ಸಮಾಜ ಸುಧಾರಣೆಯಲ್ಲಿ ಪತ್ರಿಕೆಗಳ ಪಾತ್ರ ಮಹತ್ವದ್ದು

ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ಪತ್ರಿಕೋದ್ಯಮಿ ಬಸವರಾಜ್ ಐರಣಿ

ದಾವಣಗೆರೆ, ಜು.11- ಸಮಾಜ ಸುಧಾರಣೆ ಹಾಗೂ ಜನರ ಮನಪರಿವರ್ತನೆ ಯಲ್ಲಿ ಪತ್ರಿಕೆಗಳ ಪಾತ್ರ ಮಹತ್ವದ್ದು. ಪತ್ರಕರ್ತ ಸುದ್ದಿಗಳ ಅನ್ವೇಷಣೆಯಲ್ಲಿ ಶ್ರದ್ಧೆ ಹಾಗೂ ಶ್ರಮ ಅಳವಡಿಸಿಕೊಂಡು ಕ್ರಿಯಾಶೀಲನಾಗಿರುತ್ತಾನೆ. ಪ್ರಗತಿಪರ ಚಿಂತನೆಯಲ್ಲಿ ಕಾರ್ಯನಿರತನಾಗಿ ಪತ್ರಿಕೋದ್ಯಮದ ಬೆಳವಣಿಗೆಗೆ ಸಹಕಾರಿಯಾಗಿರುತ್ತಾನೆ ಎಂದು ಹಿರಿಯ ಪತ್ರಕರ್ತ ಹಾಗೂ `ಪುಣ್ಯಭೂಮಿ’ ಪತ್ರಿಕೆ ಸಂಪಾದಕ ಬಸವರಾಜ್ ಐರಣಿ ಹೇಳಿದರು.

ನಗರದ ಎಸ್.ಓ.ಜಿ. ಕಾಲೋನಿಯ (ವಿಸ್ಪತಿ ನಿಲಯದ) ಪವಿತ್ರ ಪ್ರಜಾ ಹಾಗೂ ಸಹಾಯವಾಣಿ ಪತ್ರಿಕಾ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜನರ ಆಶಯಗಳಿಗೆ ಪೂರಕವಾಗಿ ಪತ್ರಕರ್ತ ಕಾರ್ಯ ನಿರ್ವಹಿಸುತ್ತಾ ಬಂದಾಗ ಪ್ರಗತಿಪರ ಬದಲಾವಣೆಯಾಗಿ ಅಭಿವೃದ್ಧಿಯ ಪಥ ಸಾಧ್ಯವಾಗಬಲ್ಲದು. ಅಂತೆಯೇ ಜವಾಬ್ದಾರಿಯ ಹೊಣೆ ಹೊತ್ತ ಪತ್ರಕರ್ತ ಸದಾ ಜಾಗೃತನಾಗಿರಬೇಕಾಗುತ್ತದೆ ಎಂದು ತಿಳಿಸುತ್ತಾ, ಪತ್ರಿಕೋದ್ಯಮ ನಡೆದು ಬಂದ ದಾರಿಯನ್ನು ವಿಶ್ಲೇಷಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪ್ರಗ ತಿಪರ ಲೇಖಕ ಪಿ. ಷಣ್ಮುಖಸ್ವಾಮಿ ಮಾತ ನಾಡಿ, ಪ್ರಸ್ತುತ ಸಂದರ್ಭದಲ್ಲಿ ಪತ್ರಿಕೆಗಳು ಸಾಮಾಜಿಕ ಚಿಂತನೆಗೊಳಪಡುವ ಅವಶ್ಯಕತೆ ಇದೆ. ಅಲ್ಲದೆ ಮಾಧ್ಯಮಗಳು ಇಂದು ಬಂಡವಾಳ ಶಾಹಿಗಳ ಹಿಡಿತದಲ್ಲಿರುವು ದರಿಂದ ಬದ್ಧತೆಯ ಪತ್ರಿಕೋದ್ಯಮಕ್ಕೆ ಆತಂಕ ಮೂಡಿದೆ. ಜನರಿಗೆ ಸತ್ಯದ ದರ್ಶನ ಮಾಡಿಸುವಲ್ಲಿ ಪ್ರಾಮಾಣಿಕ ಪತ್ರಕರ್ತ ದಿಟ್ಟತನವನ್ನು ತೋರಬೇಕಾಗಿದೆ ಎಂದು ಅವರು ಹೇಳಿದರು.

ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಹೆಚ್. ತಿಮ್ಮಣ್ಣ ಮಾತನಾಡಿ, ಪತ್ರಿಕೆಗಳು ಸಮಾಜದ ಕಣ್ಣಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುವಂತಹ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿ ಜವಾಬ್ದಾರಿಯನ್ನು ನಿಭಾಯಿಸಬೇಕಾಗಿದೆ. ಆ ದಾರಿಯಲ್ಲಿ ಆತ್ಮಾವಲೋಕನ ಮಾಡಿಕೊಳ್ಳುವುದು ಅವಶ್ಯಕ ಎಂದು ತಿಳಿಸಿದರು.

ರಿಯಲ್ ಮೀಡಿಯಾ ಪತ್ರಿಕೆ ಸಂಪಾದಕ ಜಿ.ಆರ್. ನಿಂಗೋಜಿರಾವ್ ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ಪತ್ರಿಕಾ ಮಾಧ್ಯಮ ಹಾಗೂ ದೃಶ್ಯ ಮಾಧ್ಯಮಗಳ ಅವಶ್ಯಕತೆ ಹೆಚ್ಚಾಗಿದ್ದು, ವಸ್ತು ನಿಷ್ಠತೆಯನ್ನು ಕ್ರೋಢೀಕರಿಸಿ ಜನಮನಕ್ಕೆ ತಲುಪಿಸುವಲ್ಲಿ ಇದರ ಪಾತ್ರ ಎಷ್ಟು ಮಹತ್ವದ್ದು ಎಂದು ತಿಳಿ ಹೇಳಿದರು.

ಇಂಟರ್‍ನ್ಯಾಷನಲ್ ಫ್ರೆಂಡ್ಸ್ ಗ್ರೂಪ್ ಆಫ್ ಬುದ್ದಿಸ್ಟ್ ಸಂಘದ ಜಿಲ್ಲಾಧ್ಯಕ್ಷ ಹಾಗೂ ಮಕ್ಕಳ ಮಿತ್ರ ಪ್ರಶಸ್ತಿ ಪುರಸ್ಕೃತ ಡಿ.ಎನ್. ಹಾಲೇಶಪ್ಪ ಪತ್ರಕರ್ತರಾದ ವಿ.ಟಿ. ಸುಂದರ್, ಜಗದೀಶ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಹಾಗೂ ನನ್ನ ಮಿತ್ರ ಸಂಪಾದಕ ಕೊಟ್ರೇಶ್ ಅಣಬೂರ್‍ಮಠ್, ಎಂ. ಗುರುಮೂರ್ತಿ, ಶ್ರೀ ಕನ್ನಡಾಂಬೆ ವೇದಿಕೆ ಸಂಘದ ಅಧ್ಯಕ್ಷ ನಜೀರ್ ಅಹ್ಮದ್, ಮಾರುತಿರಾವ್, ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷ ಷರೀಫ್ ಅಹ್ಮದ್ ಮತ್ತಿತರರು ಉಪಸ್ಥಿತರಿದ್ದರು.   

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಎಸ್.ಕೆ. ಒಡೆಯರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪತ್ರಕರ್ತಕರು ಒಗ್ಗಟ್ಟಿನಿಂದ ಮುನ್ನಡೆದರೆ ಪ್ರಗತಿಪರ ಹಾದಿಯಲ್ಲಿ ಸಾಗಬಹುದು ಎಂದು ಅಭಿಪ್ರಾಯ ಪಟ್ಟರು.

ಇದೇ ಸಂದರ್ಭದಲ್ಲಿ ಇತ್ತೀಚಿಗೆ ನಮ್ಮನ್ನ ಗಲಿದ ನಗರದ ಹಿರಿಯ ಪತ್ರಕರ್ತರಾದ ಸಿ.ಟಿ. ಮಜ್ಜಗಿ ಹಾಗೂ ಹೆಚ್.ಎಂ. ದುಗ್ಗಪ್ಪ ಅವರುಗಳಿಗೆ ಶ್ರದ್ಧಾಂಜಲಿ ಅರ್ಪಿಸಲಾ ಯಿತು. ಚನ್ನವೀರಯ್ಯ ಕಾರ್ಯಕ್ರಮ ನಿರೂಪಿಸಿದರು. ಕು. ಮೀನಾ ಎಲ್. ಸ್ವಾಗತಿಸಿದರು.

error: Content is protected !!