ್ದೀನ್, ಕಿಸಾನ್ ಕಾಂಗ್ರೆಸ್‍ನ ಪ್ರವೀಣ್ ಕುಮಾರ್, ಅಸಂಘಟಿತ ಕಾರ್ಮಿಕರ ಸಂಘದ ಲಿಯಾಖತ್ ಅವರುಗಳು ಮಾತನಾಡಿ, ಮನುಷ್ಯನ ಶಾಂತಿ – ನೆಮ್ಮದಿಗಳಿಗೆ ಸಾಮರಸ್ಯವೇ ಏಕೈಕ ಸಾಧನ ಎಂಬುದನ್ನು ವಿವೇಕಾನಂದರು ಒತ್ತಿ ಹೇಳುತ್ತಾರೆ. ಅವರು ಭಾಷಣವನ್ನು ಆರಂಭಿಸಿದ ರೀತಿಯೂ ಅವರು ಪ್ರತಿಪಾದಿಸಿದ ವಿಶ್ವ ಭ್ರಾತೃತ್ವದ ಆದರ್ಶಕ್ಕೆ ಅನುರೂಪವಾಗಿತ್ತು. ಮುಂದೆ ವಿವೇಕಾನಂದರು ಅನೇಕ ದೇಶಗಳನ್ನು ಸುತ್ತಾಡಿ ಮತೀಯ ಸಾಮರಸ್ಯ, ಭ್ರಾತೃತ್ವ, ಯುವಶಕ್ತಿಯ ಸದ್ಬಳಕೆ, ಅಧ್ಯಾತ್ಮಿಕ ಜಾಗೃತಿಗಳ ಕುರಿತು ಚಿಂತನೆಗಳನ್ನು ಮಂಡಿಸಿ ಎಲ್ಲರ ಮನಗೆದ್ದು ‘ವಿಶ್ವವಿಜೇತ’ರಾದದ್ದನ್ನೂ ಹಲವರು ದಾಖಲಿಸಿದ್ದಾರೆ. ಎಲ್ಲದಕ್ಕೂ ಅವರ ಚಿಕಾಗೋ ಭಾಷಣ ಮೂಲ ಬಿಂದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್, ಸದಸ್ಯ ದೇವರಮನೆ ಶಿವಕುಮಾರ್, ಪದವೀಧರರ ಸಂಘಟನೆಯ ಎಸ್.ಎಸ್.ಗಿರೀಶ್, ಪರಿಶಿಷ್ಟ ಘಟಕದ ರಂಗನಾಥ, ಹರೀಶ್ ಶ್ರೀಕಾಂತ್ ಬಗೇರ, ಪ್ರವೀಣ್ ಫಾರ್ಮ, ಯುವರಾಜ್, ಮೇಘರಾಜ್ ಮತ್ತಿತರರಿದ್ದರು.

error: Content is protected !!