ದಾವಣಗೆರೆ, ಜು. 11- ಚೀನಾ ದಿಂದ ಆಮದು ಮಾಡಿಕೊಳ್ಳುತ್ತಿ ರುವ ವಸ್ತುಗಳನ್ನು ನಿಷೇಧಿಸಬೇಕು ಹಾಗೂ ಚೀನಾ ವಸ್ತುಗಳ ಮಾರಾಟ ವನ್ನು ಸಂಪೂರ್ಣ ಬಂದ್ ಮಾಡ ಬೇಕೆಂದು ಆಗ್ರಹಿಸಿ ನಗರದಲ್ಲಿ ಇಂದು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟಿಸಲಾಯಿತು.
ಡಾ. ಎಂ.ಸಿ. ಮೋದಿ ವೃತ್ತ (ಗುಂಡಿ ವೃತ್ತ) ದಲ್ಲಿ ಜಮಾಯಿಸಿದ್ದ ಪಕ್ಷದ ಮುಖಂಡರು, ಕಾರ್ಯಕ ರ್ತರು, ಜನಪ್ರತಿನಿಧಿಗಳು ಚೈನಾ ವಸ್ತುಗಳನ್ನು ರಸ್ತೆ ಮೇಲೆ ಹಾಕಿ ನಾಶ ಪಡಿಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ದಿನೇಶ್ ಶೆಟ್ಟಿ, ನಮ್ಮ ದೇಶದಲ್ಲಿ ಉತ್ಪಾದನೆಯಾಗುವ ವಸ್ತುಗಳನ್ನು ನಾವೆಲ್ಲ ಉಪಯೋಗಿಸೋಣ. ಆದರೆ, ಚೀನಾ ವಸ್ತುಗಳ ಆಮದು ನಿಷೇಧಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು.
ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಶ್ರೀಮತಿ ಅನಿತಾ ಬಾಯಿ ಮಾಲತೇಶ್ ರಾವ್ ಮಾತನಾಡಿ, ಮುಂದಿನ ದಿನಗಳಲ್ಲಿ ಗಣೇಶ ಹಬ್ಬ ಹಾಗೂ ದೀಪಾವಳಿ ಹಬ್ಬ ಗಳಲ್ಲಿಯೂ ಸಹ ಚೀನಾ ವಸ್ತುಗಳನ್ನು ಉಪಯೋಗಿಸದೆ ನಮ್ಮ ದೇಶದಲ್ಲಿ ಉತ್ಪಾದನೆಯಾಗುವ ವಸ್ತುಗಳನ್ನು ಉಪಯೋಗಿಸಿ ಎಂದು ಕರೆ ನೀಡಿದರು.
ಮಾಜಿ ನಗರಸಭಾಧ್ಯಕ್ಷ ಕೆ.ಜಿ. ಶಿವಕುಮಾರ್ ಮಾತನಾಡಿ, ದೇಶದ ಪ್ರತಿಯೊಬ್ಬರು ಚೀನಾ ವಸ್ತುಗಳನ್ನು ವಿರೋಧಿಸಿ ದೇಶಾಭಿಮಾನ ತೋರಬೇಕು ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಕಾರ್ಯ ದರ್ಶಿ ಎಸ್. ಮಲ್ಲಿಕಾರ್ಜುನ್ ಮಾತನಾಡಿ, ಚೀನಾ ವಸ್ತುಗಳನ್ನು ನಾವು ಉಪಯೋಗಿಸುವುದರಿಂದ ನಮ್ಮ ದೇಶದಲ್ಲಿ ಗುಡಿ ಮತ್ತು ಸಣ್ಣ ಕೈಗಾರಿಕೆಗಳಿಗೆ ಪೆಟ್ಟು ಬೀಳುತ್ತಿದೆ. ಆರ್ಥಿಕ ಸ್ಥಿತಿ ಪತನದತ್ತ ಸಾಗುತ್ತಿದೆ ಎಂದರು.
ಪಾಲಿಕೆ ವಿಪಕ್ಷ ನಾಯಕ
ಎ. ನಾಗರಾಜ್ ಮಾತನಾಡಿ, ನಾವು ಸದಾ ದೇಶದ ಭದ್ರತೆ ಮತ್ತು ಸೈನಿಕರಿಗೆ ಬೆಂಬಲವಾಗಿದ್ದು, ನಮ್ಮ ಸೈನಿಕರ ಮೇಲೆ ನಡೆದ ದಾಳಿಗೆ ನಾವು ಪ್ರತೀಕಾರ ತೀರಿಸಬೇಕು ಹಾಗೂ ಚೈನಾ ವಸ್ತುಗಳನ್ನು ನಿಷೇಧಿಸಬೇಕೆಂದರು.
ಪ್ರತಿಭಟನೆಯಲ್ಲಿ ಪಾಲಿಕೆ ಸದ ಸ್ಯರುಗಳಾದ ದೇವರಮನೆ ಶಿವಕು ಮಾರ್, ಗಡಿ ಗುಡಾಳ್ ಮಂಜು ನಾಥ್, ಮುಖಂಡರಾದ ದಾದಾ ಪೀರ್, ಕೆ.ಎಲ್. ಹರೀಶ್ ಬಸಾಪುರ, ಮುಜಾಹಿದ್, ಶಶಿಧರ್ ಪಾಟೀಲ್, ಹಾಲೇಶ್, ಪ್ರವೀಣ್ ಕುಮಾರ್, ಲಿಯಾಖತ್ ಅಲಿ, ರಾಕೇಶ್, ಅಬ್ದುಲ್ ಜಬ್ಬಾರ್, ಬಾಷಾ, ಬಾಬ್ ಜಾನ್, ದಾದಾಪೀರ್, ಜಿಕ್ರಿಯ, ಸೈಯದ್ ಮರ್ಧಾನ್, ಹಾಲೇಶ್ ಬಸವನಾಳ, ನವೀನ್, ಗಂಗಾಧರ್, ಮಾರುತಿ, ಆಶಾ ಮುರಳಿ, ಜಯಶ್ರೀ, ರಾಧಾಬಾಯಿ, ದಿಶಾ, ಸಂಗಮ್ಮ, ಮಂಜುಳಾ, ಮಂಗಳ, ಮಂಜಮ್ಮ, ಗೀತಾ ಚಂದ್ರಶೇಖರ್, ರೆಹಜಾನ್, ದ್ರಾಕ್ಷಾಯಣಮ್ಮ, ರಾಜೇಶ್ವರಿ, ಸುನಿತಾ ಭೀಮಣ್ಣ, ಇಂದ್ರಮ್ಮ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.