ದಾವಣಗೆರೆ, ಅ.3- ಉತ್ತರ ಪ್ರದೇಶದಲ್ಲಿ ದಲಿತ ಯುವತಿ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿದ ಜಿಲ್ಲಾ ಕಾಂಗ್ರೆಸ್ ಸಮಿತಿ, ಯುವತಿ ಅತ್ಯಾಚಾರ ಮತ್ತು ಕೊಲೆಗೆ ಕಾರಣರಾದವರನ್ನು ಉಗ್ರ ಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಾಯಿಸಿದರು.
ಸಂತಾಪ ಸೂಚಕ ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ ಮಾತನಾಡಿ, ಹತ್ರಾಸ್ ಜಿಲ್ಲೆಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಯನ್ನು ಉತ್ತರ ಪ್ರದೇಶ ಸರ್ಕಾರ ಮುಚ್ಚುವ ಪ್ರಯತ್ನ ನಡೆಸಿದೆ ಎಂದು ದೂರಿದರು.
ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶ್ರೀಮತಿ ಅನಿತಾಬಾಯಿ ಮಾಲತೇಶ್ ಮಾತನಾಡಿ, ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಯನ್ನು ತೀವ್ರವಾಗಿ ಖಂಡಿಸಿ, ಯುವತಿ ಮನೆಗೆ ಸಾಂತ್ವನ ಹೇಳಲು ತೆರಳುತ್ತಿದ್ದ ಕಾಂಗ್ರೆಸ್ ಮುಖ್ಯಸ್ಥರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿಯವರನ್ನು ಪೊಲೀಸರಿಂದ ತಡೆಯಲು ಯತ್ನಿಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರವನ್ನು ವಜಾಗೊಳಿಸ ಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಶಿವಗಂಗಾ ವಿ.ಬಸವರಾಜ್, ಜಿ.ಪಂ. ಸದಸ್ಯ ಕೆ.ಎಸ್.ಬಸವಂತಪ್ಪ, ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಕೆಪಿಸಿಸಿ ವಕ್ತಾರ ಡಿ.ಬಸವರಾಜ್, ಲೀಗಲ್ ಸೆಲ್ ಅಧ್ಯಕ್ಷ ಪ್ರಕಾಶ್ ಪಾಟೀಲ್, ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್, ಸದಸ್ಯ ರುಗಳಾದ ಪಾಮೇನಹಳ್ಳಿ ನಾಗರಾಜ್, ಚಮನ್ ಸಾಬ್, ದೇವರಮನಿ ಶಿವಕು ಮಾರ್, ಸೋಮ್ಲಾಪುರದ ಹನುಮಂತಪ್ಪ, ಮೈನುದ್ದೀನ್, ಅಣಜಿ ಅಂಜಿನಪ್ಪ, ರುದ್ರೇಶ್ ಎಸ್.ಎಂ. ಮುಜಾಹಿದ್, ರಾಘವೇಂದ್ರ ಗೌಡ, ಇಟ್ಟಿಗುಡಿ ಮಂಜುನಾಥ್, ಎಸ್.ಮಲ್ಲಿಕಾರ್ಜುನ್, ಹರೀಶ್ ಕೆ.ಎಲ್. ಬಸಾಪುರ, ಬಾತಿ ಶಿವಕುಮಾರ್, ಪ್ರವೀಣ್‍ಕುಮಾರ್, ಆನೆಕೊಂಡ ಗೌಡ್ರು ಅಜ್ಜಣ್ಣ, ಅವಿನಾಶ್ ಬಂದೋಳ್, ಶಶಿಕುಮಾರ್ ನಾಗನೂರು, ಜಿಕ್ರಿಯಾ, ಸುಷ್ಮಾ ಪಾಟೀಲ್, ಕವಿತಾ ಚಂದ್ರಶೇಖರ್, ಸುನಿತಾ ಭೀಮಣ್ಣ, ರಾಧಾಬಾಯಿ, ಜಯಶ್ರೀ, ಇಂದ್ರಮ್ಮ, ದ್ರಾಕ್ಷಾಯಣಮ್ಮ, ರಾಜೇಶ್ವರಿ, ಶುಭಮಂಗಳ, ಮಂಗಳಮ್ಮ, ಜಿ.ರಾಕೇಶ್, ಗೋವಿಂದ ಹಾಲೇಕಲ್ಲು, ಮಂಜುನಾಥ್ ಕೆ.ಎಂ., ಹರೀಶ್ ಹೆಚ್. ಮತ್ತಿತರರಿದ್ದರು.