ಹರಿಹರ ಮರ್ಚೆಂಟ್ಸ್ ಸೌಹಾರ್ದ ಕೋ-ಆಪರೇಟಿವ್ ಅಧ್ಯಕ್ಷರಾಗಿ ನಾಗರಾಜ್, ಉಪಾಧ್ಯಕ್ಷರಾಗಿ ಪ್ರವೀಣ್ ಹೆಗಡೆ

ಹರಿಹರ, ಅ. 2- ಹರಿಹರ ಮರ್ಚೆಂಟ್ಸ್ ಸೌಹಾರ್ದ ಕೋ ಆಪ್ ನಿಯಮಿತದ ಅಧ್ಯಕ್ಷರಾಗಿ ಹೆಚ್.ಎಂ. ನಾಗರಾಜ್, ಉಪಾಧ್ಯಕ್ಷರಾಗಿ ಡಾ. ಪ್ರವೀಣ್ ಹೆಗಡೆ ಆಯ್ಕೆಯಾಗಿದ್ದಾರೆ.

ನಾಗರಾಜ್ ಅವರು ಈ ಹಿಂದಿನ ಅವಧಿ ಯಲ್ಲಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. 

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ನೂತನ ಅಧ್ಯಕ್ಷ ನಾಗರಾಜ್, 2015 ರಲ್ಲಿ ಕೇವಲ 6 ಲಕ್ಷ ರೂ.ಗಳ ಬಂಡವಾಳದೊಂದಿಗೆ ಪ್ರಾರಂಭಗೊಂಡ ಹರಿಹರ ಮರ್ಚೆಂಟ್ಸ್ ಸೌಹಾರ್ದ ಕೋ ಆಪ್ ನಿಯಮಿತ ಸಂಸ್ಥೆಯು ಇಂದು 2. 50 ಕೋಟಿ ರೂ. ವ್ಯವಹಾರ ಮಾಡುವ ಮೂಲಕ ಪ್ರಗತಿಯತ್ತ ದಾಪುಗಾಲು ಹಾಕುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರುಗಳಾದ ಜಿ.ಕೆ. ವೀರಣ್ಣ, ಹೆಚ್.ಎಸ್. ಮಂಜುನಾಥ್, ಜಿ. ನಂಜಪ್ಪ, ಹೆಚ್.ವಿ. ಸುಜಯ್,  ಮೈಯೂರ್ ಹೆಚ್.ಎನ್, ಡಾ. ಸೀಮಾ ನಾಗರಾಜ್, ರಾಘವೇಂದ್ರ ಬೊಂಗಾಳೆ, ಸುನೀತಾ ಪಿ. ಪರಶುರಾಮ್ ಬದಿ, ನಾಗರತ್ನ ಜಿ, ಕೆ. ಮಂಜುಳಾ ಪ್ರಸಾದ್ ಹಾಗೂ ಸಿಬ್ಬಂದಿ ವರ್ಗದವರು, ಕಾರ್ಯದರ್ಶಿ ಶಿವನಗೌಡ್ರು, ಬೀರಪ್ಪ, ಕರಿಬಸಪ್ಪ, ಶ್ರೀನಾಥ್, ವೀರೇಶ್ ನೀಲಗುಂದ ಹಾಗು ಇತರರು ಹಾಜರಿದ್ದರು.

ಸಂಘದ ಕಚೇರಿಯಲ್ಲಿ ಮೊನ್ನೆ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಹೆಚ್. ಮಂಜಪ್ಪ ಚುನಾವಣಾಧಿಕಾರಿಯಾಗಿದ್ದರು.

error: Content is protected !!