ಸಹಕಾರ ಸಂಸ್ಥೆಗಳು ಸಾರ್ವಜನಿಕರ ಬದುಕನ್ನು ಕಟ್ಟಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ

ಮಹಿಳಾ ಸಹಕಾರ ಸಂಘದಲ್ಲಿ ಗಾಂಧೀಜಿ – ಶಾಸ್ತ್ರೀಜಿ ಹುಟ್ಟುಹಬ್ಬದಲ್ಲಿ ಎನ್.ಎ. ಮುರುಗೇಶ್

ದಾವಣಗೆರೆ, ಅ.10- ಸಹಕಾರ ಸಂಸ್ಥೆಗಳು ಸಾರ್ವಜನಿಕರ ಬದುಕನ್ನು ಕಟ್ಟಿಕೊಡುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ದಾವಣಗೆರೆ -ಹರಿಹರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಎನ್.ಎ. ಮುರುಗೇಶ್ ತಿಳಿಸಿದ್ದಾರೆ.

ನಗರದ ಮಹಿಳಾ ಪತ್ತಿನ ಸಹಕಾರ ಸಂಘದ ವತಿಯಿಂದ ಸಂಘದ ಕಚೇರಿಯಲ್ಲಿ ಏರ್ಪಾಡಾಗಿದ್ದ ಮಹಾತ್ಮ ಗಾಂಧೀಜಿ ಮತ್ತು ಲಾಲ್‌ ಬಹದ್ದೂರ್ ಶಾಸ್ತ್ರಿ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಸಹಕಾರ ಸಂಸ್ಥೆ ಲಂಡನ್‌ನಲ್ಲಿ ಹುಟ್ಟಿ ನಂತರ ದೇಶದ ಎಲ್ಲಾ ಕಡೆಯೂ ಪಸರಿಸಿ ಭಾರತದಲ್ಲಿಯೂ ಸಹ ಅತ್ಯಂತ ಯಶಸ್ವಿಯಾಗಿ ಬೆಳೆದು ಬಂದು ಚಳುವಳಿಯನ್ನೇ ಹುಟ್ಟಿಹಾಕಿದೆ ಎಂದು ಮುರುಗೇಶ್ ಅವರು ವಿವರಿಸಿದರು. 

`ಸಹಕಾರ ಲಂಡನ್ನಿನ ಕೂಸಾದರೆ, ಭಾರತ ದೇಶ ಆ ಕೂಸಿನ ತೊಟ್ಟಿಲು’ ಎನ್ನುವ ಉದಾಹರಣೆಯೊಂದಿಗೆ ಮಾರ್ಮಿಕವಾಗಿ ವಿಶ್ಲೇಷಿಸಿದ ಅವರು,  ನಗರದಲ್ಲಿ ಮಹಿಳಾ ಕ್ರೆಡಿಟ್‌ ಕೋ-ಆಪರೇಟಿವ್ ಸೊಸೈಟಿಯು ಚೆನ್ನಾಗಿ ಬೆಳೆದು ತನ್ನದೇ ಆದ ಛಾಪು ಮೂಡಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಮತ್ತೋರ್ವ ಮುಖ್ಯ ಅತಿಥಿಯಾಗಿದ್ದ ಭೂ ಸೇನಾ ನಿಗಮದ ನಿವೃತ್ತ ಅಭಿಯಂತರ ಉಮೇಶ್ ಪಾಟೀಲ್ ಮಾತನಾಡಿ, ಮಹಿಳಾ ಪತ್ತಿನ ಸಹಕಾರ ಸಂಘವನ್ನು ಪ್ರಸ್ತಾಪಿಸಿ, ಮಹಿ ಳೆಯರೇ ಸೇರಿ ಸಹಕಾರ ಸಂಘವನ್ನು ಯಶಸ್ವಿ ಯಾಗಿ ಮುನ್ನಡೆಸುತ್ತಿರುವುದನ್ನು ಶ್ಲ್ಯಾಘಿಸಿದರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಹಕಾರ ಪತ್ತಿನ ಅಧ್ಯಕ್ಷರಾದ ಶ್ರೀಮತಿ ನಿರ್ಮಲಾ ಸುಭಾಷ್ ಅವರು ಮಾತನಾಡಿ, ಎಲ್ಲರ ಸಹಕಾರದಿಂದಾಗಿ ಮಹಿಳಾ ಪತ್ತಿನ ಸಹಕಾರ ಸಂಘವು ಪ್ರಗತಿದಾಯಕದಲ್ಲಿ ಮುನ್ನಡೆದಿದೆ ಎಂದು ಹರ್ಷ ವ್ಯಕ್ತಪಡಿಸಿದರು. 

ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದ ಶ್ರೀಮತಿ ಅಲಕಾನಂದ ರಾಮದಾಸ್‌ ಅವರು, ಗಾಂಧೀಜಿಯವರ ಆದರ್ಶ, ಅವರು ಮಹಿಳೆಯರಿಗೆ ನೀಡಿದ ಪ್ರಾಧ್ಯಾನತೆ, ಆತ್ಮಾಭಿ ಮಾನ  ಕುರಿತು ಉಪನ್ಯಾಸ ನೀಡಿದರು.

ನಿರ್ದೇಶಕರುಗಳಾದ ಶ್ರೀಮತಿ ಸುಧಾ ರಾಜಶೇಖರ್ ದಿಬ್ದಳ್ಳಿ, ಹೇಮಲತಾ ಧನೇಶ್, ವಿಶೇಷ ಆಹ್ವಾನಿತರಾಗಿ ಶ್ರೀಮತಿ ಸುಗುಣ ಮುಂಡಾಸ್, ಶ್ರೀಮತಿ ಸೀಮಾ ಸುರೇಶ್, ಕಾರ್ಯದರ್ಶಿ ಕು. ರೇಖ, ಸಿಬ್ಬಂದಿ ವರ್ಗದವರಾದ ಬೇಬಿಜಾನ್, ಬಸವರಾಜು ಮತ್ತು ರವಿ ಉಪಸ್ಥಿತರಿದ್ದರು.

ಶ್ರೀಮತಿ ಅಂಬುಜಾಕ್ಷಿ ಸ್ವಾಗತಿಸಿದರು. ಪಲ್ಲವಿ ಪಾಟೀಲ್ ಅತಿಥಿಗಳ ಪರಿಚಯ ಮಾಡಿಸಿದರು. ಶ್ರೀಮತಿ ಗೀತಾ ಪ್ರಶಾಂತ್ ವಂದಿಸಿದರು. ಶ್ರೀಮತಿ ಪಂಕಜಾ ರಾಜು ನಿರೂಪಿಸಿದರು.

error: Content is protected !!