ರಾಣೇಬೆನ್ನೂರು, ಜು.2- ಸೇವಾ ನಿವೃತ್ತರಾದ ನಗರಸಭೆ ಸಿಬ್ಬಂದಿಗಳಾದ ಗುತ್ತೆಪ್ಪ ಕಾಟಿ ಹಾಗೂ ದುರುಗಪ್ಪ ಹುಲಗೆಮ್ಮನವರ ಅವರಿಗೆ ನಗರಸಭೆ ಸಭಾ ಭವನದಲ್ಲಿ ಇತ್ತೀಚೆಗೆ ಸನ್ಮಾನಿಸಿ,ಬೀಳ್ಕೊಡಲಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪೌರಾಯುಕ್ತ ಡಾ. ಮಹಾಂತೇಶ್ ಮಾತನಾಡಿ, ದಕ್ಷ ಹಾಗೂ ಪ್ರಾಮಾಣಿಕ ಕೆಲಸಗಾರರು ಸೇವಾ ನಿವೃತ್ತಿಯ ನಂತರವೂ ಎಲ್ಲರ ಮನದಲ್ಲಿ ಚಿರಸ್ಥಾಯಿಯಾಗಿರುತ್ತಾರೆ. ಅವರ ಕಾರ್ಯಗಳು ಇತರರಿಗೆ ಪ್ರೇರಕವಾಗಿರುತ್ತವೆ ಎಂದರು.
ನಗರಸಭಾ ಸದಸ್ಯ ಮಲ್ಲಿಕಾರ್ಜುನ ಅಂಗಡಿ ಮಾತನಾಡಿ, ಸರ್ಕಾರಿ ನೌಕರರು ತಮಗೆ ಸಿಕ್ಕ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಎಲ್ಲರಿಗೂ ಕಿವಿ ಮಾತು ಹೇಳಿದರು.
ನಗರಸಭೆ ಸದಸ್ಯರುಗಳಾದ ಪುಟ್ಟಪ್ಪ ಮರಿಯಮ್ಮನವರ, ಪ್ರಕಾಶ ಪೂಜಾರ, ಪ್ರಭಾವತಿ ತಿಳವಳ್ಳಿ, ಮಂಜುಳಾ ಹತ್ತಿ, ಮಾಜಿ ಸದಸ್ಯ ಪ್ರಭುಸ್ವಾಮಿ ಕರ್ಜಗಿಮಠ, ರುದ್ರಮುನಿ ಹುಗ್ಗಿ, ಪ್ರಕಾಶ್ ಜೈನ್, ಕಾರ್ತಿಕ ಕಾಟಿ, ಪ್ರಭು ಪಾಟೀಲ, ವೀರಣ್ಣ ಅಂಗಡಿ ಮಾತನಾಡಿದರು. ಎಂಜಿನಿಯರ್ ಬಿ.ಎಸ್. ಪಾಟೀಲ್, ಪ್ರಕಾಶ ಗಚ್ಚಿನ ಮಠ, ಸದಸ್ಯರುಗಳಾದ ಗಂಗಮ್ಮ ಹಾವನೂರ, ಜಯಶ್ರೀ ಪಿಸಿ, ರಮೇಶ ಕರಡೇಣ್ಣನವರ, ಹುಚ್ಚಪ್ಪ ಮೆಡ್ಲೇರಿ, ಹನುಮಂತಪ್ಪ ಹೆದ್ದೇರಿ, ಪಾಂಡುರಂಗ ಗಂಗಾವತಿ, ಸಿಬ್ಬಂದಿಗಳಾದ ಜಗದೀಶ್, ಮಧು ಕಂಬಳಿ ಮತ್ತಿತರರಿದ್ದರು.