ಪ್ರತಿಜ್ಞಾ ವಿಧಿ ವೀಕ್ಷಣೆ ಇತಿಹಾಸ ರಚನೆಗೆ ಸಾಕ್ಷಿ

ಹರಪನಹಳ್ಳಿ ಕಾಂಗ್ರೆಸ್‌ ಕಾರ್ಯಕ್ರಮದಲ್ಲಿ ವೀಣಾ ಮಹಾಂತೇಶ್ ಶ್ಲ್ಯಾಘನೆ

ಹರಪನಹಳ್ಳಿ, ಜು.2- ಡಿಜಿಟಲ್ ಮಾಧ್ಯಮದ ಮುಖಾಂತರ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ ನೂತನ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಕಾರ್ಯಾಧ್ಯಕ್ಷರುಗಳಾದ ಸತೀಶ್ ಜಾರಕಿಹೊಳಿ, ಸಲೀಂ ಅಹಮದ್‌, ಈಶ್ವರ ಖಂಡ್ರೆ ಅವರ ಅಧಿಕಾರ ಪದಗ್ರಹಣದ ಪ್ರತಿಜ್ಞಾ ವಿಧಿ ಕಾರ್ಯಕ್ರಮವನ್ನು ಹಲವಾರು ಸ್ಥಳಗಳಲ್ಲಿ ವೀಕ್ಷಣೆ ಮಾಡುವ  ಮೂಲಕ ಹೊಸ ಮನ್ವಂತರ ನಿರ್ಮಾಣದಲ್ಲಿ ಹಾಗೂ ಹೊಸ ಇತಿಹಾಸ ರಚನೆಗೆ  ಸಾಕ್ಷಿಯಾಗಿದ್ದೇವೆ ಎಂದು ಎಂ.ಪಿ.ಪ್ರಕಾಶ್ ಸಮಾಜಮುಖಿ ಟ್ರಸ್ಟ್ ಅಧ್ಯಕ್ಷೆ ಎಂ.ಪಿ.ವೀಣಾ ಮಹಂತೇಶ್ ಹೇಳಿದರು.

ಪಟ್ಟಣದ ಆಚಾರ ಬಡಾವಣೆಯಲ್ಲಿ ತಮ್ಮ ಕಚೇರಿಯ ಮೇಲ್ಭಾಗದಲ್ಲಿ ಆಯೋಜಿಸಿದ್ದ ಡಿಕೆಶಿ ಪದಗ್ರಹಣವನ್ನು ಜೂಮ್ ಆಪ್ ಮೂಲಕ ಕಾರ್ಯಕರ್ತರೊಂದಿಗೆ ವೀಕ್ಷಣೆ ಮಾಡಿ ಮಾತನಾಡಿದರು. 

ಸುಳ್ಳು ಆಶ್ವಾಸನೆ ನೀಡಿ ಜನರನ್ನು ಮರುಳು ಮಾಡುತ್ತಾ ಹೊರಟಿರುವ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳಿಗೆ ಸೆಡ್ಡು ಹೊಡೆದು, ಕಾಂಗ್ರೆಸ್ ಪಕ್ಷವನ್ನು ಸದೃಢವಾಗಿ  ಕಟ್ಟುವಲ್ಲಿ ಶಿವಕುಮಾರ್ ಸಮರ್ಥರು. ಡಿ.ಕೆ.ಶಿವಕುಮಾರ್ ಅವರು ಕೆಳ ಹಂತದಿಂದ ಶ್ರಮಪಟ್ಟು ಈ ಸ್ಥಾನಕ್ಕೆ ಬಂದಿದ್ದು, ಕಷ್ಟ-ಸುಖ ಎಲ್ಲಾ ಅರಿತಿರುವ ಅವರು ಕಾರ್ಯಕರ್ತರಿಗೆ ಬೆನ್ನೆಲುಬಾಗಿ ನಿಂತು ಹಿತ ಕಾಪಾಡುವರು ಎಂದು ಹೇಳಿದರು.

ಪುರಸಭಾ ಮಾಜಿ ಅಧ್ಯಕ್ಷೆ ಕವಿತಾ ವಾಗೀಶ್, ಪ್ರೊ. ಎಂ.ತಿಮ್ಮಪ್ಪ, ಶಬಾನಾ, ದುಗ್ಗಾವತಿ ಸಿದ್ದಲಿಂಗನ ಗೌಡರು, ಶಿಂಗ್ರಿಹಳ್ಳಿ ರವಿಕುಮಾರ್, ಕುಂಚೂರು ಶಮೀರ್, ಬಾಗಳಿ ರಮೇಶ್, ಖಾಜಿ ಹೊಂಬಳಗಟ್ಟಿ, ದಾದಾಪೀರ್ ಕ್ಯಾರಕಟ್ಟಿ, ಆಶ್ರಫ್‌ ಅಲಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

error: Content is protected !!