ನಾಮದೇವ ಸಿಂಪಿ ಸಮಾಜ ದೈವ ಮಂಡಳಿ ವತಿಯಿಂದ ಕೊರೊನಾ ವಾರಿಯರ್ಸ್‌ಗೆ ಸನ್ಮಾನ ಕಾರ್ಯಕ್ರಮ ಸಂಸದ ಸಿದ್ದೇಶ್ವರ
ದಾವಣಗೆರೆ, ಜು. 4- ಕೊರೊನಾ ವಾರಿಯರ್ಸ್‌ಗೆ ಸನ್ಮಾನಿಸಿ, ಗೌರವಿಸುವುದರಿಂದ ಅವರಲ್ಲಿ ಮತ್ತಷ್ಟು ಉತ್ಸಾಹ ಹೆಚ್ಚಾಗಲು ಸಹಕಾರಿಯಾಗುತ್ತದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಪ್ರತಿಪಾದಿಸಿದರು.
ನಗರದ ದೊಡ್ಡಪೇಟೆಯಲ್ಲಿನ ಶ್ರೀ ನಾಮದೇವ ಭಜನಾ ಮಂದಿರ ದಲ್ಲಿ ಶನಿವಾರ ನಾಮದೇವ ಸಿಂಪಿ ಸಮಾಜ ದೈವ ಮಂಡಳಿ ವತಿಯಿಂದ ಕೊರೊನಾ ವಾರಿಯರ್ಸ್‌ಗೆ ಹಮ್ಮಿ ಕೊಂಡಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕೊರೊನಾ ನಿಯಂತ್ರಿಸಲು ವಾರಿಯರ್ಸ್ ಶ್ರಮ ಅಮೂಲ್ಯ ವಾದದ್ದು. ಪೌರ ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ವೈದ್ಯಕೀಯ ಸಿಬ್ಬಂದಿ, ಪೊಲೀಸ್ ಇಲಾಖೆ, ಜಿಲ್ಲಾಡಳಿತ ಎಲ್ಲರೂ ಇಲ್ಲಿಯವರೆಗೂ ತಮ್ಮ ಪ್ರಾಣದ ಹಂಗು ತೊರೆದು ಕಾರ್ಯ ನಿರ್ವಹಿಸುತ್ತಿದ್ದು ಇವರೆಲ್ಲರ ಸೇವೆ ಶ್ಲ್ಯಾಘನೀಯ ಎಂದರು.
ಜಿಲ್ಲೆಯಲ್ಲಿ ಆರಂಭದಲ್ಲಿಯೇ ನನ್ನ ಮಗಳಲ್ಲಿ ಸೋಂಕು ದೃಢಪಟ್ಟಿತ್ತು. ಆರಂಭದಲ್ಲಿ ಆತಂಕಕ್ಕೆ ಒಳಗಾಗಿದ್ದೆವು. ಆದರೆ ಜಿಲ್ಲಾಡಳಿತ, ವೈದ್ಯರು ಎಲ್ಲರೂ ನಮ್ಮ ಆತಂಕ ನಿವಾರಿಸಿ, ಮಗಳನ್ನು ಗುಣಮುಖರ ನ್ನಾಗಿಸಿದರು. ಇದೀಗ ಸೋಂಕಿತರ ಸಂಖ್ಯೆ ಮೂನ್ನೂರಕ್ಕೂ ಹೆಚ್ಚಾಗಿದೆ. ಸೋಂಕು ನಿಯಂತ್ರಣಕ್ಕೆ ಸಾಕಷ್ಟು ಕ್ರಮ ಕೈಗೊಂಡಿದ್ದರೂ ಸೋಂಕು ಹೆಚ್ಚಾಗುತ್ತಿದೆ. ಆದಷ್ಟು ಶೀಘ್ರದಲ್ಲಿಯೇ ಸೋಂಕು ಮುಕ್ತ ಜಿಲ್ಲೆಯನ್ನಾಗಿಸಲು ನಾವೆಲ್ಲರೂ ಕೈ ಜೋಡಿಸೋಣ ಎಂದರು.
ಕೊರೊನಾ ಮಹಾಮಾರಿಗೆ ಹೆದರುವ ಅಗತ್ಯವಿಲ್ಲ. ಸೋಂಕಿತ ವ್ಯಕ್ತಿಗೆ ಬೇರೆ ಯಾವುದಾದರೂ ಕಾಯಿಲೆಗಳಿದ್ದರೆ ಮಾತ್ರ ಅದು ಅಪಾಯಕಾರಿ. ಆಗಸ್ಟ್ ತಿಂಗಳ ವೇಳೆಗೆ ಕೊರೊನಾ ಸೋಂಕಿಗೆ ಲಸಿಕೆ ಸಿಗುವ ಭರವಸೆಯ ವರದಿಗಳು ಬಂದಿವೆ. ಬೇರೆ ದೇಶ ಹಾಗೂ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ದೇಶ, ನಮ್ಮ ರಾಜ್ಯ ಸೋಂಕು ನಿಯಂತ್ರಣದಲ್ಲಿ ಮುಂಚೂಣಿ ಯಲ್ಲಿದೆ. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪ ನವರು ಸಾಕಷ್ಟು ಉತ್ತಮ ಕ್ರಮಗಳ ಮೂಲಕ ಸೋಂಕು ನಿಯಂತ್ರಿಸು ತ್ತಿದ್ದಾರೆ. ಸಂಕಷ್ಟದಲ್ಲಿನ ಜನತೆಗಾಗಿ ಹಲವಾರು ಯೋಜನೆಗಳನ್ನೂ ಜಾರಿಗೆ ತಂದಿದ್ದಾರೆ ಎಂದರು.
ಸಮಾಜದ ಹಿರಿಯ ಮುಖಂಡ ಕೆ.ಬಿ. ಶಂಕರನಾರಾಯಣ್ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಹಿಂದೆ `ವೈದ್ಯೋನಾರಾಯಣೋ ಹರಿ’ ಎನ್ನುತ್ತಿದ್ದೆವು. ಈಗ `ಕೊರೊನಾ ವಾರಿಯರ್ಸ್ ನಾರಾಯಣೋ ಹರಿ’ ಎನ್ನಬೇಕಿದೆ ಎಂದರು.
ಸಿ.ಜಿ. ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಿದ ವೈದ್ಯರು, ಶುಶ್ರೂ ಷಕರು, ಪೊಲೀಸರು, ಆಶಾ ಕಾರ್ಯ ಕರ್ತೆಯರು, ಪೌರ ಕಾರ್ಮಿಕರು ಹಾಗೂ ಪರ್ತಕರ್ತರನ್ನು ಸನ್ಮಾನಿಸಿ, ಗೌರವಿಸಲಾಯಿತು. ನಾಮದೇವ ಸಿಂಪಿ ಸಮಾಜ ದೈವ ಮಂಡಳಿಯ ಅಧ್ಯಕ್ಷ